ಕ್ರಿಯೆಟಿವಿಟಿ ಎನ್ನುವುದು ಯಶಸ್ಸಿಗೆ ತುಂಬಾ ಅವಶ್ಯವಾದದ್ದು. ಸ್ನೇಹಿತರೇ, ವಿಜಯನಗರ ಬಾಲ್ಕ್ ಬ್ಲಾಗ್ ಮೂಲಕ ನಾವಿಂದು ಕ್ರಿಯಾಶೀಲತೆ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು ಎನ್ನುವ ಕುರಿತು ಚರ್ಚಿಸೋಣ. ಮನುಷ್ಯರು ತನ್ನ 5ನೇ ವಯಸ್ಸಿನಲ್ಲಿ ಹೆಚ್ಚು ಸೃಜನಶೀಲರಾಗಿರುತ್ತಾರೆ ಎನ್ನುವ ಮಾತನ್ನು ಮನಃಶಾಸ್ತ್ರಜ್ಞರು ಒಪ್ಪುತ್ತಾರೆ. ನಂತರ ಸೃಜನಶೀಲತೆಯು ನಿಧಾನಗತಿಯಾಗುತ್ತದೆ ಮತ್ತು ಕಡಿಮೆಯಾಗುತ್ತ ಹೋಗುತ್ತದೆ.
ನೀವು ಶಾಲಾ ಕಾಲೇಜು ವಿದ್ಯಾರ್ಥಿಯಾಗಿದ್ದರೆ ಈ ವಯಸ್ಸಲ್ಲಿ ಕ್ರಿಯೆಟಿವಿಟಿ ಉತ್ತಮವಾಗಿರುತ್ತದೆ. ಈ ಸಮಯವನ್ನು ಸದ್ಭಳಕೆ ಮಾಡಿಕೊಳ್ಳಿ. ಮುಖ್ಯವಾಗಿ ಕೆಲಸದ ಸ್ಥಳದಲ್ಲಿ ಸೃಜನಶೀಲತೆಯು ವರ್ಷ ಕಳೆದಂತೆ ಕಡಿಮೆಯಾಗುತ್ತಿರುವ ಭಾವನೆ ಬರಬಹುದು. ನಿಮ್ಮ ಕ್ರಿಯೆಟಿವಿಟಿ ಹೆಚ್ಚಿಸಿಕೊಳ್ಳಲು ಒಂದಿಷ್ಟು ಟಿಪ್ಸ್ಗಳು ಇಲ್ಲಿವೆ. ಇವನ್ನು ಅನುಸರಿಸಿ.
- ಸೃಜನಶೀಲವಾದ ಆಲೋಚನೆಗಳಿಗಾಗಿ ದಿನದಲ್ಲಿ ಇಂತಿಷ್ಟು ಸಮಯ ಮೀಸಲಿಡಿ. ಇಂತಹ ಸಮಯದಲ್ಲಿ ನೀವು ಒಬ್ಬರೇ ಇದ್ದುಕೊಂಡು ಕ್ರಿಯೆಟೀವ್ ಆದ ಆಲೋಚನೆಗಳನ್ನು ಮಾಡಿರಿ. ಇದು ಸುಮಧುರ ಅನುಭವ ನೀಡುತ್ತದೆ ಮತ್ತು ನಿಮ್ಮ ಯಶಸ್ಸಿಗೆ ನೆರವಾಗುತ್ತದೆ.
- ಸಂಗೀತ ಕೇಳುತ್ತ ಇರಿ. ಇದರಿಂದ ನಿಮ್ಮ ಮನಸ್ಸು ನಿರಾಳವಾಗುತ್ತದೆ.
- ಮಿದುಳಿಗೆ ಮೇವು ನೀಡುವ ಕಸರತ್ತುಗಳನ್ನು ಮಾಡಿರಿ.
- ಬಿಡುವಿನ ವೇಳೆಯಲ್ಲಿ ವ್ಯಾಯಾಮ ಮಾಡುತ್ತ ಇರಿ.
- ಹೆಚ್ಚು ಹೆಚ್ಚು ಹೊಸ ಪ್ರಯೋಗಗಳನ್ನು ಮಾಡುತ್ತ ಇರಿ.
- ಸ್ಮಾರ್ಟ್ ಜನರೊಂದಿಗೆ ಕೆಲಸ ಮಾಡಿರಿ.
- ನೀವು ಕೆಲಸ ಮಾಡುವ ಸ್ಥಳದಲ್ಲಿ ಇರುವ ಸೃಜನಶೀಲರಲ್ಲಿ ಐಡಿಯಾಗಳನ್ನು ಕೇಳಿರಿ. ನೀವು ವಿದ್ಯಾರ್ಥಿಯಾಗಿದ್ದರೆ ನಿಮ್ಮ ಸ್ನೇಹಿತರ ಜೊತೆಗೆ ವಿವಿಧ ಕ್ರಿಯೆಟೀವ್ ಐಡಿಯಾಗಳನ್ನು ಹಂಚಿಕೊಳ್ಳಿ.
- ಶಾಲೆ ಅಥವಾ ಕೆಲಸದ ಸ್ಥಳಕ್ಕೆ ಬರುವಾಗ ಮತ್ತು ಶಾಲೆ ಅಥವಾ ಕೆಲಸ ಬಿಟ್ಟು ಮನೆಗೆ ಹೋಗುವಾಗ ನಿಮ್ಮ ಮನಸ್ಸಿನಲ್ಲಿ ಮೂಡುವ ಐಡಿಯಾಗಳನ್ನು ದಾಖಲಿಸಿಕೊಳ್ಳಿ.
- ನಿಮಗೆ ಹೆಚ್ಚು ಸವಾಲೆನಿಸುವ ಬಿಸ್ನೆಸ್ ವಿಷಯದ ಕುರಿತು ಹೆಚ್ಚು ಆಲೋಚಿಸಿ. ಅದನ್ನು ಸರಳವಾಗಿ ಹೇಗೆ ಮಾಡಬಹುದು ಎಂದು ಕಂಡುಕೊಳ್ಳಿ.
- ನಿಮ್ಮ ಮುಂದಿರುವ ಉದ್ಯೋಗ ಅಥವಾ ಬಿಸ್ನೆಸ್ ಸವಾಲುಗಳನ್ನು ಬಗೆಹರಿಸಲು ಹೊಸ ವಿಧಾನಗಳನ್ನು ಬಳಸಿರಿ.
- ನಿಮ್ಮ ಜೀವನದ ಕನಸುಗಳನ್ನು ಆಗಾಗ ನೆನಪಿಸಿಕೊಳ್ಳುತ್ತ ಇರಿ.
- ನೀವು ಮಾಡುವ ಸಣ್ಣ ಸಾಧನೆಗೂ ನಿಮ್ಮನ್ನು ನೀವು ಹುರಿದುಂಬಿಸಿಕೊಳ್ಳಿರಿ.
- ಪ್ರತಿದಿನ ಮಾಡುವ ಒಂದೇ ರೀತಿಯ ಕೆಲಸಗಳಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಿ. ಅಂದರೆ, ಪ್ರತಿದಿನ ಮೊದಲು ಮಾಡುವ ಕೆಲಸವನ್ನು ಕೆಲವು ದಿನ ಕೊನೆಯಲ್ಲಿ ಮಾಡಿ.
- ಮಾಡಲು ಸಾಧ್ಯವಿಲ್ಲವೆಂದು ಕೈ ಬಿಟ್ಟ ಕೆಲಸಗಳನ್ನು `ನಾನು ಯಾಕೆ ಮಾಡಬಾರದು’ ಎಂದು ಯೋಚಿಸಿ ಮಾಡಲು ಪ್ರಯತ್ನಿಸಿ. ಈ ರೀತಿ ಸವಾಲು ತೆಗೆದುಕೊಳ್ಳುವುದರಿಂದ ಕೆಲಸದಲ್ಲಿ ಮತ್ತೆ ಹೊಸ ಹುರುಪು ಬರುತ್ತದೆ.
- ಯಾವುದೇ ಎಲ್ಲೆಗಳನ್ನು ಹಾಕಿಕೊಂಡು ಕಾರ್ಯನಿರ್ವಹಿಸಬೇಡಿ. ನಿಮ್ಮ ಗುರಿ ಸಾಧನೆಗೆ ಯಾವುದೇ ಮಿತಿಗಳನ್ನು ಹಾಕಿಕೊಳ್ಳಬೇಡಿ.
- ಕಚೇರಿಗೆ ಎಲ್ಲರಿಗಿಂತ ಬೇಗ ಬನ್ನಿ ಮತ್ತು ಎಲ್ಲರಿಗಿಂತ ತಡವಾಗಿ ಮನೆಗೆ ಹೋಗಿ. ಇದು ಸಹ ಕೆಲಸವನ್ನು ಪ್ರೀತಿಸಲು ನೆರವಾಗುತ್ತದೆ.
- ಬಿಡುವಿನ ವೇಳೆಯಲ್ಲಿ ಆಸಕ್ತಿದಾಯಕವಾದ ಪುಸ್ತಕಗಳನ್ನು ಓದಿರಿ.
- ನಿಮ್ಮ ಡೆಸ್ಕ್ನಲ್ಲಿ ಐಡಿಯಾಗಳನ್ನು ಬರೆಯಲೆಂದು ಒಂದು ಪ್ರತ್ಯೇಕ ಪುಸ್ತಕವನ್ನು ಇಟ್ಟಿರಿ.
- ನಿಮ್ಮ ಡೆಸ್ಕ್ ಅಥವಾ ಚೇಂಬರ್ನಲ್ಲಿ ಸ್ಪೂರ್ತಿದಾಯಕ ಕೋಟ್ಗಳು ಮತ್ತು ಚಿತ್ರಗಳನ್ನು ಅಂಟಿಸಿರಿ.
- ಭವಿಷ್ಯದ ಕತೆಗಾಗಿ ಒಂದು ಹೆಡ್ಲೈನ್ ಬರೆಯಿರಿ ಮತ್ತು ಅದರ ಕೆಳಗೆ ನಿಮ್ಮ ಭವಿಷ್ಯದ ಕನಸಿನ ಕತೆಯನ್ನು ಬರೆಯಿರಿ.
- ಪ್ರತಿದಿನ ಇನ್ನಷ್ಟು ಕ್ರಿಯೆಟಿವ್ ಆಗಿ ಕೆಲಸ ಮಾಡಲು ಶ್ರಮಿಸಿರಿ.
- ನೀವು ಹೆಚ್ಚು ಸೃಜನಶೀಲರಾಗಿದ್ದ, ಹೆಚ್ಚು ಉತ್ಸಾಹಿಯಾಗಿದ್ದ ಆ ದಿನಗಳನ್ನು ಆಗಾಗ ನೆನಪಿಸಿಕೊಳ್ಳುತ್ತ ಇರಿ.
- ನಿಮ್ಮ ಪ್ರವೃತ್ತಿಗಳ ಮೇಲೆ ಹೆಚ್ಚು ನಂಬಿಕೆ ಇಡಿ.
- ಅತ್ಯಂತ ರೋಮಾಂಚನಕಾರಿ ಯೋಜನೆಯಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿರಿ.
- ಬೆಳಗ್ಗೆ ನಿದ್ದೆಯಿಂದ ಎದ್ದಾಗ ಹೊಸ ಆಲೋಚನೆಯೊಂದನ್ನು ಮಾಡಿರಿ ಮತ್ತು ಅದನ್ನು ನೋಟ್ಬುಕ್ನಲ್ಲಿ ಬರೆದಿಡಿ.
- ಪ್ರತಿಯೊಂದು ಸಮಸ್ಯೆಗೂ ಸರಳವಾದ ಪರಿಹಾರ ಯಾವುದೆಂದು ಆಲೋಚಿಸಿರಿ.
- ನಿಮ್ಮ ನಂಬಿಕಸ್ಥರಿಂದ ಫೀಡ್ಬ್ಯಾಕ್ ಅಥವಾ ಪ್ರತಿಕ್ರಿಯೆಗಳನ್ನು ಪಡೆಯಿರಿ.
- ನಿಮ್ಮ ಗ್ರಾಹಕರನ್ನು ಆಗಾಗ ಭೇಟಿಯಾಗುತ್ತ ಇರಿ.
- ನಿಮ್ಮ ಪ್ರತಿಸ್ಪರ್ಧಿಗಳನ್ನು ಅಧ್ಯಯನ ಮಾಡಿ. ಅವರ ಯಶಸ್ಸಿನ ರೀತಿಗಳನ್ನು ನಿಮ್ಮಲ್ಲಿಯೂ ಅಳವಡಿಸಿಕೊಳ್ಳಿರಿ.
- ಕೆಲವೊಂದು ಮೂರ್ಖ ಪ್ರಶ್ನೆಗಳನ್ನು ನಿಮ್ಮಲ್ಲಿಯೇ ಕೇಳಿಕೊಳ್ಳಿ.
- ನೀವು ಮಾಡುವ ಪ್ರತಿಯೊಂದನ್ನೂ ಸವಾಲಾಗಿ ಸ್ವೀಕರಿಸಿಕೊಳ್ಳಿ.
- ನೀವೇ ಪ್ರತಿಯೊಂದು ಕೆಲಸಕ್ಕೂ ಡೆಡ್ಲೈನ್ ಅಥವಾ ಸಮಯದ ಮಿತಿಯನ್ನು ಹಾಕಿಕೊಂಡು ಅದೇ ಸಮಯದೊಳಗೆ ಮಾಡಿ ಮುಗಿಸಿರಿ.
- ನೀವು ಬರೆದಿಟ್ಟ ಐಡಿಯಾಗಳನ್ನು ಪ್ರತಿದಿನ ನೋಡುತ್ತ ಇರಿ. ಅದಕ್ಕೆ ಹೊಸತನ್ನು ಸೇರಿಸಿರಿ ಅಥವಾ ಅಪ್ಡೇಟ್ ಮಾಡಿ.
- ಜೀವನದಲ್ಲಿ ಮೋಜು(ಕೆಟ್ಟ ಅಭ್ಯಾಸ ಅಲ್ಲ) ಮಾಡುತ್ತ ಇರಿ. ಪ್ರವಾಸ, ವೀಕೆಂಡ್ ತಿರುಗಾಟ ಎಲ್ಲವೂ ಇರಲಿ.
- ಪ್ರತಿಯೊಂದು ಕೆಲಸ ಮುಗಿಸಿದಾಗಲೂ ಒಂದು ಪುಟ್ಟ ಬ್ರೇಕ್ ತೆಗೆದುಕೊಳ್ಳಿ.
- ನಿಮ್ಮ ಐಡಿಯಾವನ್ನು ಹೇಗೆ ಪ್ರಗತಿ ಮಾಡಬಹುದು ಎಂದು ನಿಮ್ಮ ಆಪ್ತರಲ್ಲಿ ಚರ್ಚಿಸಿರಿ.
- ಹೆಚ್ಚು ನಗಿರಿ, ಕಡಿಮೆ ಚಿಂತೆ ಮಾಡಿರಿ.
- ನಿಮ್ಮ ಕನಸುಗಳನ್ನು ನೆನಪಿಸುತ್ತ ಇರಿ, ಅದನ್ನು ಬರೆದಿಟ್ಟುಕೊಳ್ಳಿ.
- ಅಸಾಧ್ಯವಾದ ಪ್ರಶ್ನೆಗಳನ್ನು ಕೇಳಿರಿ.
- ಉಲ್ಲಾಸ ಕಳೆದುಕೊಂಡಿದ್ದೀರಿ ಎಂದೆನಿಸಿದಾಗ ವಾಕ್ ಹೋಗಿರಿ.
- ಧ್ಯಾನ ಮಾಡಿ ಅಥವಾ ವಿಶ್ರಾಂತಿಯ ವ್ಯಾಯಾಮಗಳನ್ನು ಮಾಡಿ.
- ನಿಮ್ಮ ತಂಡದ ಜೊತೆ ಆಗಾಗ ಊಟಕ್ಕೆ ಹೋಗಿರಿ.
- ಪ್ರತಿದಿನದ ಕೊನೆಗೆ ಇವತ್ತು ಮಾಡಿದ ಸಾಧನೆ ಏನು ಎಂದು ಗುರುತಿಸುತ್ತ ಹೋಗಿರಿ. ನಾಳೆ ಇದಕ್ಕಿಂತಲೂ ಹೆಚ್ಚು ಯಶಸ್ಸು ಪಡೆಯಲು ಪ್ರಯತ್ನಿಸಿ.
- ಮೀಟಿಂಗ್ಗೆ ಹೆಚ್ಚು ಸಮಯ ತೆಗೆದುಕೊಳ್ಳಬೇಡಿ.
- ದಿನದ 24 ಗಂಟೆಯೂ ಟೀವಿ ಮುಂದೆ ಕುಳಿತಿರಬೇಡಿ. ದಿನದಲ್ಲಿ ಕೆಲವು ನಿಮಿಷ ಟೀವಿ ಮುಂದೆ ಕುಳಿತರೆ ಸಾಕು.
- ನಿಮಗೆ ಯಾರಿಂದಾದರೂ ಸಹಾಯ ಬೇಕಿದ್ದರೆ ಮುಜುಗರ ಪಡದೆ ಕೇಳಿರಿ.
- ನಕಾರಾತ್ಮಕ ವಿಷಯಗಳ ಕುರಿತು ತಲೆಕೆಡಿಸಿಕೊಂಡು ಕುಳಿತುಕೊಳ್ಳಬೇಡಿ.
- ಒಬ್ಬರು ಸೂಕ್ತ ಮಾರ್ಗದರ್ಶಕರನ್ನು ಹುಡುಕಿ.