ಆಟೋಕ್ಯಾಡ್ ಗೊತ್ತ? ಇಂತಹ ಪ್ರಶ್ನೆಯನ್ನು ಬಹುತೇಕರು ಉದ್ಯೊಗ ಜಗತ್ತಿನಲ್ಲಿ ಕೇಳಿರುತ್ತಾರೆ. ಯಾಕೆಂದರೆ ಈ ಕೋರ್ಸ್ ಅಷ್ಟು ಪವರ್‌ಫುಲ್. ಅತ್ಯಧಿಕ ಬೇಡಿಕೆಯನ್ನು ಹೊಂದಿದೆ. ಕ್ಯಾಡ್, ಕ್ಯಾಮ್‌ನಂತಹ ತಂತ್ರಜ್ಞಾನ ಇಂದು ಸರ್ವವ್ಯಾಪಿ. ಹೀಗಾಗಿ ಇವುಗಳಿಗೆ ಸಂಬಂಧಿಸಿದ ಸರ್ಟಿಫಿಕೇಷನ್ ಕೋರ್ಸ್‌ಗಳಿಗೆ ಈಗ ಸಖತ್ ಬೇಡಿಕೆಯಿದೆ. ನೀವು ಈ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುತ್ತಿದ್ದರೆ ತಕ್ಷಣ ವಿಜಯನಗರ ಬಾಲ್ಕ್ ಅನ್ನು ಸಂಪರ್ಕಿಸಿರಿ.
ಕ್ಯಾಡ್ ವಿರಾಟ್ ರೂಪ
ಒಂದು ಕಾರಿನ ಒಳಭಾಗವನ್ನು ನೋಡಿ. ಅದರಲ್ಲಿ ವಿವಿಧ ಭಾಗಗಳಿವೆ. ಎಂಜಿನ್, ಬೋಲ್ಟ್, ಬಾಗಿಲು, ಸ್ಟಿಯರಿಂಗ್… ಇದರ ವಿವಿಧ ಭಾಗಗಳನ್ನು ಉತ್ಪಾದಿಸುವ ಮೊದಲು ವಿನ್ಯಾಸ ಮಾಡಲಾಗಿರುತ್ತದೆ. ಇವುಗಳನ್ನು ವಿನ್ಯಾಸ ಮಾಡಿರುವುದು ಕ್ಯಾಡ್/ಕ್ಯಾಮ್ ತಂತ್ರಜ್ಞಾನದ ಮೂಲಕ.
ಕೋವಿಡ್ ೧೯ನಿಂದಾಗಿ ನೀವು ಈಗ ಮನೆಯಲ್ಲಿಯೇ ಇರಬಹುದು. ಒಮ್ಮೆ ಅಡುಗೆ ಮನೆಯಲ್ಲಿರುವ ಗ್ಯಾಸ್ ನೋಡಿ. ಅದರ ಬರ್ನರ್ ಗಮನಿಸಿ.
ಆ ಬರ್ನರ್ ತಯಾರಿಸಿದ್ದು ಹೇಗೆ ಗೊತ್ತೆ?
ಮೊದಲು ಕಂಪ್ಯೂಟರ್‌ನಲ್ಲಿ ಅದರ 3ಡಿ ಅಥವಾ 2ಡಿ ವಿನ್ಯಾಸ ಮಾಡಿಕೊಳ್ಳಬೇಕು. ನಂತರ ಯಂತ್ರಕ್ಕೆ ಇದನ್ನು ಉತ್ಪಾದಿಸಲು ಕಂಪ್ಯೂಟರ್ ಮೂಲಕ ನಿರ್ದೇಶಿಸಬೇಕು. ಬರ್ನರ್ ವಿನ್ಯಾಸ ಮತ್ತು ನಿರ್ಮಾಣಕ್ಕೆ ಕ್ಯಾಡ್ ಮತ್ತು ಕ್ಯಾಮ್ ತಂತ್ರಜ್ಞಾನವೆರಡೂ ಬೇಕು. ಇದು ಕೇವಲ ಬರ್ನರ್‌ಗೆ ಮಾತ್ರ ಸೀಮಿತವಲ್ಲ.
ವಿಮಾನದ ಎಂಜಿನ್, ಕಾರು, ಬೈಕಿನ ಬಿಡಿಭಾಗಗಳು, ಯಾವುದಾದರೂ ಪ್ಲಾಸ್ಟಿಕ್ ಅಥವಾ ಲೋಹದ ಉತ್ಪನ್ನಗಳನ್ನು ವಿನ್ಯಾಸ ಮಾಡಲೂ ಕಂಪ್ಯೂಟರ್ ಏಯ್ಡೆಡ್ ಟೆಕ್ನಾಲಜೀಸ್ ಬೇಕೇಬೇಕು. ಕಂಪ್ಯೂಟರ್ ಆಧರಿತ ತಂತ್ರಜ್ಞಾನದಲ್ಲಿ ಸಿಎಎಡ್, ಸಿಎಇ, ಸಿಎಐಡಿ, ಸಿಎಎಂ, ಸಿಎಆರ್, ಸಿಎಆರ್ಡಿ, ಸಿಎಎಸ್ಇ, ಸಿಎಎಸ್, ಸಿಎಎಸ್ಎಸ್, ಸಿಎಫ್ಡಿ, ಸಿಐಎಸ್, ಸಿಐಎಂ, ಸಿಎನ್ಸಿ, ಇಡಿಎ, ಇಆರ್ಪಿ, ಎಫ್ಇಎ, ಕೆಬಿಇ, ಎಂಪಿಎಂ, ಎಂಪಿಪಿ, ಎಂಆರ್ಪಿ, ಪಿಡಿಎಂ, ಪಿಎಲ್ಎಂ ಹಲವು ವಿಭಾಗಗಳಿವೆ.
ಕ್ಯಾಡ್/ಕ್ಯಾಮ್ ಬಗ್ಗೆ ನಿಮಗೆಷ್ಟು ಗೊತ್ತು?
ವಸ್ತುವೊಂದರ ಡ್ರಾಯಿಂಗ್ ಮಾಡುವುದು ಕ್ಯಾಡ್‌ಗೆ ಸಂಬಂಧಿಸಿದ್ದಾದರೆ, ವಸ್ತುವನ್ನು ತಯಾರಿಸುವಂತೆ ಯಂತ್ರವನ್ನು ಕಂಪ್ಯೂಟರ್ ಮೂಲಕ ನಿರ್ದೇಶಿಸುದಕ್ಕೆ ಕ್ಯಾಮ್ ಬೇಕು. ಆರ್ಕಿಟೆಕ್ಚರ್, ಎಂಜಿನಿಯರ್ಸ್, ಡ್ರಾಫ್ಟರ್ಸ್, ಮತ್ತು ಕಲಾವಿದರು ಟೆಕ್ನಿಕಲ್ ಇಲ್ಯುಸ್ಟ್ರೇಷನ್ ಮಾಡುವ ಸಂದ`ರ್Àದಲ್ಲಿ ಕ್ಯಾಡ್ ತಂತ್ರಜ್ಞಾನ ಬಳಸುತ್ತಾರೆ. ಇದಕ್ಕಾಗಿ 2ಡಿ ಅಥವಾ 3ಡಿ ಗ್ರಾಫಿಕ್ಸ್ ಸಾಫ್ಟ್ವೇರ್ ಬೇಕಾಗುತ್ತದೆ. ಇದರ ಮೂಲಕ ಉತ್ಪನ್ನದ ಚಿತ್ರ ಬಿಡಿಸಲಾಗುತ್ತದೆ. ಕ್ಯಾಮ್ ಸಹ ಸಾಫ್ಟ್ವೇರ್ ಆಗಿದೆ. ಸ್ವಯಂಚಾಲಿತ ಯಂತ್ರಗಳು ಕಂಪ್ಯೂಟರ್ ಮೂಲಕ ನಿಯಂತ್ರಣಗೊಂಡು ಉತ್ಪನ್ನಗಳನ್ನು ತಯಾರು ಮಾಡುವಲ್ಲಿ ಕ್ಯಾಮ್ ಅನ್ನು ಬಳಸಲಾಗುತ್ತದೆ.
ಉದ್ಯೋಗಾವಕಾಶ ಹೇಗಿದೆ?
ಈಗ ಪ್ರತಿಯೊಂದು ಉದ್ಯಮದಲ್ಲೂ ಕ್ಯಾಡ್/ಕ್ಯಾಮ್ ಬಳಸಲಾಗುತ್ತಿದೆ. ನೀವು ವೃತ್ತಿಪರವಾಗಿ ಇವೆರಡನ್ನು ಕಲಿತಿದ್ದರೆ ವೈಮಾನಿಕ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ವೈಮಾನಿಕ ತಂತ್ರಜ್ಞರಾಗಬಹುದು. ಆಟೋಮೋಟಿವ್ ಎಂಜಿನಿಯರ್ , ಆಟೋಮೋಟಿವ್ ಟೆಕ್ನಿಷಿಯನ್ ಆಗಬಹುದು. ಕ್ಯಾಡ್/ಕ್ಯಾಮ್ ಮ್ಯಾನೇಜರ್, ಕ್ಯಾಡ್/ಕ್ಯಾಮ್ ಅಪರೇಟರ್, ಮೆಷಿನ್ ಟೂಲ್ ಅಪರೇಟರ್, ಟೂಲ್ ಆ್ಯಂಡ್ ಡೈ ಮೇಕರ್ , ಮೆಟಲ್ ಆ್ಯಂಡ್ ಪ್ಲಾಸ್ಟಿಕ್ ಮೆಕಾನಿಸ್ಟ್ ಆಗಿ ಕಾರ್ಯನಿರ್ವಹಿಸಬಹುದು. ಅಸೆಂಬಲರ್ ಮತ್ತು ಫ್ಯಾಬ್ರಿಕೇಟರ್, ಅನಿಮೇಷನ್, ಕ್ಯಾಡ್/ಕ್ಯಾಮ್ ಸಾಫ್ಟ್ವೇರ್ ಡೆವಲಪ್ಮೆಂಟ್, ಕ್ಯಾಡ್/ಕ್ಯಾಮ್ ಹಾರ್ಡ್ವೇರ್ ಡೆವಲಪ್ಮೆಂಟ್, ಕ್ಯಾಡ್/ಕ್ಯಾಮ್ ಸಾಫ್ಟ್ವೇರ್ ಮೇಂಟೆನ್ಸ್ ಮತ್ತು ಟ್ರಬಲ್ ಶೂಟಿಂಗ್, ಕ್ಯಾಡ್ ಕ್ಯಾಮ್ ಕನ್ಸಲ್ಟಿಂಗ್ ಸರ್ವೀಸಸ್, ಕ್ಯಾಡ್/ಕ್ಯಾಮ್ ಇನ್ಸ್ಟ್ರಕ್ಷನ್ ಸರ್ವೀಸಸ್ ವಿಭಾಗದಲ್ಲಿ ಭವಿಷ್ಯ ರೂಪಿಸಿಕೊಳ್ಳಬಹುದು. ಕ್ಯಾಡ್/ಕ್ಯಾಮ್ ಮಾರ್ಕೆಟಿಂಗ್ ಆ್ಯಂಡ್ ಸೇಲ್ಸ್, ಮ್ಯಾನ್ಫ್ಯಾಕ್ಚರಿಂಗ್ ಅಸಿಸ್ಟೆಂಟ್, ಪೆÇ್ರಡಕ್ಷನ್ ಎಂಜಿನಿಯರ್, ಸಿಮ್ಯುಲೇಷನ್ ಟೆಕ್ನಾಲಜಿ, ರೊಬೊಟಿಕ್ಸ್, ಡಿಜಿಟಲ್ ಆಟ್ರ್ಸ್ ಮತ್ತು ಜಾಹೀರಾತು, ಇಂಟರ್ನೆಟ್ ಡೆವಲಪ್ಮೆಂಟ್ ಆ್ಯಂಡ್ ಕನ್ಸಲ್ಟಿಂಗ್, ಕಟ್ಟಿಂಗ್ ಟೂಲ್ ಡಿಸೈನರ್, ಆರ್ಕಿಟೆಕ್ಚರಲ್ ಡಿಸೈನರ್, ರೆಹಾಬಿಲಿಟಿಷನ್ ಟೆಕ್ನಾಲಜಿ, ಮೆಡಿಕಲ್ ಇಮೇಜಿಂಗ್ ಸಿಸ್ಟಮ್ಸ್, ಡಿಜಿಟಲ್ ಗೇಮಿಂಗ್ ಆ್ಯಂಡ್ ಅಮ್ಯುಸ್ಮೆಂಟ್ ಸಿಸ್ಟಮ್ಸ್ ಸೇರಿದಂತೆ ಹಲವು ಕ್ಷೇತಗಳಲ್ಲಿ ಉದ್ಯೋಗಾವಕಾಶ ಪಡೆಯಬಹುದು.
ಆಟೋಕ್ಯಾಡ್ ಕಲಿಕೆ ಉತ್ತಮ
2ಡಿ, 3ಡಿ ತಂತ್ರಜ್ಞಾನದ ಮೂಲಕ ತಮ್ಮ ಭವಿಷ್ಯ ರೂಪಿಸಲು ಬಯಸುತ್ತಾರೋ ಅವರು Auto CAD ಸರ್ಟೀಫಿಕೇಷನ್ ಪಡೆಯುವುದು ಉತ್ತಮ. ಈ ಸರ್ಟಿಫಿಕೇಷನ್ ಇದ್ದರೆ ರೆಸ್ಯೂಂನ ವ್ಯಾಲ್ಯೂ ಹೆಚ್ಚಾಗುತ್ತದೆ. ಕೆಲಸ ಪಡೆಯುವುದು ಸುಲಭವಾಗುತ್ತದೆ. ತಾಂತ್ರಿಕ ಪದವಿ ಅಥವಾ ಡಿಪ್ಲೊಮಾ ಮಾಡಿದವರಿಗೆ ಈ ಕೋರ್ಸ್ ಸೂಕ್ತ. ಸಿವಿಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಆರ್ಕಿಟೆಕ್ಚರ್, ಏರೋನಾಟಿಕಲ್ ಸೇರಿದಂತೆ ಹಲವು ವಿಭಾಗಗಳಲ್ಲಿ ಉದ್ಯೋಗ ಪಡೆಯಲು ಆಟೋಕ್ಯಾಡ್ ಸರ್ಟಿಫಿಕೇಷನ್ ನೆರವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ವಿಜಯ ನಗರ ಬಾಲ್ಕ್ ಸಂಸ್ಥೆಯು ಆಟೋ ಕ್ಯಾಡ್ ಮಾತ್ರವಲ್ಲದೆ ವಿವಿಧ ಉದ್ಯೋಗಾಧರಿತ ಕೋರ್ಸ್‌ಗಳನ್ನು ಕಲಿಸುತ್ತದೆ. ಹೆಚ್ಚಿನ ವಿವರಕ್ಕೆ ಈಗಲೇ ಸಂಪರ್ಕಿಸಿ.