ಕ್ರಿಯಾಶೀಲರಿಗೆ ಎಲ್ಲೆಲ್ಲೂ ಬೇಡಿಕೆ. ನಿಮ್ಮಲ್ಲಿ ಇರುವಂತಹ ಕ್ರಿಯೆಟಿವಿಟಿಯನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ಸಂಬಂಧಪಟ್ಟ ಕೌಶಲ್ಯಗಳನ್ನು ವೃದ್ಧಿಸಿಕೊಂಡು ನಿಮ್ಮ ಆಸಕ್ತಿಗೆ ಪೂರಕವಾದ ಉದ್ಯೋಗವನ್ನು ಪಡೆಯಬಹುದಾಗಿದೆ. ಬಣ್ಣದ ಆಯ್ಕೆ, ಉತ್ತಮ ಲೇಔಟ್ ರಚನೆ, ಜನರನ್ನು ಆಕರ್ಷಿಸುವಂತಹ ವಿನ್ಯಾಸ ಮಾಡುವ ಸಾಮಥ್ರ್ಯದ ಜೊತೆಗೆ ಕೋಡಿಂಗ್, ಮಲ್ಟಿಮೀಡಿಯಾ ಮಾರ್ಕೆಟಿಂಗ್ ಇತ್ಯಾದಿಗಳಲ್ಲಿ ಪರಿಣತಿ ಇದ್ದರೆ ಉತ್ತಮ ಅವಕಾಶ ಪಡೆದುಕೊಳ್ಳಬಹುದು. ಕ್ರಿಯೆಟಿವಿಟಿ ಇರುವವರಿಗೆ ಸೂಕ್ತವಾದ ವಿವಿಧ ಉದ್ಯೋಗಗಳನ್ನು ವಿಜಯನಗರ ಬಾಲ್ಕ್ ಓದುಗರಿಗೆ ಇಲ್ಲಿ ನೀಡಲಾಗಿದೆ.
ವೆಬ್ ಡೆವಲಪರ್ ಮತ್ತು ವೆಬ್ ಡಿಸೈನರ್
ವೆಬ್ ವಿನ್ಯಾಸವೆನ್ನುವುದು ಕ್ರಿಯೆಟಿವಿಟಿ ಬಳಸುವ ಕೆಲಸ. ಕೇವಲ ಕೋಡಿಂಗ್ ಗೊತ್ತಿದ್ದರೆ ಸಾಲದು. ಕಂಪನಿ ಮತ್ತು ಕಂಪನಿಯ ಗ್ರಾಹಕರನ್ನು ದೃಷ್ಟಿಯಲ್ಲಿಟ್ಟುಕೊಂಡು ವೆಬ್‍ಸೈಟ್ ನಿರ್ಮಿಸುವುದು ವೆಬ್ ಡೆವಲಪರ್ ಕೆಲಸ. ವೆಬ್‍ಸೈಟ್‍ಗೆ ಕೋಡ್ ಬರೆಯುವ ಕೆಲಸ ವೆಬ್ ಡೆವಲಪರ್‍ನದ್ದು. ವೆಬ್‍ಸೈಟ್‍ನ ವಿನ್ಯಾಸ ಮಾಡುವ ಕೆಲಸ ವೆಬ್ ಡಿಸೈನರ್‍ನದ್ದು. ಇಲ್ಲಿ ತಾಂತ್ರಿಕ ಜ್ಞಾನದ ಜೊತೆಗೆ ಕ್ರಿಯೆಟಿವಿಟಿಯೂ ಅತ್ಯಗತ್ಯವಾಗಿ ಬೇಕಾದ ಅಂಶವಾಗಿದೆ.
ವೆಬ್ ಡಿಸೈನ್ ಅಥವಾ ಡೆವಲಪ್ ಮಾಡುವಾಗ ಫೋಟೊಶಾಪ್, ಕೋರಲ್ ಡ್ರಾ, ಇಂಡಿಸೈನ್ ಇತ್ಯಾದಿಗಳನ್ನು ಬಳಸಿಕೊಂಡು ವೆಬ್‌ಸೈಟ್ ಅನ್ನು ಅಂದಗೊಳಿಸಬೇಕಾಗುತ್ತದೆ. ಎಚ್‍ಟಿಎಂಎಲ್, ಸಿಎಸ್‍ಎಸ್, ಜಾವಾ, ಪಿಎಚ್‍ಪಿ, ಲೇಔಟ್, ಸೈಟ್ ಮ್ಯಾಪಿಂಗ್, ಗ್ರಾಫಿಕ್ ಡಿಸೈನ್, ಇಮೇಜ್ ಎಡಿಟಿಂಗ್ ಇತ್ಯಾದಿ ಸ್ಕಿಲ್‌ಗಳು ಗೊತ್ತಿದ್ದರೆ ನೀವು ಈ ಕ್ಷೇತ್ರದಲ್ಲಿ ಉತ್ತಮ ಅವಕಾಶ ಪಡೆಯಬಹುದು. ಈ ಕೋರ್ಸ್‌ಗಳನ್ನು ವಿಜಯನಗರ ಬಾಲ್ಕ್‌ನಲ್ಲಿ ವಿನಾಯಿತಿ ದರದಲ್ಲಿ ಕಲಿಯಬಹುದು. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.
ವಿಷುಯಲ್ ಡಿಸೈನರ್
ಲೊಗೊ ಇತ್ಯಾದಿಗಳನ್ನು ವಿನ್ಯಾಸ ಮಾಡುವುದು ವಿಷುಯಲ್ ವಿನ್ಯಾಸಕರ ಕೆಲಸವಾಗಿದೆ. ಲೊಗೊ ವಿನ್ಯಾಸವೆನ್ನುವುದು ನೋಡಲು ಅತ್ಯಂತ ಸಣ್ಣ ವಿಷಯದಂತೆ ಕಾಣಬಹುದು. ಆದರೆ, ಇದು ಅತ್ಯಧಿಕ ಕ್ರಿಯೆಟಿವಿಟಿ ಬಯಸುವ ಕೆಲಸವಾಗಿದೆ. ಲೊಗೊ ಮಾತ್ರವಲ್ಲದೆ ಪ್ರಾಡಕ್ಟ್ ಡಿಸೈನ್, ಪ್ರಾಡಕ್ಟ್‌ಗಳಿಗೆ ಸಂಬಂಧಪಟ್ಟಂತೆ ಬ್ರೋಚರ್‌ಗಳನ್ನು ವಿನ್ಯಾಸ ಮಾಡುವುದು ಸಹ ವಿಷುಯಲ್ ಡಿಸೈನರ್ ಕೆಲಸವಾಗಿದೆ. ಆರ್ಟ್, ಗ್ರಾಫಿಕ್ ಡಿಸೈನ್, ಮಾರ್ಕೆಟಿಂಗ್, ಸೇಲ್ಸ್, ಟೈಪೊಗ್ರಫಿ ಇತ್ಯಾದಿ ಸ್ಕಿಲ್‌ಗಳು ಇದ್ದವರು ವಿಷುಯಲ್ ಡಿಸೈನರ್‌ಗಳಾಗಬಹುದು.
ಯುಐ ಡಿಸೈನರ್ ಮತ್ತು ಯುಎಕ್ಸ್ ಡಿಸೈನರ್
ಈಗಿನ ಡಿಜಿಟಲ್ ಜಗತ್ತಿನಲ್ಲಿ ಯೂಸರ್ ಇಂಟರ್‌ಫೇಸ್ ಮತ್ತು ಯೂಸರ್ ಎಕ್ಸ್‌ಫೀರಿಯನ್ಸ್ ಅತ್ಯಂತ ಅಗತ್ಯವಾದದ್ದು. ಕೆಲವೊಂದು ವೆಬ್‌ಸೈಟ್‌ಗಳು ಯೂಸರ್ ಫ್ರೆಂಡ್ಲಿ ಆಗಿರುತ್ತವೆ. ಅದರ ಯುಐ/ಯುಎಕ್ಸ್ ಡಿಸೈನ್ ಉತ್ತಮವಾಗಿರುವುದು ಅದಕ್ಕೆ ಕಾರಣವಾಗಿದೆ. ಕೆಲವೊಂದು ವೆಬ್‌ಸೈಟ್‌ಗಳಿಗೆ ಪ್ರವೇಶಿಸಿದ ಬಳಿಕ ಮುಂದೆ ಎಲ್ಲಿಗೆ ಹೋಗಬೇಕು ಎಂದು ನಿಮಗೆ ಗೊಂದಲವಾಗಬಹುದು. ಅದು ಬಳಕೆದಾರ ಸ್ನೇಹಿ ವೆಬ್ಸೈಟ್ ಆಗಿರುವುದಿಲ್ಲ. ಇದೇ ಕಾರಣಕ್ಕೆ ಪ್ರತಿಯೊಂದು ಕಂಪನಿಗಳು ವೆಬ್‌ನ ಯುಎಕ್ಸ್ ಮತ್ತು ಯುಐ ಡೆವಲಪ್‌ಮೆಂಟ್‌ಗೆ ಹೆಚ್ಚಿನ ಆದ್ಯತೆ ನೀಡುತ್ತವೆ. ನಿಮಲ್ಲಿ ಲೇಔಟ್, ಇಂಟರ್‍ಫೇಸಿಂಗ್, ಕಮ್ಯುನಿಕೇಷನ್ ಸ್ಕಿಲ್ಸ್ ಇದ್ದರೆ ಈ ಕ್ಷೇತ್ರದಲ್ಲಿ ಕರಿಯರ್ ರೂಪಿಸಿಕೊಳ್ಳಬಹುದು.
ಅಗ್ಯುಮೆಂಟೆಡ್ ರಿಯಾಲ್ಟಿ ಡಿಸೈನರ್
ಈ ಕ್ಷೇತ್ರವನ್ನು ಅರ್ಥಮಾಡಿಕೊಡಲು ಫೋಕ್‌ಮೆನ್ ಗೋ ಉದಾಹರಣೆಯೇ ಸಾಕು. ಈ ಡಿಜಿಟಲ್ ಗೇಮ್ ನಿಮ್ಮನ್ನು ಬಾಹ್ಯ ಜಗತ್ತಿಗೆ ಕೊಂಡೊಯ್ಯುತ್ತದೆ. ಆಗ್ಯುಮೆಂಟೆಡ್ ರಿಯಾಲ್ಟಿ ಕ್ಷೇತ್ರವು ವೇಗವಾಗಿ ಪ್ರಗತಿ ಕಾಣುತ್ತಿದೆ. ನಿಮ್ಮಲ್ಲಿ ಪ್ರೋಗ್ರಾಮಿಂಗ್, ಇಂಟರ್‍ಫೇಸಿಂಗ್, ಲೇಔಟ್, ಗ್ರಾಫಿಕ್ ಡಿಸೈನ್, ಅನಿಮೇಷನ್, ಫೋಟೊಗ್ರಫಿ, ಜಿಯೊಗ್ರಫಿ, ಹಿಸ್ಟರಿ, ಡಿಜಿಟಲ್ ಆರ್ಟ್ ಇತ್ಯಾದಿ ಸ್ಕಿಲ್‌ಗಳಿದ್ದರೆ ಈ ಕ್ಷೇತ್ರದಲ್ಲಿ ಕರಿಯರ್ ರೂಪಿಸಿಕೊಳ್ಳಬಹುದು.
ಗೇಮ್ ಡಿಸೈನರ್- ಆಟ ವಿನ್ಯಾಸ ಮಾಡುವ ಆಟ
ಮಕ್ಕಳು ಮಾತ್ರವಲ್ಲದೆ ದೊಡ್ಡವರನ್ನು ಡಿಜಿಟಲ್ ಗೇಮ್‌ಗಳು ಆಕರ್ಷಿಸುತ್ತವೆ. ಸಮಯ ಸಿಕ್ಕಾಗ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಗೇಮ್ ಆಡುವುದು ಎಲ್ಲರ ಅಭ್ಯಾಸ. ವಿಡಿಯೋ ಗೇಮ್‍ಗಳಿಗೆ ಈಗಲೂ ಅತ್ಯುತ್ತಮ ಬೇಡಿಕೆಯಿದೆ. ಸ್ಮಾರ್ಟ್‌ಫೋನ್ ಗೇಮಿಂಗ್ ಕನ್ಸೋಲ್, ಡೆಸ್ಕ್‍ಟಾಪ್ ಕಂಪ್ಯೂಟರ್ ಇತ್ಯಾದಿಗಳಲ್ಲಿ ಇವುಗಳ ಬಳಕೆ ಹೆಚ್ಚುತ್ತಿದೆ. ಸೋಷಿಯಲ್ ಮೀಡಿಯಾಗಳಲ್ಲಿಯೂ ಗೇಮ್‍ಗಳ ಜನಪ್ರಿಯತೆ ಹಚ್ಚುತ್ತಿದೆ. ಗೇಮ್‍ನ ಕೋರ್ ವಿನ್ಯಾಸ ಮಾಡುವ ಜವಾಬ್ದಾರಿ ಗೇಮ್ ವಿನ್ಯಾಸಕರದ್ದು. ಗೇಮ್‍ಗೆ ಥೀಮ್, ನೀತಿಪುಸ್ತಕ, ಆಟದ ಪಾತ್ರದಾರಿಗಳು ಮತ್ತು ಆಟದ ರೀತಿ ರಿವಾಜು ಇತ್ಯಾದಿಗಳನ್ನು ಗೇಮ್ ವಿನ್ಯಾಸಕ ಸೃಷ್ಟಿಸಬೇಕು. ಮಲ್ಟಿಮೀಡಿಯಾ ಆರ್ಟ್, ಕತೆ ಹೇಳುವುದು, ಸಮಸ್ಯೆ ಬಗೆಹರಿಸುವುದು, ಬರವಣಿಗೆ ಇತ್ಯಾದಿ ಸ್ಕಿಲ್ಸ್ ನಿಮ್ಮಲ್ಲಿ ಇದ್ದರೆ ಈ ಕ್ಷೇತ್ರದಲ್ಲಿ ಅವಕಾಶ ಪಡೆಯಬಹುದು.
ಅನಿಮೇಷನ್ ಮತ್ತು ಮಲ್ಟಿಮೀಡಿಯಾ
ಅನಿಮೇಷನ್ ಮತ್ತು ಮಲ್ಟಿಮೀಡಿಯಾದಲ್ಲಿ ಈಗಲೂ ಉತ್ತಮ ಉದ್ಯೋಗಾವಕಾಶವಿದೆ. ಗ್ರಾಫಿಕ್ ಆರ್ಟ್ ಮತ್ತು ಕಂಪ್ಯೂಟರ್ ಅನಿಮೇಷನ್‍ಗಳಿಗೆ ಉತ್ತಮ ಬೇಡಿಕೆಯಿದೆ. ಗೇಮ್ಸ್‍ಗಳು, ಸಿನಿಮಾಗಳು, ಟೆಲಿವಿಷನ್ ಕಾರ್ಯಕ್ರಮಗಳು, ಜಾಹೀರಾತುಗಳು, ಕಾರ್ಪೊರೇಟ್ ವಿಡಿಯೊ ಸೇರಿದಂತೆ ವಿವಿಧೆಡೆ ವಿಷುಯಲ್ ಎಫೆಕ್ಟ್ ನೀಡುವ ಉದ್ಯೋಗಿಗಳ ಅವಶ್ಯಕತೆ ಇರುತ್ತದೆ. ನಿಮ್ಮಲ್ಲಿ ಮಲ್ಟಿಮೀಡಿಯಾ, ಡಿಜಿಟಲ್ ಆರ್ಟ್, ಕಂಪ್ಯೂಟರ್ ಅನಿಮೇಷನ್ ಸ್ಕಿಲ್ಸ್ ಇದ್ದರೆ ಈ ಕ್ಷೇತ್ರದಲ್ಲಿ ಅವಕಾಶ ಪಡೆದು ಕೈತುಂಬಾ ವೇತನ ಪಡೆಯಬಹುದು.
ಮೊಬೈಲ್ ಡಿಸೈನರ್, ಆಪ್ ಡಿಸೈನರ್
ಇದು ಕೇವಲ ಮೊಬೈಲ್ ವಿನ್ಯಾಸಕ್ಕೆ ಸಂಬಂ`Àಪಟ್ಟದಲ್ಲ. ಸ್ಮಾರ್ಟ್‍ಫೋನ್, ಟ್ಯಾಬ್ಲೆಟ್ ಮತ್ತು ಇತರ ಗ್ಯಾಡ್ಜೆಟ್‌ಗಳಿಗೆ ಅಪ್ಲಿಕೇಷನ್‌ಗಳನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿ ಇವರದ್ದು. ಗ್ರಾಹಕರು ಬಯಸುವಂತೆ ಸಣ್ಣ, ತೆಳ್ಳಗಿನ ಗಾತ್ರದ ಸ್ಮಾರ್ಟ್‌ಫೋನ್ ವಿನ್ಯಾಸ ಮಾಡುವುದು, ಸಣ್ಣ ಸ್ಮಾರ್ಟ್‍ಫೋನ್‌ನಲ್ಲಿ ಅನನ್ಯ ತಂತ್ರಜ್ಞಾನಗಳನ್ನು ತುಂಬುವುದು ಇವರ ಕೆಲಸ. ನಿಮ್ಮಲ್ಲಿ ಮೊಬೈಲ್ ಅಪರೇಟಿಂಗ್ ಸಿಸ್ಟಮ್‍ಗಳ ಪರಿಣತಿ, ಲೇಔಟ್, ಇಂಟರ್‍ಫೇಸಿಂಗ್, ಟಚ್ ಸ್ಕ್ರೀನ್ ಇಂಟಿಗ್ರೇಷನ್, ಡೇಟಾ ಮ್ಯಾನೇಜ್‍ಮೆಂಟ್ ಮತ್ತು ಅನಾಲಿಸಿಸ್ ಇತ್ಯಾದಿ ಸ್ಕಿಲ್ಸ್ ಇದ್ದರೆ ಈ ಕ್ಷೇತ್ರದಲ್ಲಿ ಅವಕಾಶ ಪಡೆದುಕೊಳ್ಳಬಹುದು.
ಪ್ರಾಡಕ್ಟ್/ಪ್ಯಾಕೇಜಿಂಗ್ ಡಿಸೈನರ್
ಈಗಿನ ಆನ್‍ಲೈನ್ ಶಾಪಿಂಗ್‍ನಲ್ಲಿ ಉತ್ಪನ್ನಗಳನ್ನು ಪ್ಯಾಕೇಜ್ ಮಾಡುವುದು ದೊಡ್ಡ ತಲೆನೋವು. ಆದರೆ, ಪ್ಯಾಕೇಜ್ ಅನ್ನು ವಿನೂತನವಾಗಿ ಮತ್ತು ಆಕರ್ಷಕವಾಗಿ ಮಾಡುವುದು ಕಂಪನಿಯ ಬ್ರಾಂಡ್ ವ್ಯಾಲ್ಯೂ ಹೆಚ್ಚಿಸುತ್ತದೆ. ನೀವು ಖರೀದಿಸುವ ಮೊಬೈಲ್‍ನ ಬಾಕ್ಸ್, ಕಂಪ್ಯೂಟರ್ ಬಾಕ್ಸ್, ಫ್ರಿಡ್ಜ್ ಬಾಕ್ಸ್ ಎಲ್ಲವೂ ಪ್ಯಾಕೇಜಿಂಗ್ ಡಿಸೈನರ್‍ಗಳ ಕೈಚಳಕ. ಡಿಜಿಟಲ್ ಪ್ಯಾಕೇಜಿಂಗ್ ಡಿಸೈನ್ ಸಹ ಈಗ ಬೇಡಿಕೆ ಪಡೆದುಕೊಳ್ಳುತ್ತಿದೆ. ನಿಮ್ಮಲ್ಲಿ ಮಲ್ಟಿಮೀಡಿಯಾ ಆರ್ಟ್, ಟೈಪೆÇಗ್ರಾಫಿ, ಮಾರ್ಕೆಟಿಂಗ್ ಮತ್ತು ಸೇಲ್ಸ್, ಗ್ರಾಫಿಕ್ ಡಿಸೈನ್ ಇತ್ಯಾದಿ ಸ್ಕಿಲ್ಸ್ ಇದ್ದರೆ ಈ ಕ್ಷೇತ್ರದಲ್ಲಿ ಕರಿಯರ್ ರೂಪಿಸಿಕೊಳ್ಳಬಹುದು.
ಇವಿಷ್ಟೇ ಅಲ್ಲದೆ ಇನ್ನೂ ಹಲವು ಟೆಕ್ ಕೌಶಲ್ಯಗಳು ಈಗ ಬೇಡಿಕೆ ಪಡೆದುಕೊಳ್ಳುತ್ತವೆ. ಇಂತಹ ಉದ್ಯೋಗಾಧರಿತ ಸ್ಕಿಲ್ ಕಲಿತರೆ ಭವಿಷ್ಯದಲ್ಲಿ ಒಳ್ಳೆಯ ಅವಕಾಶಗಳನ್ನು ಪಡೆದುಕೊಳ್ಳಬಹುದು. ಬೆಂಗಳೂರಿನ ವಿಜಯನಗರದಲ್ಲಿರುವ ವಿಜಯನಗರ ಬಾಲ್ಕ್‌ನಲ್ಲಿ ಇಂತಹ ಬಹುಬೇಡಿಕೆಯ ಸ್ಕಿಲ್‌ಗಳನ್ನು ಕಲಿಸಲಾಗುತ್ತಿದ್ದು, ಸಾಕಷ್ಟು ವಿದ್ಯಾರ್ಥಿಗಳು ಒಳ್ಳೆಯ ಕರಿಯರ್ ರೂಪಿಸಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮತ್ತು ನಮ್ಮನ್ನು ಸಂಪರ್ಕಿಸಲು ಇಲ್ಲಿ ಕ್ಲಿಕ್ ಮಾಡಿ.