ವಿಜಯನಗರ ಬಾಲ್ಕ್‌ಮೂಲಕ ಕನ್ನಡಿಗ ಉದ್ಯೋಗಾಂಕ್ಷಿಗಳಿಗೆ ಇಂದು ಅಮೂಲ್ಯ ವಿಷಯದೊಂದಿಗೆ ಬಂದಿದ್ದೇವೆ. ಬಹುತೇಕರಲ್ಲಿ ಫೇಸ್‌ಬುಕ್, ವಾಟ್ಸಪ್ ಖಾತೆ ಇರಬಹುದು. ಆದರೆ, ಕೆಲವರು ಮಾತ್ರ ಲಿಂಕ್ಡ್‌ಇನ್ ಖಾತೆ ಹೊಂದಿರುತ್ತಾರೆ. ವೃತ್ತಿಪರ ಸೋಷಿಯಲ್ ನೆಟ್‌ವರ್ಕಿಂಗ್ ತಾಣವಾದ ಲಿಂಕ್ಡ್‌ಇನ್ ಬಳಕೆ ಇಂದು ವಿದ್ಯಾರ್ಥಿಗಳಿಗೆ ಅವಶ್ಯವೂ ಹೌದು, ಅನಿವಾರ್ಯವೂ ಹೌದು.
ಇದೇ ಕಾರಣಕ್ಕೆ ಸಾಕಷ್ಟು ಜನರು ಲಿಂಕ್ಡ್‌ಇನ್ ಖಾತೆ ರಚಿಸುತ್ತಾರೆ. ಆದರೆ, ಬಹುತೇಕ ಖಾತೆಗಳು ಕಾಟಾಚಾರಕ್ಕೆ ರಚಿಸಿದಂತೆ ಇರುತ್ತದೆ. ನಿಮಗೆ ಉದ್ಯೋಗ ನೀಡಲಿರುವ ಕಂಪನಿಯ ಗಮನ ಸೆಳೆಯುವಂತೆ ಇರಬೇಕು ನಿಮ್ಮ ಲಿಂಕ್ಡ್‌ಇನ್ ಪ್ರೊಫೈಲ್. ಇದಕ್ಕಾಗಿ ವಿಜಯನಗರ ಬಾಲ್ಕ್‌ನ ಈ ಮುಂದಿನ ಟಿಪ್ಸ್‌ಗಳನ್ನುಅನುಸರಿಸಿರಿ.
ಅವಸರದಲ್ಲಿ ಪ್ರೊಫೈಲ್ ರಚನೆ ಬೇಡ
ನೀವು ಕಷ್ಟಪಟ್ಟು ಹಲವು ವರ್ಷ ವಿದ್ಯಾಭ್ಯಾಸ ಮಾಡಿರುವಿರಿ. ಆದರೆ, ನಿಮ್ಮ ಕರಿಯರ್‌ನಲ್ಲಿ ಪ್ರಮುಖ ಪಾತ್ರವಹಿಸುವ ವೃತ್ತಿಪರ ತಾಣವಾದ ಲಿಂಕ್ಡ್‌ಇನ್‌ನಲ್ಲಿ ಪ್ರೊಫೈಲ್ ರಚನೆಗೆ ಮಾತ್ರ ಯಾಕೆ ಕೆಲವೇ ನಿಮಿಷ ತೆಗೆದುಕೊಳ್ಳುವಿರಿ? ಎಚ್‌ಆರ್ ಮ್ಯಾನೇಜರ್‌ಗಳು ಅಥವಾ ಪ್ರತಿಷ್ಠಿತ ಕಂಪನಿಯ ಮುಖ್ಯಸ್ಥರ ಗಮನ ಸೆಳೆಯುವಂತೆ ನಿಮ್ಮ ಪ್ರೊಫೈಲ್ ಇರಲಿ. ಹೀಗಾಗಿ, ಲಿಂಕ್ಡ್‌ಇನ್ ಪ್ರೊಫೈಲ್ ರಚಿಸಲು ಕೆಲವು ದಿನ ತೆಗೆದುಕೊಳ್ಳಿ. ಅವಸರ ಮಾಡಬೇಡಿ ಪ್ಲೀಸ್.
ವೃತ್ತಿಪರ ಪ್ರೊಫೈಲ್ ಫೋಟೊ
ಫೇಸ್‌ಬುಕ್‌ನಲ್ಲಿರುವ ಫೋಟೊವನ್ನೇ ಲಿಂಕ್ಡ್‌ಇನ್ ಪ್ರೊಫೈಲಿಗೆ ಹಾಕಬೇಡಿ. ಸ್ಪಷ್ಟವಾದ, ಆತ್ಮೀಯವೆನಿಸುವ, ವೃತ್ತಿಪರವೆನಿಸುವ ಫೋಟೊವನ್ನು ಲಿಂಕ್ಡ್‍ಇನ್ಗೆ ಅಪ್‍ಲೋಡ್ ಮಾಡಿ. ನೀವು ಯಾವ ಕ್ಷೇತ್ರದಲ್ಲಿ ಕರಿಯರ್ ಬಯಸುವಿರೋ ಅಲ್ಲಿನ ಉದ್ಯೋಗಕ್ಕೆ ಸೂಕ್ತವೆನಿಸುವ ಫೋಟೊವಿದ್ದರೆ ಇನ್ನೂ ಉತ್ತಮ.
ಹೆಡ್‌ಲೈನ್ ಬರೆಯುವ ಕಲೆ
ಲಿಂಕ್ಡ್‌ಇನ್‌ನಲ್ಲಿ ಹೆಡ್‌ಲೈನ್ ಬರೆಯಲು ಒಂದು ಸ್ಥಳ ಇರುತ್ತದೆ. ಇಲ್ಲಿ ಏನು ಬರೆಯಬೇಕು, ಹೇಗೆ ಬರೆಯಬೇಕು ಎಂದು ಒಂದಿಷ್ಟು ಗೂಗಲ್ ಮಾಡಿ ನೋಡಿ.ನೀವು ಉದ್ಯೋಗ ಹುಡುಕಾಟ ನಡೆಸುತ್ತಿದ್ದರೆ ಅದು ಗೊತ್ತಾಗುವಂತೆ ಹೆಡ್‌ಲೈನ್ ಬರೆಯಿರಿ. ಅಂದರೆ, ಲುಕ್ಕಿಂಗ್ ಫಾರ್ ಅನಿಮೇಷನ್ ಜಾಬ್… ಎಂದು ಬರೆಯಬಹುದು.
ರೆಸ್ಯೂಂನಂತೆ ಇರಲಿ ಲಿಂಕ್ಡ್‌ಇನ್ ಪ್ರೊಫೈಲ್
ಫೇಸ್‌ಬುಕ್, ಟ್ವಿಟರ್ ಅಥವಾ ಇನ್ನಿತರ ಸಾಮಾಜಿಕ ತಾಣಗಳ ಪ್ರೊಫೈಲಿಗೂ ಲಿಂಕ್ಡ್‌ಇನ್ ಪ್ರೊಫೈಲಿಗೂ ವ್ಯತ್ಯಾಸವಿರುತ್ತದೆ. ಉದ್ಯೋಗಕ್ಕೆ ಸಲ್ಲಿಸುವ ಅರ್ಜಿ ಅಥವಾ ರೆಸ್ಯೂಂ ಅಥವಾ ಕರಿಕ್ಯುಲಮ್ ವಿಟೇ ರೀತಿ ನಿಮ್ಮ ಲಿಂಕ್ಡ್‌ಇನ್ ಪ್ರೊಫೈಲ್ ಇರಬೇಕು. ಅಂದರೆ, ರೆಸ್ಯೂಂನಲ್ಲಿ ಕಂಪನಿಯೊಂದನ್ನು ಉದ್ದೇಶಿಸಿ ಬರೆದಂತೆ ಬರೆಯುವಿರಲ್ವ? ಅದೇ ರೀತಿ, ಲಿಂಕ್ಡ್‌ಇನ್ ಪ್ರೊಫೈಲಿನಲ್ಲಿಯೂ ನೀವು ಉದ್ಯೋಗದಾತರನ್ನು ಉಲ್ಲೇಖಿಸಿ ಬರೆದಂತೆ ಇರಬೇಕು.
ಬರೆಯಿರಿ, ಇನ್ನೂ ಬರೆಯಿರಿ
ಅಯ್ಯೋ, ಎಷ್ಟು ವಿಭಾಗಗಳು ಇವೆ, ಇಲ್ಲೆಲ್ಲ ಯಾರು ಬರೆಯುತ್ತಾರೆ ಎಂದು ಉದಾಸಿನ ಮಾಡಬೇಡಿ. ಉದಾಹರಣೆಗೆ ಉದ್ಯೊಗದ ಡಿಸ್ಕ್ರ್‌ಪ್ಷನ್ ಬರೆಯುವಲ್ಲಿ ನಿಖರವಾಗಿ, ಸ್ಪಷ್ಟವಾಗಿ, ವಿವರವಾಗಿ ಮತ್ತು ಅತ್ಯುತ್ತಮವಾಗಿ ನಿಮ್ಮ ಹುದ್ದೆಯ ಬಗ್ಗೆ, ಉದ್ಯೋಗದ ಬಗ್ಗೆ ಬರೆಯಿರಿ. ಸಮ್ಮರಿ ಬರೆಯುವ ಸ್ಥಳವನ್ನು ವ್ಯರ್ಥ ಮಾಡುವುದು ಬೇಡ. ನಿಮ್ಮಲ್ಲಿರುವ ಸ್ಕಿಲ್‌ಗಳು, ಎಜುಕೇಷನ್, ಅಚೀವ್‌ಮೆಂಟ್ಸ್‌ಗಳನ್ನು ಬರೆಯಿರಿ. ಅಗತ್ಯವಿರುವಲ್ಲಿ ಸಂಖ್ಯೆಗಳನ್ನು ಬಳಸಿ ನಿಮ್ಮ ಬಗ್ಗೆ ಬರೆಯಿರಿ. ಬುಲೆಟ್‍ಗಳನ್ನೂ ಬಳಸಬಹುದು. ಉದ್ಯೋಗದಾತರು ಇದನ್ನೆಲ್ಲ ಓದಿಯೇ ಓದುತ್ತಾರೆ ಎಂದುಕೊಂಡು ಬರೆಯಿರಿ.
ಲಿಂಕ್ಡ್‌ಇನ್‌ನಲ್ಲಿ ಮಲ್ಟಿಮೀಡಿಯಾ ಬಳಕೆ ಮಾಡಿರಿ
ಉದ್ಯೋಗಕ್ಕೆ ಸಂಬಂಧಪಟ್ಟ ನಿಮ್ಮ ಚಿತ್ರಗಳನ್ನು ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ಬಳಸಬಹುದು. ನೀವು ಮಾಡಿರುವ ಸರ್ಟಿಫಿಕೇಷನ್ ಕೋರ್ಸ್‌ಗಳು, (ನೀವು ವಿಜಯನಗರ ಬಾಲ್ಕ್‌ನಲ್ಲಿ ಏನಾದರೂ ಸರ್ಟಿಫಿಕೇಷನ್, ಡಿಪ್ಲೊಮಾ ಅಥವಾ ಇನ್ಯಾವುದೋ ಅಲ್ಪಾವಧಿ ಅಥವಾ ದೀರ್ಘಾವಧಿ ಕೋರ್ಸ್ ಮಾಡಿದ್ದರೆ ತಪ್ಪದೆ ಅದನ್ನು ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ಹಾಕಿರಿ). ನೀವು ಮಾಡಿರುವ ಪ್ರಾಜೆಕ್ಟ್‌ಗಳ ವಿವರವನ್ನೂ ಬರೆಯಿರಿ. ಲಿಂಕ್ಡ್‌ಇನ್ ಬ್ಲಾಗ್ ಪೋಸ್ಟ್ ವಿಭಾಗದಲ್ಲಿ ನಿಮಗೆ ಪರಿಣತಿ ಇರುವ ವಿಷಯಗಳ ಕುರಿತು ಬ್ಲಾಗ್ ಲೇಖನಗಳನ್ನು ಬರೆಯುತ್ತ ಇರಿ.
ಯುಆರ್‌ಎಲ್ ಎಡಿಟ್ ಮಾಡಿ
ನಿಮ್ಮ ಹೆಸರಿನ ಯುಆರ್‌ಎಲ್ (ಡಬ್ಲ್ಯುಡಬ್ಲ್ಯುಡಬ್ಲ್ಯು.ಲಿಂಕ್ಡ್‌ಇನ್.ಕಾಂ/ನಿಮ್ಮ ಹೆಸರು) ಉದ್ದವಾಗಿದ್ದರೆ ಅದನ್ನುಸಣ್ಣದಾಗಿ ಮಾಡಿ. ಯುಆರ್‌ಎಲ್ ಎಡಿಟ್ ಮಾಡುವ ಆಯ್ಕೆಯೂ ಲಿಂಕ್ಡ್‌ಇನ್‌ನಲ್ಲಿದೆ.
ಅಚೀವ್‌ಮೆಂಟ್‌ಗಳನ್ನು ಬರೆಯಿರಿ
ಈಗಿನ ಅಟೋಮೇಷನ್ ಕಾಲದಲ್ಲಿ ಲಿಂಕ್ಡ್‌ಇನ್‌ನಲ್ಲಿರುವ ಸಾವಿರಾರು ಪ್ರೊಫೈಲ್‌ಗಳನ್ನು ಆಟೋಮೇಷನ್ ಟೂಲ್‌ಗಳ ಮೂಲಕ ಶೋಧನೆ ಮಾಡಲಾಗುತ್ತದೆ. ನಿಮ್ಮ ಖಾತೆಗಳನ್ನು ನಿಮ್ಮ ಸಾಧನೆಗಳು, ನಿಮ್ಮಲ್ಲಿರುವ ಕೌಶಲಕ್ಕೆ ತಕ್ಕಂತೆ ವಿಂಗಡನೆ ಮಾಡಲಾಗುತ್ತದೆ. ಹೀಗಾಗಿ, ನಿಮ್ಮ ಅಚೀವ್‌ಮೆಂಟ್‌ಗಳು ಕಂಪನಿಗಳಿಗೆ ಸುಲಭವಾಗಿ ಕಾಣಿಸಿಕೊಳ್ಳುವಂತೆ ಇರಲಿ.
ಪ್ರಸಕ್ತ ಉದ್ಯೋಗದ ಮಾಹಿತಿ
ನಿಮಗೆ ಉದ್ಯೋಗ ಇರಬಹುದು. ಇಲ್ಲದೆಯೂ ಇರಬಹುದು. ನೀವು ವಿದ್ಯಾರ್ಥಿಯಾಗಿದ್ದರೆ ವಿದ್ಯಾರ್ಥಿಯೆಂದು ನಮೂದಿಸಿ. ಇಂಟರ್ನ್‌ಶಿಪ್ ಮಾಡುತ್ತಿದ್ದರೆ ಇಂಟರ್ನಿಯೆಂದು ತಿಳಿಸಿ. ಎಲ್ಲಾದರೂ ನಿರುದ್ಯೊಗಿಯಾಗಿದ್ದರೆ ನಿರುದ್ಯೋಗಿಯೆಂದು ಮಾತ್ರ ಬರೆಯಬೇಡಿ. ನಿಮ್ಮ ಹಿಂದಿನ ಉದ್ಯೋಗವೇ ಈಗಿನ ಉದ್ಯೋಗವಾಗಿ ಇರಲಿ. ಅದನ್ನು ಬದಲಿಸಲು ಹೋಗಬೇಡಿ. ನೀವು ಉದ್ಯೋಗವಿಲ್ಲದೆ ತುಂಬಾ ದಿನಕಳೆದಿದೆ ಎಂದಾದರೆ ನಿಮ್ಮ ಪ್ರೊಫೈಲ್ ತಿರಸ್ಕರಿಸುವ ಸಾಧ್ಯತೆ ಹೆಚ್ಚಿರುತ್ತದೆ. ಹೊಸ ಉದ್ಯೋಗ ದೊರಕುವ ತನಕ ಹಳೆಯ ಕೆಲಸ ಬಿಟ್ಟ ಮಾಹಿತಿ ಬರೆಯುವುದುಬೇಡ.
ಲಿಂಕ್ಡ್‌ಇನ್ ಕಮ್ಯುನಿಟಿ ಅಥವಾ ಗ್ರೂಪ್‌ಗಳಿಗೆ ಸೇರಿ
ನಿಮ್ಮ ಉದ್ಯೋಗ ಕ್ಷೇತ್ರಕ್ಕೆ, ನಿಮ್ಮಲ್ಲಿರುವ ಸ್ಕಿಲ್‌ಗಳಿಗೆ ಸಂಬಂಧಪಟ್ಟ ಗ್ರೂಪ್‌ಗಳು ಲಿಂಕ್ಡ್‌ಇನ್‌ನಲ್ಲಿ ಇರುತ್ತವೆ. ಇವುಗಳಿಗೆ ಸೇರಿರಿ. ಇದರಿಂದ ನೀವು ಅಪ್‌ಡೇಟ್ ಆಗುತ್ತ ಇರುವಿರಿ.
ಅಪ್‌ಡೇಟ್ ಮಾಡುತ್ತ ಇರಿ
ಒಂದೆರಡು ದಿನ ಕಷ್ಟಪಟ್ಟು ಪ್ರೊಫೈಲ್ ರಚಿಸಿ ಸುಮ್ಮನಾಗಬೇಡಿ. ಪ್ರತಿದಿನ ಲಿಂಕ್ಡ್‌ಇನ್‌ಗೆ ಹೋಗಿ (ನೀವು ಫೇಸ್‌ಬುಕ್‌ಗೆ ಹೋಗುವಿರಲ್ವ? ). ನಿಮ್ಮ ಬಗ್ಗೆ ಮಾಹಿತಿ ಅಪ್‌ಡೇಟ್ ಮಾಡುತ್ತ ಇರಿ. ಅಲ್ಲಿರುವ ಸ್ಟೇಟಸ್‌ಗಳಿಗೆ ಲೈಕ್ ನೀಡುತ್ತ, ಕಮೆಂಟ್ ಮಾಡುತ್ತ ಇರಿ. ಜೊತೆಗೆ, ನೀವೂ ಏನಾದರೂ ಅಲ್ಲಿ ಬರೆಯಿರಿ. ಇದು ಉದ್ಯೊಗದಾತರ ಗಮನ ಸೆಳೆಯುತ್ತದೆ ಮತ್ತು ನಿಮಗೆ ಉದ್ಯೋಗ ದೊರಕಿಸಿ ಕೊಡುವ ಸಾಧ್ಯತೆ ಹೆಚ್ಚಿಸುತ್ತದೆ.
ನಿಮ್ಮ ಸಂಪರ್ಕ ಮಾಹಿತಿ ಸ್ಪಷ್ಟವಾಗಿರಲಿ
ಉದ್ಯೋಗದಾತರಿಗೆ ನೀವು ಇಷ್ಟವಾದರೂ ನಿಮ್ಮ ಸಂಪರ್ಕ ಮಾಹಿತಿ ಹುಡುಕುವುದು ಅವರಿಗೆ ಕಷ್ಟವಾಗಬಹುದು. ಇದಕ್ಕಾಗಿ ನಿಮ್ಮ ಇಮೇಲ್ ವಿಳಾಸ, ಫೋನ್ ಸಂಖ್ಯೆ ಇತ್ಯಾದಿಗಳನ್ನು ಸರಿಯಾಗಿ ಬರೆಯಿರಿ. ಜೊತೆಗೆ ನಿಮ್ಮ ಸೋಷಿಯಲ್ ಮೀಡಿಯಾ ಲಿಂಕ್‌ಗಳನ್ನೂ ಹಾಕಿರಿ.
ಹೊಸ ಹೊಸ ಕೊರ್ಸ್‌ಗಳನ್ನು ಕಲಿಯಿರಿ ಮತ್ತು ಅದನ್ನು ಲಿಂಕ್ಡ್‌ಇನ್‌ನಲ್ಲಿ ಅಪ್‌ಡೇಟ್ ಮಾಡುತ್ತ ಇರಿ
ಎಸ್‌ಇಒ ಕೋರ್ಸ್ ಕಲಿತಿರಿ ಎಂದಿರಲಿ. ಅದರ ಸರ್ಟಿಫಿಕೇಷನ್ ಚಿತ್ರ ಅಥವಾ ಲಿಂಕ್ ಅನ್ನು ಲಿಂಕ್ಡ್‌ಇನ್‌ನಲ್ಲಿ ಹಾಕಿರಿ. ನೆನಪಿಡಿ, ನೀವು ಕೇವಲ ಪದವಿ ಅಥವಾ ಡಿಪ್ಲೊಮಾ ಕಲಿತರೆ ಉದ್ಯೋಗದಾತರಿಗೆ ಸಾಕಾಗದು. ನಿಮ್ಮಲ್ಲಿ ಹೆಚ್ಚುವರಿ ಕೌಶಲ ಅಥವಾ ಸರ್ಟಿಫಿಕೇಷನ್ ಇದ್ದರೆ ಮಾತ್ರ ಇತರರಿಗಿಂತ ನಿಮಗೆ ಉದ್ಯೋಗ ದೊರಕುವ ಸಾಧ್ಯತೆ ಹೆಚ್ಚಿರುತ್ತದೆ. ಭವಿಷ್ಯದ ಉದ್ಯೊಗಕ್ಕೆ ಪೂರಕವಾದ ವಿವಿಧ ಕೋರ್ಸ್‌ಗಳನ್ನು ವಿಜಯನಗರ ಬಾಲ್ಕ್ ಸಂಸ್ಥೆಯಲ್ಲಿ ಕಲಿಯಬಹುದು. ಇದಕ್ಕಾಗಿ ಈಗಲೇ ಈ ಕೆಳಗಿನ ವಾಟ್ಸಪ್ ಬಟನ್ ಕ್ಲಿಕ್ ಮಾಡಿ, ಮಾಹಿತಿ ಪಡೆಯಿರಿ.