ಅಡಾಬ್ ಫೋಟೊಶಾಪ್ ಕಲಿಯಿರಿ, ಕರಿಯರ್ ನಲ್ಲಿ ಬೆಳೆಯಿರಿ

ಜಗತ್ತಿನ ಹಲವು ಲಕ್ಷ ಕ್ರಿಯಾಶೀಲ ಕಲಾವಿದರು, ಡಿಸೈನರ್‌ಗಳು, ವೆಬ್‌ಡಿಸೈನರ್‌ಗಳು, ಫೋಟೊಗ್ರಾಫರ್‌ಗಳು, ವಿಎಫ್ಎಕ್ಸ್‌ ಕಲಾವಿದರು, ಜಾಹೀರಾತು ಕ್ಷೇತ್ರದವರು ಸೇರಿದಂತೆ ನೂರಾರು ಸಾವಿರಾರು ವಿಭಾಗದ ವೃತ್ತಿಪರರು ಇಂದು ಫೋಟೊಶಾಪ್‌ ಬಳಸುತ್ತಿದ್ದಾರೆ. ಇಂತಹ ವೃತ್ತಿಯಲ್ಲಿರುವವರಿಗೆ ತಮ್ಮ ವೃತ್ತಿಯಲ್ಲಿ ಸಾಧನೆ ಮಾಡಲು, ಇನ್ನಷ್ಟು ಪ್ರಗತಿ ಕಾಣಲು ಈ ಸ್ಕಿಲ್‌ ಅಗತ್ಯ. ಫೋಟೊಗ್ರಾಫರ್‌ಗಳಿಗಂತೂ ಇದು ಗೊತ್ತಿರಲೇಬೇಕಾದ ಸ್ಕಿಲ್‌.  ಸೋಷಿಯಲ್‌ ಮೀಡಿಯಾ, ಪ್ರಿಂಟ್‌ ಮೀಡಿಯಾ, ವೆಬ್ಸೈಟ್‌, ಆಪ್‌ಗಳಲ್ಲಿ ಕಾರ್ಯನಿರ್ವಹಿಸಲು ಕೂಡ ಫೋಟೊಶಾಪ್‌ ತಿಳಿದಿರುವುದು ಅತ್ಯಂತ ಅವಶ್ಯ.

ಏನು ಓದಿರಬೇಕು?

ನೀವು ಫೋಟೊಶಾಪ್‌ ಕಲಿಯಲು ಆಸಕ್ತಿ ಹೊಂದಿದ್ದರೆ ಸಾಕು. ನಮ್ಮ ವಿಜಯನಗರ ಬಾಲ್ಕ್‌ ಕಂಪ್ಯೂಟರ್‌ ತರಬೇತಿ ಕೇಂದ್ರದಲ್ಲಿ ಇದಕ್ಕೆ ಸಂಬಂಧಪಟ್ಟ ಸಂಪೂರ್ಣ ಕೌಶಲಗಳನ್ನು ಕಲಿಸಿಕೊಡಲಾಗುತ್ತದೆ. ನೀವು ಫೋಟೊಶಾಪ್‌ ಕಲಿಯಬೇಕಿದ್ದರೆ ನಿಮ್ಮಲ್ಲಿ ಆಸಕ್ತಿ ತುಂಬಾ ಮುಖ್ಯ. ಒಂದಿಷ್ಟು ಕ್ರಿಯಾಶೀಲ ಮನಸ್ಸು ಇರುವ ಎಲ್ಲರಿಗೂ ಸ್ವಾಗತ. ಎಸ್‌ಎಸ್‌ಎಲ್‌ಸಿ ಪಾಸಾಗಿದ್ದರೂ, ಫೇಲ್‌ ಆಗಿದ್ದರೂ ಈ ಕೋರ್ಸ್‌ ಮಾಡಬಹುದು. ನಮ್ಮಿಂದ ಸರ್ಟಿಫಿಕೇಟನ್‌ ಪಡೆದರೆ ಮುಂದೆ ನಿಮ್ಮ ಕರಿಯರ್‌ಗೆ ತುಂಬಾ ಉಪಯೋಗವಾಗಲಿದೆ.

ಒಳ್ಳೆಯ ಕರಿಯರ್‌ ನಿಮ್ಮದಾಗಿಸಿ

ಫೋಟೊಶಾಪ್‌ ಮತ್ತು ಅದಕ್ಕೆ ಸಂಬಂಧಪಟ್ಟ ಸರ್ಟಿಫಿಕೇಟ್‌ಗಳನ್ನು ಪಡೆದರೆ ನೀವು ವಿವಿಧ ಕ್ಷೇತ್ರಗಳಲ್ಲಿ ಅವಕಾಶ ಪಡೆಯಬಹುದು. ಮೀಡಿಯಾ ಮತ್ತು ಜಾಹೀರಾತು ವಿಭಾಗದಲ್ಲಿಯೂ ಅವಕಾಶ ಪಡೆಯಬಹುದು. ಸಣ್ಣ ಸ್ಟುಡಿಯೋದಿಂದ ಹಿಡಿದು ದೊಡ್ಡ ಕಂಪನಿಯಲ್ಲಿಯೂ ಅವಕಾಶ ಪಡೆಯಬಹುದಾಗಿದೆ.

ಯಾವೆಲ್ಲ ಹುದ್ದೆಗಳನ್ನು ಪಡೆಯಬಹುದು?

ನಿಮ್ಮ ಪ್ರತಿಭೆಗೆ ತಕ್ಕಂತೆ ಹೆಚ್ಚುವರಿಯಾಗಿ ಫೋಟೊಶಾಪ್‌ ಸ್ಕಿಲ್‌ ಇದ್ದರೆ ಈ ಮುಂದಿನ ಉದ್ಯೋಗ ಪಡೆಯಬಹುದು.

ಫೋಟೊಗ್ರಾಫರ್‌: ನಿಮಗೆ ಕ್ಯಾಮರಾಗಳ ಮೇಲೆ ಹಿಡಿತವಿದ್ದರೆ, ನೀವು ಒಳ್ಳೆಯ ಫೋಟೊಗ್ರಾಪರ್‌ ಆಗಿದ್ದರೆ ಕಚ್ಚಾ ಚಿತ್ರಗಳನ್ನು ಎಡಿಟ್‌ ಮಾಡುವುದು ಅತ್ಯಂತ ಅವಶ್ಯಕ. ನೀವು ಒಳ್ಳೆಯ ಫೋಟೊಗ್ರಾಫರ್‌ ಆಗಬೇಕಾದರೆ ಒಳ್ಳೆಯ ಫೋಟೊ ಎಡಿಟರ್‌ ಕೂಡ ಆಗಿರಬೇಕು. ನೀವು ತೆಗೆದ ಫೋಟೊಗೆ ಬೆಳಕಿನ ಸಮತೋಲನ, ಕಲರ್‌ ಇತ್ಯಾದಿಗಳನ್ನು ಫೋಟೊಶಾಪ್‌ ಮೂಲಕ ಹಾಕಬಹುದು.

ವಿಷುಯಲ್‌ ಎಫೆಕ್ಟ್‌ ಆರ್ಟಿಸ್ಟ್‌: ಯಾವುದೇ ಸಿನಿಮಾ ಅಥವಾ ದೃಷ್ಯವು ಅನನ್ಯವಾಗಬೇಕಾದರೆ ವಿಷುಯಲ್‌ ಎಫೆಕ್ಟ್‌ ಆರ್ಟಿಸ್ಟ್‌ನ ಸಹಾಯ ಬೇಕೆ ಬೇಕು. ಅವತಾರ್‌, ಬಾಹುಬಲಿಯಂತಹ ಚಿತ್ರಗಳಲ್ಲಿಯೂ ಫೋಟೊಶಾಪ್‌ ಕೈವಾಡ ಇದ್ದೇ ಇದೆ. ಆದರೆ, ಇದೊಂದೇ ಕೌಶಲ ಸಾಕಾಗೊಲ್ಲ ಎನ್ನುವುದೂ ನೆನಪಿನಲ್ಲಿರಬೇಕು.

ಅಡ್ವಟೈಸರ್‌: ತಮ್ಮ ಗ್ರಾಹಕರಿಗೆ ಉತ್ಪನ್ನ ಅಥವಾ ಸೇವೆಗಳನ್ನು ಅದ್ಭತವಾಗಿ ಪರಿಚಯಿಸಲು ಜಾಹೀರಾತುಗಳನ್ನು ರಚಿಸಲು ಫೋಟೊಶಾಪ್‌ ಬಲ್ಲವರ ಅವಶ್ಯಕತೆ ಇರುತ್ತದೆ. ಆನ್‌ಲೈನ್‌ ವಿಡಿಯೋ ಅಥವಾ ಬ್ಲಾಗ್‌ಗಳಿಗೆ ಕ್ರಿಯೆಟಿವ್‌ ಚಿತ್ರಗಳನ್ನು, ಇನ್ಫೋಗ್ರಾಪಿಕ್ಸ್‌ಗಳನ್ನು ರಚಿಸಲು ಸಹ ನಿಮಗೆ ಫೋಟೊಶಾಪ್‌ ಸ್ಕಿಲ್‌ ಅಗತ್ಯ.

ಇವು ಉದಾಹರಣೆಯಷ್ಟೇ, ಸಾವಿರಾರು ಉದ್ಯೋಗಗಳ ಜೊತೆ ಫೋಟೊಶಾಪ್‌ ಲಿಂಕ್‌ ಆಗಿದ್ದು, ನಿಮ್ಮ ಆಸಕ್ತಿಗೆ ತಕ್ಕಂತೆ ಉದ್ಯೊಗ ಪಡೆಯಬಹುದು. ನಿಮ್ಮದೇಸ್ವಂತ ಸ್ಟುಡಿಯೋ ಹಾಕಿ ಬಿಸ್ನೆಸ್‌ಮೆನ್‌ ಆಗಿಯೂ ಬೆಳೆಯಬಹುದು.

ವೇತನ ಎಷ್ಟಿರುತ್ತದೆ?

ನೀವು ಎಲ್ಲಿ ಉದ್ಯೋಗ ಪಡೆಯುವಿರಿ ಎನ್ನುವುದರ ಆಧಾರದ ಮೇಲೆ ಆರಂಭದಲ್ಲಿ ೧೦ರಿಂದ ೩೦ ಸಾವಿರ ರೂ. ಆಸುಪಾಸಿನಲ್ಲಿ ವೇತನ ಪಡೆಯಬಹುದು. ಸಾಕಷ್ಟು ಅನುಭವ ಪಡೆದ ಬಳಿಕ ಇನ್ನಷ್ಟು ಒಳ್ಳೆಯ ವೇತನ ನಿಮ್ಮದಾಗಬಹುದು. ಫೋಟೊಶಾಪ್‌ ಮಾತ್ರವಲ್ಲದೆ ನೀವು ಉದ್ಯೋಗ ಮಾಡುವ ಕ್ಷೇತ್ರದ ಇನ್ನಿತರ ಕೌಶಲ್ಯಗಳನ್ನು ಕಲಿತರೆ ಇನ್ನಷ್ಟು ಒಳ್ಳೆಯ ವೇತನ ಪಡೆಯಬಹುದು.

ಇನ್ನೇಕೆ ತಡ, ಈಗಲೇ ಫೋಟೊಶಾಪ್‌ ಕೋರ್ಸ್‌ ಕಲಿಯಲು ಬೆಂಗಳೂರಿನ ವಿಜಯನಗರದಲ್ಲಿರುವ ನಮ್ಮ ಸಂಸ್ಥೆಗೆ ಭೇಟಿ ನೀಡಿ ಅಥವಾ ಫೋನ್‌ ಮಾಡಿ. ಹೆಚ್ಚಿನ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ.

Leave a Reply

Your email address will not be published. Required fields are marked *

error: Content is protected !!