ವೆಬ್ಸೈಟ್ ಡಿಸೈನಿಂಗ್ ಕೋರ್ಸ್ ಕಲಿತವರಿಗೆ ಟೆಕ್ ಜಗತ್ತಿನಲ್ಲಿ ಬೇಡಿಕೆ

ವಿಜಯನಗರ ಬಾಲ್ಕ್‌ ಸಂಸ್ಥೆಯ ಬಹುಬೇಡಿಕೆಯ ಕೋರ್ಸ್‌ಗಳಲ್ಲಿ ವೆಬ್‌ಸೈಟ್‌ ಡಿಸೈನ್‌ ಕೋರ್ಸ್‌ ಸಹ ಒಂದಾಗಿದೆ. ಸ್ವಂತ ವೆಬ್‌ಡಿಸೈನ್‌ ಮತ್ತು ಅಭಿವೃದ್ಧಿ ಕಂಪನಿ ಆರಂಭಿಸುವವರಿಗೆ, ಫ್ರಿಲ್ಯಾನ್ಸಿಂಗ್‌ ಆಗಿ ವೆಬ್‌ ವಿನ್ಯಾಸ ಮಾಡುವವರಿಗೆ ಈ ಕೋರ್ಸ್‌ ಒಳ್ಳೆಯ ವೇದಿಕೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇವತ್ತಿನ ಲೇಖನದಲ್ಲಿ ವೆಬ್‌ಡಿಸೈನ್‌ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳೋಣ.

ವೆಬ್‍ಸೈಟ್ ಡಿಸೈನ್ ಮಾಡುವವರಿಗೆ ಈಗ ಉದ್ಯೋಗ ಮಾರುಕಟ್ಟೆಯಲ್ಲಿ ಬೊಂಬಾಟ್‌  ಡಿಮ್ಯಾಂಡಿದೆ. ವೆಬ್‍ಸೈಟ್ ವಿನ್ಯಾಸ ಮಾಡಲು ಕಂಪ್ಯೂಟರ್ ಸೈನ್ಸೇ ಓದಬೇಕೆಂದಿಲ್ಲ. ದುಬಾರಿ ಅನಿಮೇಷನ್ ಕೋರ್ಸಿಗೂ ಸೇರಬೇಕೆಂದಿಲ್ಲ. ಇವೆಲ್ಲವನ್ನು ಓದಿಯೂ ವೆಬ್‍ವಿನ್ಯಾಸಕರಾಗಬಹುದು. ಓದದೆಯೂ ಆಗಬಹುದು. ಕೆಲವು ಅಲ್ಪಾವಧಿಯ ಕೋರ್ಸ್‍ಗಳನ್ನು ಕಲಿತೂ ವೆಬ್ ವಿನ್ಯಾಸಕರಾಗಬಹುದು. ವಿಜಯನಗರ ಬಾಲ್ಕ್‌ನಲ್ಲಿ ವೆಬ್‌ ವಿನ್ಯಾಸ ಕೋರ್ಸ್‌ಗೆ ಸೇರಲು ಈಗಲೇ ವಾಟ್ಸಪ್‌ ಮಾಡಿ(ಇಲ್ಲಿ ಕ್ಲಿಕ್‌ ಮಾಡಿ).

ವೆಬ್ ಡಿಸೈನ್ ಕೋರ್ಸ್‌ನಲ್ಲಿ ಏನು ಕಲಿಸುತ್ತಾರೆ?

ವೆಬ್‌ ವಿನ್ಯಾಸ ಕೋರ್ಸ್‍ಗಳಲ್ಲಿ ವೆಬ್‍ಸೈಟ್ ನಿರ್ಮಿಸುವುದು ಹೇಗೆಂಬುದನ್ನು ಕಲಿಸಿಕೊಡುತ್ತಾರೆ. ಹೈಪರ್‍ಟೆಕ್ಸ್ಟ್ ಪ್ರಿಪ್ರೊಸೆಸರ್(ಪಿಎಚ್‍ಪಿ), ಹೈಪರ್‍ಟೆಕ್ಸ್ಟ್ ಮಾರ್ಕ್- ಅಪ್ ಲ್ಯಾಂಗ್ವೇಜ್(ಎಚ್‍ಟಿಎಂಎಲ್) ಮತ್ತು ಕ್ಯಾಸ್‍ಕ್ಯಾಡಿಂಗ್ ಸ್ಟೈಲ್ ಶೀಟ್ಸ್(ಸಿಎಸ್‍ಎಸ್) ಇತ್ಯಾದಿಗಳನ್ನು ವಿದ್ಯಾರ್ಥಿಗಳು ಕಲಿಯಬೇಕಾಗುತ್ತದೆ. ನೀವು ಎಷ್ಟು ತಿಂಗಳ ಅವಯ ಕೋರ್ಸ್ ಮಾಡುವಿರೋ ಎಂಬುದರ ಮೇಲೆ ವೆಬ್ ಡಿಸೈನ್ ಕಲಿಕೆಯ ಸಬ್ಜೆಕ್ಟ್‍ಗಳು ಇರುತ್ತವೆ. ಕೆಲವೊಮ್ಮೆ ಪ್ರತಿಯೊಂದು ವಿಷಯಗಳಿಗೂ ಪ್ರತ್ಯೇಕ ಪ್ರತ್ಯೇಕ ಸರ್ಟಿಫಿಕೇಷನ್‍ಗಳಿರುತ್ತವೆ. ಅಂದರೆ, ಫ್ರೀಲ್ಯಾನ್ಸ್ ವೆಬ್ ಡಿಸೈನರ್, ಗ್ರಾಫಿಕ್ ಡಿಸೈನರ್, ವೆಬ್ ಅನಿಮೇಷನ್ ಕ್ರೀಯೆಟರ್, ವೆಬ್ ಡೆವಲಪರ್, ಪಿಎಚ್‍ಪಿ ಆ್ಯಂಡ್ ಸಿಎಸ್‍ಎಸ್ ಡೆವಲಪರ್ ಇತ್ಯಾದಿ ಕೋರ್ಸ್‍ಗಳನ್ನು ಮಾಡಬಹುದು.

ಬಹುಬೇಡಿಕೆಯ ಕೋರ್ಸ್‌

ಬಹುತೇಕ ಜನರಿಂದು ಇಂಟರ್‍ನೆಟ್ ಬಳಸುತ್ತಿದ್ದಾರೆ. ಹೀಗಾಗಿ ಆಸ್ಪತ್ರೆ, ಜಿಮ್, ಶಿಕ್ಷಣ ಸಂಸ್ಥೆಗಳು, ಸುದ್ದಿತಾಣಗಳು ಮಾತ್ರವಲ್ಲದೆ ಪ್ರತಿಯೊಬ್ಬರೂ ಸ್ವಂತ ವೆಬ್‍ಸೈಟ್ ಹೊಂದಲು ಆಸಕ್ತಿ ವಹಿಸುತ್ತಾರೆ. ಇ-ಕಾಮರ್ಸ್, ಇಂಟರ್‍ನೆಟ್ ಸುದ್ದಿ ವೆಬ್‍ಸೈಟ್ ಸೇರಿದಂತೆ ವೆಬ್‍ಸೈಟ್ ಅವಲಂಬಿತ ಕಂಪನಿಗಳಲ್ಲಿಯೂ ವೆಬ್‍ಸೈಟ್ ಡಿಸೈನರ್‍ಗಳಿಗೆ ಬೇಡಿಕೆಯಿದೆ. ಗೋಡ್ಯಾಡಿ.ಕಾಮ್‍ನಂತಹ ತಾಣಗಳಲ್ಲಿ ಅನುಭವ ಇಲ್ಲದವರೂ ವೆಬ್‍ಸೈಟ್ ರಚಿಸಬಹುದಾದರೂ ಪ್ರೊಫೆಷನಲ್ ವೆಬ್‍ಸೈಟ್ ವಿನ್ಯಾಸಕರಿಗೆ ಬೇಡಿಕೆ ಕಡಿಮೆಯಾಗಿಲ್ಲ. ನಿಮ್ಮಲ್ಲಿ ಅತ್ಯುತ್ತಮ ಕ್ರಿಯೇಟಿವಿಟಿ ಇದ್ದರಂತೂ ಗ್ರಾಹಕರನ್ನು ಪಡೆಯುವುದು ಕಷ್ಟವಲ್ಲ. ಪಾರ್ಟ್‍ಟೈಮ್ ಆಗಿಯೂ ಈ ಕ್ಷೇತ್ರದಲ್ಲಿ ದುಡಿಯಬಹುದು. ವೆಬ್‍ಡಿಸೈನ್ ಕಂಪನಿಯಲ್ಲಿಯೂ ಕೆಲಸ ಗಿಟ್ಟಿಸಿಕೊಳ್ಳಬಹುದು. ನಿಮ್ಮಲ್ಲಿ ಸ್ವ ಉದ್ಯೋಗ ಮಾಡುವ ಮನಸ್ಸು ಇದ್ದರೆ ನಿಮ್ಮ ಊರಿಗೆ ಸಮೀಪವಿರುವ ಪಟ್ಟಣ, ನಗರಗಳಲ್ಲಿ ವೆಬ್ ಡಿಸೈನ್ ಸಂಸ್ಥೆಯನ್ನೂ ತೆರೆಯಬಹುದು.

ನೆನಪಿಡಿ ಸ್ನೇಹಿತರೇ, ಭವಿಷ್ಯದಲ್ಲಿ ಜಗತ್ತು ಇನ್ನಷ್ಟು ಆನ್‌ಲೈನ್‌ ಮಯವಾಗಲಿದೆ. ಇಂತಹ ಸಮಯದಲ್ಲಿ ವೆಬ್‌ ಡಿಸೈನ್‌ ಇತ್ಯಾದಿ ಕೌಶಲವಿದ್ದವರಿಗೆ ಒಳ್ಳೆಯ ಅವಕಾಶಗಳು ದೊರಕಲಿವೆ. ಈಗಾಗಲೇ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶಗಳೂ ಪ್ರಕಟವಾಗಿವೆ. ಎಸ್‌ಎಸ್‌ಎಲ್‌ಸಿ ನಂತರ ಮುಂದೇನು? ಪಿಯುಸಿ ನಂತರ ಮುಂದೇನು ಎಂದು ಚಿಂತಿಸುತ್ತ ಕುಳಿತುಕೊಳ್ಳದೆ ವೆಬ್‌ ವಿನ್ಯಾಸದ ಕೋರ್ಸ್‌ ಬಗ್ಗೆಯೂ ಗಮನಹರಿಸಿ. ಬೇರೆ ಕೊರ್ಸ್‌ ಮಾಡುತ್ತ ಅದರ ಜೊತೆಗೂ ಈ ಕೋರ್ಸ್‌ ಮಾಡಬಹುದು. ಇಂತಹ ಅಲ್ಪಾವಧಿ ಕೋರ್ಸ್‌ಗಳು ನಿಮ್ಮ ರೆಸ್ಯೂಂನ ತೂಕ ಹೆಚ್ಚಿಸುತ್ತದೆ. ಭವಿಷ್ಯದಲ್ಲಿ ನಿಮಗೆ ಒಳ್ಳೆಯ ಉದ್ಯೊಗ ಪಡೆಯಲು ಸಾಥ್‌ ನೀಡುತ್ತವೆ.  

You May Also Like

Leave a Reply

Your email address will not be published. Required fields are marked *

error: Content is protected !!