ಇತ್ತೀಚೆಗೆ ರಾಜೇಶ್ ಎಂಬ ಯುವಕನಿಗೆ ಅಮೇಜಾನ್ ಕಂಪನಿಯಿಂದ ಉದ್ಯೋಗ ಸಂದರ್ಶನಕ್ಕೆ ಆಹ್ವಾನ ಬಂತು. ಮೊದಲಿಗೆ ಲಿಖಿತ ಪರೀಕ್ಷೆ ಇತ್ತು. ಆಪ್ಟಿಟ್ಯೂಡ್ ಮತ್ತು ಆತನ ಉದ್ಯೋಗ ಕ್ಷೇತ್ರಕ್ಕೆ ಸಂಬಂಧಪಟ್ಟ ಪ್ರಶ್ನೆಗಳು ಇತ್ತು. ಎರಡನೇ ಸುತ್ತಿನ ಪರೀಕ್ಷೆ ಕೈ ಬರಹದ ಮೂಲಕ ಬರೆಯುವುದಾಗಿತ್ತು. ಆತ ಹ್ಯಾಂಡ್‌ರೈಟಿಂಗ್ ಬಿಟ್ಟು ಹಲವು ವರ್ಷಗಳಾಗಿದ್ದವು. ಪ್ರಶ್ನೆಪತ್ರಿಕೆ ಸುಲಭವಾಗಿದ್ದರೂ ಆತನಿಗೆ ಕೈಬರಹದಲ್ಲಿ ಸರಿಯಾಗಿ ಬರೆಯಲಾಗಲಿಲ್ಲ. ಫಲಿತಾಂಶ- ಆತನಿಗೆ ಆ ಉದ್ಯೋಗ ದೊರಕಲಿಲ್ಲ.
ಈ ಕಂಪ್ಯೂಟರ್ ಕಾಲದಲ್ಲಿ ಕೈಬರಹದ ಪರೀಕ್ಷೆ ಯಾಕೆ ಎಂದು ನಿಮಗೆ ಆಶ್ಚರ್ಯವಾಗಬಹುದು. ಜಗತ್ತಿನ ಕಂಪನಿಗಳು ಅಭ್ಯರ್ಥಿಯ ಸಾಚತನವನ್ನು, ವ್ಯಕ್ತಿತ್ವವನ್ನು ಆತನ ಕೈಬರಹದ ಮೂಲಕ ಅಳೆಯಲು ಆರಂಭಿಸಿವೆ. ಗ್ರಾಫೊಲಜಿ ಎಂಬ ಕೈಬರಹ ವಿಶ್ಲೇಷಣೆ ಮೂಲಕವೇ ಅಮೇಜಾನ್‌ನಂತಹ ಕಂಪನಿಗಳು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುತ್ತಿವೆ. ಹೀಗಾಗಿ, ಈ ಟೆಕ್ ಯುಗದಲ್ಲಿಯೂ ನಿಮ್ಮ ಕೈಬರಹದ ಕಡೆಗೆ ಗಮನ ನೀಡಲೇಬೇಕು.
ನಿಮ್ಮ ವ್ಯಕ್ತಿತ್ವದ ಸೂಚಕ- ಕೈಬರಹ
ದೊಡ್ಡ ಅಕ್ಷರಗಳು: ನೀವು ದೊಡ್ಡ ಅಕ್ಷರಗಳಲ್ಲಿ ಬರೆಯುವವರಾಗಿದ್ದರೆ ನೀವು ಪೀಪಲ್ ಓರಿಯೆಂಟೆಡ್. ಹೆಚ್ಚು ಗಮನ ಸೆಳೆಯಲು ಯತ್ನಿಸುವ ವ್ಯಕ್ತಿತ್ವ ನಿಮ್ಮದು.
ಸಣ್ಣ ಅಕ್ಷರಗಳು: ನೀವು ಸಣ್ಣ ಅಕ್ಷರಗಳಲ್ಲಿ ಬರೆಯುವವರು ಆಗಿದ್ದರೆ ನಿಮಗೆ ಅತ್ಯುತ್ತಮ ಗಮನ ಕೇಂದ್ರೀಕರಿಸುವ ಗುಣವಿದೆ ಎಂದರ್ಥ.
ಬಲಭಾಗಕ್ಕೆ ಬಾಗಿದ ಅಕ್ಷರಗಳು: ನೀವು ಹೃದಯದಿಂದ ಯೋಚಿಸುವವರು, ಸ್ನೇಹಪರರು. ಭಾವನಾತ್ಮಕ ವ್ಯಕ್ತಿತ್ವ ನಿಮ್ಮದು. ಸ್ನೇಹಿತರು, ಕುಟುಂಬಕ್ಕೆ ಮೌಲ್ಯ ತುಂಬಬಲ್ಲವರು.
ಬಾಗದೆ ಇರುವ ಅಕ್ಷರಗಳು: ನೀವು ಲಾಜಿಕ್ ಆಗಿ ಯೋಚಿಸುವವರು. ಭಾವನೆಗೆ ಗಮನ ನೀಡದೆ ಇರುವವರು.
ಎಡಭಾಗಕ್ಕೆ ಬಾಗಿದ ಅಕ್ಷರಗಳು: ನೀವು ಜನರ ಬಗ್ಗೆ ಗಮನ ಕೊಡುವುದಕ್ಕಿಂತ ಕೆಲಸದ ಬಗ್ಗೆ ಹೆಚ್ಚಿನ ಗಮನ ನೀಡಲು ಬಯಸುವಿರಿ. ನಿಮ್ಮದು ರಿಸರ್ವ್ಡ್ ವ್ಯಕ್ತಿತ್ವ. ನಾನು, ನನ್ನದು ಎಂಬ ಭಾವನೆ ಹೆಚ್ಚಿರುತ್ತದೆ.
ದಪ್ಪ ಅಕ್ಷರ: ನೀವು ಒತ್ತಿ ಬರೆಯುವವರು ಆಗಿದ್ದರೆ ನೀವು ಬಲವಾದ ಭಾವನಾತ್ಮಕ ವ್ಯಕ್ತಿತ್ವ. ನೀವು ತಕ್ಷಣ ಪ್ರತಿಕ್ರಿಯಿಸುವ ವ್ಯಕ್ತಿತ್ವ ಹೊಂದಿದ್ದೀರಿ.
ಹಗುರ ಅಕ್ಷರ: ಹೆಚ್ಚು ಒತ್ತಿ ಬರೆಯದೆ, ತೆಳ್ಳಗೆ ಬರೆಯುವವರು ಆಗಿದ್ದರೆ ನೀವು ಯಾವುದೇ ಸ್ಥಳಕ್ಕೆ ಹೊಂದಿಕೊಳ್ಳುವವರು ಎಂದರ್ಥ. ನೀವು ಹೆಚ್ಚು ಭಾವಜೀವಿಯಲ್ಲ.
ಈ ಕೆಳಗಿನ ಇನ್ಫೋಗ್ರಾಫಿಕ್ಸ್ ಮೂಲಕ ನಿಮ್ಮ ಕೈಬರಹ ಮತ್ತು ವ್ಯಕ್ತಿತ್ವವನ್ನು ತಿಳಿದುಕೊಳ್ಳಿ.
ವಿಜಯನಗರ ಬಾಲ್ಕ್ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಕೈಬರಹಕ್ಕೆ ಸಂಬಂಧಪಟ್ಟ ಕೋರ್ಸ್ ಇದ್ದು, ಹೆಚ್ಚಿನ ಮಾಹಿತಿಗೆ ತಕ್ಷಣ ಸಂಪರ್ಕಿಸಿ.
ಹ್ಯಾಂಡ್‌ರೈಟಿಂಗ್, ಕ್ಯಾಡ್ ಕೋರ್ಸ್ ಸೇರಿದಂತೆ ಹತ್ತು ಹಲವು ಕೋರ್ಸ್ ಕಲಿಯಲು ವಿಜಯನಗರ ಬಾಲ್ಕ್ ಕಂಪ್ಯೂಟರ್ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ. ನಮ್ಮ ವಿಳಾಸ: BALC Computer Education, #427/A, 2nd Floor ,8th main, Service Rd, near karnataka grameena bank, Vijayanagar, Bengaluru, Karnataka 560040