ಅನಿಮೇಷನ್ ಕಲಿತ ವಿದ್ಯಾರ್ಥಿಗಳಿಗೆ ಭಾರತದಲ್ಲಿ ಬೇಡಿಕೆ ಇದೆಯೇ?

ಸ್ನೇಹಿತರೇ, ಹೆಡ್‌ಲೈನ್‌ ನೋಡಿ ನಿಮ್ಮಲ್ಲಿಯೂ ಇಂತಹ ಪ್ರಶ್ನೆಯೊಂದು ಮೂಡಬಹುದು. ಕೆಲವು ಸಾವಿರ ರೂ.ನಿಂದ ಹಲವು ಲಕ್ಷ ರೂ.ವರೆಗೆ ವಿವಿಧ ಶುಲ್ಕವಿರುವ ಅನಿಮೇಷನ್‌ ಕೋರ್ಸ್‌ಗೆ ಸೇರುವ ಮೊದಲು ಪ್ರತಿಯೊಬ್ಬ ವಿದ್ಯಾರ್ಥಿಯೂ ಇಂತಹ ಪ್ರಶ್ನೆಯನ್ನು ಕೇಳಿಕೊಳ್ಳಬಹುದು. ವಿಜಯ ನಗರ ಬಾಲ್ಕ್‌ ನಿಮ್ಮ ಈ ಪ್ರಶ್ನೆಗೆ ಉತ್ತರ ನೀಡುವ ಪ್ರಯತ್ನವನ್ನು ಈ ಲೇಖನದ ಮೂಲಕ ಮಾಡುತ್ತಿದೆ.

ಭಾರತದಲ್ಲಿ ಅನಿಮೇಷನ್‌ ಉದ್ಯಮವು ಐಟಿ ಉದ್ಯಮದಂತೆಯೇ ಪ್ರಗತಿಪಥದಲ್ಲಿ ಸಾಗುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ. ನೀವು ಮಾಡುವ ಕೆಲಸವನ್ನು ಆನಂದದಿಂದ ಮಾಡಬೇಕಾದರೆ ಅನಿಮೇಷನ್‌ ಫೀಲ್ಡ್‌ಗೆ ಬರಬೇಕು ಎನ್ನುವವರೂ ಇದ್ದಾರೆ. ಈಗಿನ ಇಂಟರ್‌ನೆಟ್‌ ವ್ಯಾಪಕ ಬಳಕೆ ಇರುವ ಜಗತ್ತಿನಲ್ಲಿ ಅನಿಮೇಷನ್‌ ಓದಿರುವವರಿಗೆ ಅತ್ಯುತ್ತಮ ಬೇಡಿಕೆಯಿದೆ ಎನ್ನುತ್ತಾರೆ ತಜ್ಞರು.

ಅನಿಮೇಷನ್‌ ಕೋರ್ಸ್‌ ಕಲಿತರೆ ನೀವು ಯಾವುದಾದರೂ ದೊಡ್ಡ ಮಟ್ಟದ ಅನಿಮೇಷನ್‌ ಕಂಪನಿಯ ಉದ್ಯೋಗಿಯಾಗಬಹುದು.

ಚಿಕ್ಕ ಅನಿಮೇಷನ್‌ ಕಂಪನಿಯಲ್ಲಿಯೂ ಉದ್ಯೋಗ ಪಡೆಯಬಹುದು.

ಎಲ್ಲೂ ಉದ್ಯೋಗ ದೊರಕಿಲ್ಲವೇ, ನಿಮ್ಮದೇ ಸ್ವಂತ ಕ್ರಿಯೇಟಿವ್‌ ವಿಡಿಯೋಗಳನ್ನು ರಚಿಸಿ ಯೂಟ್ಯೂಬ್‌ಗೆ ಹಾಕಿ ಲಕ್ಷ ಲಕ್ಷ ಸಂಪಾದಿಸಬಹುದು.

ಯೂಟ್ಯೂಬ್‌ಗೆ ಹಾಕಿ ಹಣ ಸಂಪಾದಿಸಬಹುದು ಎಂದು ಹೇಳಿದರೆ ನೀವು ಸಂಶಯದಿಂದ ನೋಡಬೇಡಿ. ನೀವು ಸುಮ್ಮನೆ ಯೂಟ್ಯೂಬ್‌ಗೆ ಹೋಗಿ ಕಿಡ್ಸ್‌ ವಿಡಿಯೋ ಅಂತ ಹುಡುಕಿ. ಅಲ್ಲಿ ಕೆಲವು ನಿಮಿಷದ ವಿಡಿಯೋಗಳು ಲಕ್ಷ ಲಕ್ಷ ವೀಕ್ಷಣೆ ಪಡೆದಿರುವುದನ್ನು ನೋಡಿದರೆ ಈ ಕ್ಷೇತ್ರಕ್ಕೆ ಇರುವ ಬೇಡಿಕೆಯ ಅರಿವಾದೀತು. ಆ ಯೂಟ್ಯೂಬ್‌ ವಿಡಿಯೋ ಓನರ್ ಗಳು ವರ್ಷಕ್ಕೆ ಹಲವು ಕೋಟಿ ಹಣ ಸಂಪಾದಿಸುತ್ತಿದ್ದಾರೆ. ಬೇಕಿದ್ದರೆ ನೀವೇ ಗೂಗಲ್‌ನಲ್ಲಿ ರಿಸರ್ಚ್‌ ಮಾಡಿ. ಯಶಸ್ಸು ಅವಲಂಬಿಸಿರುವುದು ನಿಮ್ಮ ಕ್ರಿಯೇಟಿವಿಟಿಯನ್ನು ನೀವು ಹೇಗೆ ಬಳಸುತ್ತೀರಿ ಎನ್ನುವುದರ ಮೇಲೆ.

ಇಲ್ಲಿ ಯೂಟ್ಯೂಬ್‌ ಉದಾಹರಣೆ ನೀಡಿದ್ದು, ಎಲ್ಲೂ ಕೆಲಸ ದೊರಕದೆ ಇದ್ದ ಸಂದರ್ಭದಲ್ಲಿ ಏನೂ ಮಾಡಬಹುದು ಎನ್ನುವುದಕ್ಕೆ. ಆದರೆ, ದೇಶದಲ್ಲಿ ಯಾಕೆ, ಜಗತ್ತಿನಲ್ಲಿಯೇ ಅನಿಮೇಷನ್‌ ಪರಿಣತಿ ಪಡೆದ ಪ್ರತಿಭಾನ್ವಿತರ ಕೊರತೆಯಿದೆ. ಇದೇ ಕಾರಣಕ್ಕೆ ಈ ಕೋರ್ಸ್‌ಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್‌.

ಅನಿಮೇಷನ್‌ , ಗ್ರಾಫಿಕ್ಸ್‌ ಮತ್ತು ಮಲ್ಟಿಮೀಡಿಯಾ ಕೋರ್ಸ್‌ ಅನ್ನು ವಿದ್ಯಾರ್ಥಿಗಳು ಪೂರ್ಣಾವಧಿ ಅಥವಾ ಅಲ್ಪಾವಧಿಯಲ್ಲಿ ಕಲಿಯಬಹುದು. ವಿಜಯ ನಗರ ಬಾಲ್ಕ್‌ನಲ್ಲಿ ನಿಮ್ಮ ಅನುಕೂಲಕ್ಕೆ ಸೂಕ್ತವಾಗುವಂತೆ ಅನಿಮೇಷನ್‌ ಕೋರ್ಸ್‌ಗಳು ಇವೆ. ಒಮ್ಮೆ ಭೇಟಿ ನೀಡಿ ವಿಚಾರಿಸಬಹುದು. ಕರೆ ಅಥವಾ ವಾಟ್ಸಪ್ ಮೂಲಕವೂ ವಿಚಾರಿಸಬಹುದು.

ನಿಮಗೆ ಗೊತ್ತೆ, ಭಾರತದಲ್ಲಿ ಹಲವು ವರ್ಷಗಳ ಹಿಂದೆಯೇ ಅನಿಮೇಷನ್ ಉದ್ಯಮವು ಹೆಚ್ಚು ಪ್ರವರ್ಧಮಾನಕ್ಕೆ ಬಂದಿದೆ. ಅಲ್ಲಿಂದ ಭಾರತದ ಪ್ರತಿಭಾನ್ವಿತರಿಗೆ ಹೆಚ್ಚು ಬೇಡಿಕೆ ಬಂತು. ಅದಕ್ಕೂ ಹಿಂದೆ ಅನಿಮೇಷನ್‌ ಕೊರ್ಸ್‌ ಕಲಿಯುವವರ ಪ್ರಮಾಣ ತೀರಾ ಕಡಿಮೆ ಇತ್ತು. ಭಾರತದಲ್ಲಿ ಈಗ ನೂರಾರು ಅನಿಮೇಷನ್‌ ಸ್ಟುಡಿಯೋಗಳಿವೆ. ಹಲವು ಸಾವಿರ, ಲಕ್ಷ ಅನಿಮೇಷನ್‌ ವೃತ್ತಿಪರರು ಇರದ್ದಾರೆ.

  • 2019 ರಲ್ಲಿ ಜಾಗತಿಕ ಅನಿಮೇಷನ್‌, ವಿಎಫ್‌ಎಕ್ಸ್‌ ಮತ್ತು ವಿಡಿಯೋ ಗೇಮ್ಸ್‌ ಮೌಲ್ಯ ೨೬೪ ಬಿಲಿಯನ್‌ ಡಾಲರ್‌ಗೆ ತಲುಪಿತ್ತು.
  • ವರ್ಷದಿಂದ ವರ್ಷಕ್ಕೆ ಅನಿಮೇಷನ್‌ ಉದ್ಯಮದ ಪ್ರಗತಿ ದರವು ಶೇಕಡ 2ರಿಂದ 3 ರಷ್ಟು ಇದೆ.

ಎಲ್ಲೆಲ್ಲಿ ಉದ್ಯೋಗ ಪಡೆಯಬಹುದು?

ಅನಿಮೇಷನ್‌ ವೃತ್ತಿಪರರಿಗೆ ಮತ್ತು ಸಂಬಂಧಿತ ಗ್ರಾಫಿಕ್‌ ಡಿಸೈನರ್‌, ಮಲ್ಟಿಮೀಡಿಯಾ ಡೆವಲಪರ್, ಗೇಮ್‌ ಡೆವಲಪರ್‌, ಕ್ಯಾರೆಕ್ಟರ್‌ ಡಿಸೈನರ್‌ಗಳು, ಕೀ ಫ್ರೇಮ್‌ ಅನಿಮೇಟರ್‌, ೩ಡಿ ಮಾಡೆಲರ್‌, ಲೇಔಟ್‌ ಆರ್ಟಿಸ್ಟ್‌ ಇತ್ಯಾದಿ ವೃತ್ತಿಪರರು ಹತ್ತು ಹಲವು ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಬಹುದಾಗಿದೆ. ಮುಖ್ಯವಾಗಿ..

  • ಜಾಹೀರಾತು ಕ್ಷೇತ್ರ
  • ಆನ್‌ಲೈನ್ ಮತ್ತು ಫ್ರಿಂಟ್‌ ನ್ಯೂಸ್‌ ಮೀಡಿಯಾ
  • ಸಿನಿಮಾ ಮತ್ತು ಟೀವಿ
  • ಕಾರ್ಟೂನ್‌ ಪ್ರೊಡಕ್ಷನ್‌
  • ಥಿಯೇಟರ್
  • ವಿಡಿಯೋ ಗೇಮಿಂಗ್‌
  • ಇ ಲರ್ನಿಂಗ್ ಇತ್ಯಾದಿ ಕ್ಷೇತ್ರಗಳಲ್ಲಿ ಅವಕಾಶ ಪಡೆಯಬಹುದು.

ಇವೆಲ್ಲ ಉದಾಹರಣೆಗಳಷ್ಟೇ, ಅನಿಮೇಷನ್‌ ಎನ್ನುವುದೇ ಒಂದು ಉದ್ಯಮ. ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಒಳ್ಳೆಯ ಅವಕಾಶವನ್ನು ಪಡೆಯಬಹುದು. ಆರಂಭದಲ್ಲಿ ಅನಿಮೇಷನ್‌ ಪರಿಣಿತರಿಗೆ ಹತ್ತಿಪ್ಪತ್ತು ಸಾವಿರ ರೂ. ವೇತನ ದೊರಕಬಹುದು. ವರ್ಷಗಳು ಕಳೆದಂತೆ ತಿಂಗಳ ವೇತನ ಲಕ್ಷ ರೂ. ದಾಟಬಹುದು. ಒಳ್ಳೆಯ ಪ್ರತಿಭಾನ್ವಿತರು ತಿಂಗಳಿಗೆ ಹಲವು ಲಕ್ಷ ರೂ. ವೇತನ ಪಡೆಯುತ್ತಿದ್ದಾರೆ. ಭಾರತದಲ್ಲಿ ಈಗ ಅನಿಮೇಷನ್‌ ಪರಿಣತರಿಗೆ ಬೇಡಿಕೆಯು ಅತ್ಯುತ್ತಮ ಮಟ್ಟದಲ್ಲಿದೆ. ಜಾಗತಿಕವಾಗಿ ಇದು ಅತ್ಯುತ್ತಮ ಬೇಡಿಕೆಯಲ್ಲಿರುವ ಕೋರ್ಸ್‌. ಈ ಕ್ಷೇತ್ರದಲ್ಲಿ ಉದ್ಯೋಗ ಪಡೆಯಬೇಕಾದರೆ ಅದಕ್ಕೆ ಸೂಕ್ತವಾದ ಕೋರ್ಸ್‌ ಅಥವಾ ಸರ್ಟಿಫಿಕೇಟ್‌ ಪಡೆದಿರುವುದು ಅತ್ಯಂತ ಅವಶ್ಯ.

ಸ್ನೇಹಿತರೇ, ಬೆಂಗಳೂರಿನ ವಿಜಯ ನಗರದಲ್ಲಿರುವ ಬಾಲ್ಕ್‌ ಶಿಕ್ಷಣ ಸಂಸ್ಥೆಯಲ್ಲಿ ಅನಿಮೇಷನ್‌ ಕೋರ್ಸ್‌ಗಳು ಲಭ್ಯವಿದೆ. ಯಾಕೆ ನೀವು ನಮ್ಮ ಸಂಸ್ಥೆಗೆ ಸೇರಿ ನಿಮ್ಮ ಕರಿಯರ್‌ ಅನ್ನು ಅದ್ಭುತವಾಗಿ ರೂಪಿಸಿಕೊಳ್ಳಬಾರದು? ಈಗಲೇ ನಮ್ಮನ್ನು ಸಂಪರ್ಕಿಸಿ. Phone Number: 900 8760 400 Email: balcvijaynagar@gmail.com

Balc Vijaya Nagar Courses

Balc Cadd in Vijayanagar offers short-term courses and certificate courses. Inclusive of comprehensive learning, the long-term programmes feature subjects such as web development, financial accountancy, computer application and programming, information technology, multimedia and web-designing. Some of the short-term courses cover topics like Windows XP, 7, 8, 10, Vista, MS Office, DTP (Desk Top Publishing), Web Designing, Multimedia, Tally ERP 9, C, C++ , and Visual Basic. Walk into this centre all through the week between 08:00 – 21:00.

  • Adobe Illustrator Training
  • Adobe Indesign Training
  • Adobe Photoshop Training classes
  • Animation & Multimedia Courses
  • Archi CAD Training
  • C Language Classes
  • C++ Language Classes
  • Corel DRAW Training
  • DTP (Desktop Publishing) classes
  • Electrical CAD Training
  • Java Training Classes

BALC Computer Education Center in Vijayanagar has a wide range of products and services to cater to the varied requirements of their customers. The staff at this establishment are courteous and prompt at providing any assistance. They readily answer any queries or questions that you may have. Pay for the product or service with ease by using any of the available modes of payment, such as Cash, Cheques. This establishment is functional from 07:00 – 21:00.

You May Also Like

Leave a Reply

Your email address will not be published. Required fields are marked *

error: Content is protected !!