2021ರ ಹೊಸ ವರ್ಷಕ್ಕೆ ಸ್ವಾಗತ: ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಅಮೂಲ್ಯ ಟಿಪ್ಸ್

2021 ಹೊಸ ವರ್ಷಕ್ಕೆ ದಿನಗಣನೆ ಆರಂಭವಾಗಿದೆ. ಕರಿಯರ್‌ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ವಿಜಯನಗರ ಬಾಲ್ಕ್ ಒಂದಿಷ್ಟು ಸಲಹೆಗಳನ್ನು ನೀಡಿದೆ. ಕರಿಯರ್‌ ಕ್ಷೇತ್ರದ ಪ್ರಮುಖ ಟಿಪ್ಸ್‌ಗಳನ್ನು ಆಯ್ದು ಇಲ್ಲಿ ನೀಡಲಾಗಿದ್ದು, ಈ ಸಲಹೆಗಳನ್ನು ನೀವು ಪಾಲಿಸಿ ಯಶಸ್ಸು ನಿಮ್ಮದಾಗಿಸಿಕೊಳ್ಳಬಹುದು.

ಹೊಸ ವರ್ಷದಲ್ಲಿ ಕರಿಯರ್‍ನಲ್ಲಿ ಪ್ರಗತಿ ಕಾಣಲು ಪ್ರಯತ್ನಿಸಬೇಕು ಎಂಬ ಸಂಕಲ್ಪ ಬಹುತೇಕರು ಮಾಡಿಕೊಂಡಿರುತ್ತಾರೆ. ಉದ್ಯೋಗದಲ್ಲಿ ಪ್ರಗತಿ ಕಾಣುವ ಕುರಿತು ನೀವು ತಜ್ಞರಿಂದ, ಈಗಾಗಲೇ ಉದ್ಯೋಗದಲ್ಲಿ ಉನ್ನತ ಹಂತದಲ್ಲಿರುವವರಿಂದ, ಸಮಲೋಚಕರಿಂದ ಟಿಪ್ಸ್ ಪಡೆದಿರಬಹುದು. ಕರಿಯರ್‍ನಲ್ಲಿ ಸಾಧನೆ ಮಾಡಿರುವವರ ಅನುಭವಗಳನ್ನು ಕೇಳುವುದು ತುಂಬಾ ಒಳ್ಳೆಯ ಕೆಲಸ. ಅವರ ಅನುಭವ, ಆಲೋಚನೆಗಳು ಅತ್ಯುನ್ನತವಾಗಿರುತ್ತವೆ. ಇಂತಹ ಅನುಭವಿ ಸಾಧಕರು ಬಿಸ್ನೆಸ್ ಇನ್‍ಸೈಡರ್‍ಗೆ ನೀಡಿದ ಸಂದರ್ಶನದಲ್ಲಿ ಕೆಲವು ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ.

ನೆಟ್‍ವರ್ಕಿಂಗ್ ಅಗತ್ಯ

ನೀವು ಮಾಡುವ ಪ್ಲಾನ್ ನಿಮ್ಮೊಂದಿಗೆ ಕೊಂಚ ಸಮಯ ಮಾತ್ರ ಇರುತ್ತದೆ. ಆ ಪ್ಲಾನ್ ಅನ್ನು ಯಶಸ್ಸಾಗಿ ಪರಿವರ್ತಿಸಲು ಜನರ ಅವಶ್ಯಕತೆ ಇದೆ. ಇದಕ್ಕಾಗಿ ನೀವು ನಿಮ್ಮ ನೆಟ್‍ವರ್ಕ್ ಅನ್ನು ವಿಸ್ತರಿಸಿಕೊಳ್ಳಿರಿ ಎನ್ನುತ್ತಾರೆ ಲಿಂಕ್ಡ್‍ಇನ್‍ನ ಸಹ ಸ್ಥಾಪಕ ರೆಯಿನ್ ಹೊïಮನ್. `ಪ್ರತಿಯೊಬ್ಬರು ಬಲವಾದ ನೆಟ್‍ವರ್ಕ್ ರೂಪಿಸಿಕೊಳ್ಳಬೇಕು. ಇದು ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸಲಿದೆ’ ಎಂದು ಅವರು ಅಭಿಪ್ರಾಯಪಡುತ್ತಾರೆ.

ಮೀಟಿಂಗ್ ಮೂಲಕ ಕಲಿಕೆ

ಫೇಸ್‌ಬುಕ್‌ನ ಪ್ರಾಡಕ್ಟ್ ವಿನ್ಯಾಸ ವಿಭಾಗದ ಜೂಲಿಯೆ ಜುವೊ ಅವರು ದಿನದ ಹೆಚ್ಚಿನ ಸಮಯವನ್ನು ಮೀಟಿಂಗ್‍ನಲ್ಲಿ ಕಳೆಯುತ್ತಾರೆ. ಆಕೆ ಪ್ರತಿಯೊಂದು ಮೀಟಿಂಗ್ ಅನ್ನೂ ಗೇಮ್ ಪ್ಲಾನರ್ ಆಗಿ ಬಳಸುತ್ತಾರಂತೆ. `ನಾನು ನನ್ನ ಸಮಯದ ಕುರಿತು ಹೆಚ್ಚು ಗಮನ ನೀಡುತ್ತೇನೆ. ಪ್ರತಿದಿನದ ಮೀಟಿಂಗ್ ಹೊಸ ಅನುಭವ ನೀಡುತ್ತದೆ. ಇಲ್ಲಿ ಕಲಿಯಲು ಸಾಕಷ್ಟು ವಿಷಯಗಳು ಸಿಗುತ್ತವೆ. ನಾನು ಪ್ರತಿಸ್ಪರ್ಧಿಗೂ ಒಂದು ಹೊಸ ಆಲೋಚನೆಯ ಜೊತೆ ಹೋಗುತ್ತೇನೆ. ಇಂತಹ ಐಡಿಯಾಗಳೇ ಯಶಸ್ಸಿಗೆ ಕಾರಣ.

ಸ್ಮಾರ್ಟ್‍ವರ್ಕ್ ಅಗತ್ಯ

ಕರಿಯರ್‍ನಲ್ಲಿ ವಿನಮ್ರರಾಗಿರಬೇಕು ಮತ್ತು ಕಠಿಣ ಪರಿಶ್ರಮಿಗಳಾಗಿರಬೇಕು. ನನಗೆ ಕಠಿಣ ಪರಿಶ್ರಮಿಗಳು ಬೇಡ, ನನಗೆ ಸ್ಮಾರ್ಟ್ ಆಗಿ ಕೆಲಸ ಮಾಡುವವರು ಬೇಕು, ಇದೇ ನನ್ನ ವೃತ್ತಿಪರ ಗುಟ್ಟು ಎನ್ನುತ್ತಾರೆ ಬರ್ಗರ್ ಕಿಂಗ್, ಟಿಮ್ ಹೊರ್ಟನ್ಸ್ ಮತ್ತು ಪೆÇಪಿಯಿಸ್ ಎಂಬ ಅಂತಾರಾಷ್ಟ್ರೀಯ ರೆಸ್ಟೂರೆಂಟ್ ಬ್ರಾಂಡ್‍ನ ಸಿಇಒ ಆಗಿರುವ ಡೇನಿಯಲ್ ಸ್ಕಾವಟ್ರ್ಸ್ ಅಭಿಪ್ರಾಯಪಡುತ್ತಾರೆ.

ಟ್ರೇನಿಂಗ್ ಅವಶ್ಯಕತೆ

ಯಶಸ್ಸು ಕೇವಲ ಕನಸು ಕಾಣುವುದಲ್ಲ, ಅದು ಕೆಲಸಕ್ಕೆ ಸಂಬಂಧಪಟ್ಟದ್ದಾಗಿದೆ ಎಂದು ಹೇಳುತ್ತಾರೆ  ಅಮೆರಿಕದ ಖ್ಯಾತ `Áಷಣಕಾರ, ಬರಹಗಾರ ಮತ್ತು ಉದ್ಯಮಿ ಟಿಮ್ Éರಿಸ್.

`ನಿಮ್ಮ ಹೃದಯ ಬಡಿತ ನಿಮಿಷಕ್ಕೆ 180 ಸಲ ಬಡಿಯಬೇಕೆಂದರೆ ನೀವು ಅದಕ್ಕೆ ತರಬೇತಿಯನ್ನು ನೀಡಬೇಕು. ಇದೇ ರೀತಿ ನೀವು ಅಸಾಧ್ಯವಾಗಿರುವುದನ್ನು ಸಾಧಿಸಲು ಮತ್ತು ಕರಿಯರ್‍ನಲ್ಲಿ ಯಶಸ್ಸು ಪಡೆಯಲು ಸದಾ ತರಬೇತಿ ಪಡೆಯುತ್ತ ಇರಬೇಕು. ನೀವು  ಫುಟ್‌ಬಾಲ್ ಬಗ್ಗೆ ಪುಸ್ತಕ ಓದಿ ವಿಶ್ವಕಪ್‍ಗೆ ಹೋಗಲು ಸಾಧ್ಯ್ಯವಿಲ್ಲ. ಆ ಆಟಕ್ಕೆ ಸಾಕಷ್ಟು ತರಬೇತಿ ಪಡೆದು ಮುಂದುವರೆಯಬೇಕು’ ಎನ್ನುತ್ತಾರೆ ಅವರು.

ರಿಸ್ಕ್ ತೆಗೆದುಕೊಳ್ಳುವುದು

ಷಾರ್ಕ್ ಟ್ಯಾಂಕ್ ನಟಿ ಬಾರ್ಬರಾ ಕೊರ್ಕೊರಸನ್ ಪ್ರಕಾರ `ನಾವು ಯಾವಾಗಲೂ ದೊಡ್ಡ ಸವಾಲುಗಳನ್ನು ಮೈಮೇಲೆ ಎಳೆದುಕೊಳ್ಳಬೇಕು’. ನೀವು ಯಾವ ವಿಷಯದ ಬಗ್ಗೆ ಬೇಕಾದರೂ ರಿಸ್ಕ್ ತೆಗೆದುಕೊಳ್ಳಬಹುದು. ನಿಮ್ಮ ಕರಿಯರ್ ಬಗ್ಗೆ ಅಥವಾ ನಿಮ್ಮ ಸ್ವಂತ ಬಿಸ್ನೆಸ್ ಸ್ಥಾಪಿಸುವ ಕುರಿತು ರಿಸ್ಕ್ ತೆಗೆದುಕೊಳ್ಳಬಹುದು.

ವರ್ಕ್ ಲೈಫ್‌ ಸಮಲೋಲನ

ನಿಮ್ಮ ಕೆಲಸದ ಮತ್ತು ವೈಯಕ್ತಿಕ ಜೀವನದ ನಡುವೆ ಅತ್ಯುತ್ತಮ ಸಮತೋಲನ ಹೊಂದಿರಿ ಎಂದು ಗೂಗಲ್‍ನ ಎಸ್‍ವಿಪಿ ಪ್ಲಾಟ್Áಮ್ರ್ಸ್‍ನ ಹಿರೊಷಿ ಲೊಕ್‍ಹೆಮಿಯರ್ ಅವರು ಹೇಳುತ್ತಾರೆ. ಅವರ ಪ್ರಕಾರ, ನಾವು ಕಾಳಜಿ ವಹಿಸುವ ಸಂಗತಿಗಳಿಗೂ ಸಮಯ ವಿನಿಯೋಗಿಸಬೇಕು. ಶಾಲೆಗೆ ಮಕ್ಕಳನ್ನು ಬಿಡುವುದು, ಕುಟುಂಬದ ಜೊತೆ ಯಾವುದಾದರೂ ಶೋಗಳನ್ನು ನೋಡುವುದು ಇತ್ಯಾದಿ ಮಾಡಬೇಕು. ಇದರ ಜೊತೆ ನಿಮ್ಮ ಕರಿಯರ್ ಪ್ರಗತಿಗೂ ಗಮನ ನೀಡಬೇಕು ಎಂದು ಅವರು ಹೇಳುತ್ತಾರೆ.

ಕ್ರೆಡಿಟ್ ನೀಡಿ

ಯಶಸ್ಸು ಎನ್ನುವುದು ಎಲ್ಲಾ ಕ್ರೆಡಿಟ್ ತನ್ನದಾಗಿಸುವುದಲ್ಲ, ಅದು ಇತರರಿಗೂ ಕ್ರೆಡಿಟ್ ನೀಡುವುದಾಗಿದೆ ಎನ್ನುತ್ತಾರೆ ಪೇಪಾಲ್‍ನ ಸಿಇಒ ಡ್ಯಾನ್ ಸ್ಕಾಲ್‍ಮನ್. ನಿಮ್ಮ ತಂಡದಲ್ಲಿ ಕೆಲಸ ಮಾಡುವವರ ಸಾ`Àನೆಗೆ ಪ್ರತಿಸಲ ನೀಡಿ. ತಂಡದ ಸದಸ್ಯರು ಮಾಡಿದ ಕೆಲಸದ ಕ್ರೆಡಿಟ್ ಅವರಿಗೆ ನೀಡಿ ಮತ್ತು ಅದರ ಲಾಭವನ್ನು ನೀವು ಪಡೆಯಬೇಡಿ ಎಂದು ಅವರು ಸಲಹೆ ನೀಡುತ್ತಾರೆ.

ನಿಮ್ಮ ಯಶಸ್ಸಿಗೆ ಸಹಕರಿಸುವ ಕೋರ್ಸ್‌ಗಳನ್ನು ಕಲಿಯಲು ವಿಜಯನಗರ ಬಾಲ್ಕ್‌ಗೆ ಭೇಟಿ ನೀಡಿ. ವಿಳಾಸ: BALC Computer Education,  #427/A, 2nd Floor ,8th main, Service Rd, near karnataka grameena bank, Vijayanagar, Bengaluru, Karnataka 560040

You May Also Like

3 Comments

  1. Well presented course very likeable teachers&excellent teaching ,learnt a lot and it was my great experience… ,

Leave a Reply

Your email address will not be published. Required fields are marked *

error: Content is protected !!