ಹೊಸ ಸ್ಕಿಲ್ ಕಲಿಯಲು ಬಯಸುವ ಯುವ ಜನತೆಗೆ ಗೈಡ್

ಈಗ ಬಹುತೇಕರು ಹೊಸ ಕೌಶಲ ಕಲಿಯಲು ಆದ್ಯತೆ ನೀಡುತ್ತಿದ್ದಾರೆ. ಇವುಗಳಲ್ಲಿ ಹೆಚ್ಚಿನವರು ಹೆಸರು ಅಥವಾ ಸರ್ಟಿಫಿಕೇಟ್‍ಗಾಗಿ ಮಾತ್ರ ಕಲಿಯುತ್ತಾರೆ. ಸಂಪೂರ್ಣವಾಗಿ ಅರ್ಥಮಾಡಿಕೊಂಡು ಕಲಿಕೆಗೆ ಆದ್ಯತೆ ನೀಡಬೇಕು.

ಕಲಿಕೆಯ ಕಲೆ

ಕೆಲವರಿಗೆ ವಿಡಿಯೋ ನೋಡುತ್ತ ಕಲಿಯುವುದು ಇಷ್ಟ. ಇನ್ನು ಕೆಲವರಿಗೆ ಪಠ್ಯ ಓದುತ್ತ ಕಲಿಯುವುದು ಇಷ್ಟ. ನಿಮಗೆ ಯಾವ ವಿಧಾನ ಇಷ್ಟ ಎಂದು ತಿಳಿದುಕೊಂಡು ಮುಂದುವರೆಯಿರಿ. ಕಲಿಕೆ ಎನ್ನುವುದು ಕಲೆ. ನಿಮಗೆ ಇಷ್ಟವಾಗುವ ವಿಧಾನವನ್ನು ಅನುಸರಿಸಿಕೊಂಡು ಕಲಿಯಿರಿ. ಒಟ್ಟಾರೆ, ನೀವು ವಿಷಯವನ್ನು ಸಮರ್ಪಕವಾಗಿ ಅರ್ಥಮಾಡಿಕೊಂಡು ಕಲಿಯುವುದು ಮುಖ್ಯ.

* ಪ್ರತಿಭೆಗಳೆಂಬ ಮಿಥ್ಯೆ ನಂಬದಿರಿ

ಕೆಲವರಲ್ಲಿ ಮಾತ್ರ ಪ್ರತಿಭೆ ಇರುತ್ತದೆ ಎಂಬ ನಂಬಿಕೆ ಬಹುತೇಕರಲ್ಲಿದೆ. ಕಷ್ಟಪಟ್ಟು ಪ್ರಯತ್ನಿಸಿದರೆ ಎಲ್ಲರೂ ಪ್ರತಿಭಾನ್ವಿತರಾಗಬಹುದು. ಪ್ರತಿಭೆ ಎನ್ನುವುದು ವಂಶವಾಹಿಯಲ್ಲ. ಅದು ನಿರಂತರ ಪ್ರಯತ್ನದಿಂದ ಪಡೆಯುವಂತದ್ದು. ಹೀಗಾಗಿ, ನನ್ನಿಂದ ಸಾಧ್ಯಯವಿಲ್ಲ, ನನ್ನಲ್ಲಿ ಪ್ರತಿಭೆಯಿಲ್ಲ ಇತ್ಯಾದಿ ನಕಾರಾತ್ಮಕ ಚಿಂತನೆ ಬಿಟ್ಟು ಹೊಸ ಕೌಶಲಗಳನ್ನು ಶ್ರದ್ಧೆಯಿಂದ ಕಲಿಯಿರಿ.

* ಅರ್ಥಪೂರ್ಣವಾಗಿರಿ

ಯಾವುದೇ ಕೌಶಲ ಕಲಿಯುವ ಮೊದಲು ಅದರ ಅಗತ್ಯವಿದೆಯೇ ಎಂದು ಆಲೋಚಿಸಿ. ನಿಮ್ಮಲ್ಲಿ ಅದನ್ನು ಕಲಿಯುವ ಆಸಕ್ತಿ ಇರುವುದೇ ತಿಳಿದುಕೊಳ್ಳಿಘಿ. ಆನ್‍ಲೈನ್ ಪೇಯ್ಡ್ ಕೋರ್ಸ್‍ಗಳಿಗೆ ಸೇರುವ ಮೊದಲು ಅಲ್ಲಿರುವ ಉಚಿತ ಕೋರ್ಸ್‍ಗಳಲ್ಲಿ ಭಾಗವಹಿಸಿ ಕಲಿಕಾ ವಿಧಾನವನ್ನು ತಿಳಿದುಕೊಳ್ಳಿರಿ.

* ಬಿಡುವಿನ ವೇಳೆ ಬಳಸಿಕೊಳ್ಳಿ

ಆಫೀಸ್‍ನಲ್ಲಿ ಬಿಡುವಿನ ವೇಳೆಯಲ್ಲಿ ಕಂಪ್ಯೂಟರ್‍ನಲ್ಲಿ ಏನೋ ಹುಡುಕಾಟ ನಡೆಸುತ್ತ ಕಾಲಹರಣ ಮಾಡುತ್ತಿರಬಹುದು. ಅದರ ಬದಲು ವಿಕಿಪೀಡಿಯಾ ಅಥವಾ ಇನ್ಯಾವುದೋ ಹೌಟು ತಾಣಕ್ಕೆ ಹೋಗಿ ಯಾವುದಾದರೂ ಹೊಸ ವಿಷಯ ಕಲಿಯಿರಿ. ಯಾವುದಾದರೂ ವಿಷಯದ ಕುರಿತು ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ.

* ಕುತೂಹಲಿಗಳಾಗಿರಿ

ಹೊಸ ವಿಷಯಗಳನ್ನು ಕಲಿಯುವ ಆಸಕ್ತಿ ಇರಲಿ. ಉದ್ಯೋಗ ಕ್ಷೇತ್ರದಲ್ಲಿ ಆಗುವ ಬದಲಾವಣೆಗಳ ಕುರಿತು ಆಸಕ್ತಿಘಿ, ಕುತೂಹಲ ನಿಮ್ಮಲ್ಲಿರಲಿ. ಬದಲಾಗುವ ಕಾಲಕ್ಕೆ ತಕ್ಕಂತೆ ಅಪ್‍ಡೇಟ್ ಆಗುತ್ತ ಇರಿ.

* ಮನಸ್ಥಿತಿ ಬದಲಾಯಿಸಿಕೊಳ್ಳಿ

ನನ್ನಿಂದ ಸಾಧ್ಯವಿಲ್ಲ., ಯಾರಿಗೆ ಬೇಕು ಹೊಸ ಕೌಶಲ, ಯಾಕೆ ಕಲಿಯಬೇಕು ಎಂದೆಲ್ಲ ಹೇಳುತ್ತ ಕಾಲಹರಣ ಮಾಡಬೇಡಿ. ಹೊಸ ಕೌಶಲಗಳನ್ನು ಕಲಿಯಲು ಪೂರಕವಾಗಿ ನಿಮ್ಮ ಮನಸ್ಥಿತಿಯನ್ನು ಹೊಂದಿಸಿಕೊಳ್ಳಿ. ಕಲಿಯುವ ದಾಹ ಅತಿಯಾಗಿರಲಿ.

* ಕಾಲೇಜು ಪಠ್ಯಕ್ರಮದಲ್ಲಿ ಇರುವ ವಿಷಯಗಳು ಉದ್ಯೋಗ ಸ್ಥಳಕ್ಕೆ ಬಂದಾಗ ಹಳೆಯದಾಗಿರುತ್ತದೆ. ಪ್ರತಿವರ್ಷ ಹೊಸ ಬಗೆಯ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಹಳೆಯ ಕೆಲವೊಂದು ಉದ್ಯೋಗಗಳ ಕೌಶಲಗಳ ಅವಶ್ಯಕತೆಯೇ ಇರುವುದಿಲ್ಲ. ಆಟೋಮೇಷನ್, ಎಐ ಇತ್ಯಾದಿ ತಂತ್ರಜ್ಞಾನಗಳು ಪ್ರವರ್ಧಮಾನಕ್ಕೆ ಬರುತ್ತಿವೆ.

* ಹೊಸದಾಗಿ ಉದ್ಯೋಗ ಹುಡುಕುತ್ತಿರುವವರು ಮಾತ್ರವಲ್ಲದೆ ಈಗಾಗಲೇ ಉದ್ಯೋಗದಲ್ಲರುವವರೂ ಆತಂಕದಲ್ಲಿ ದಿನದೂಡುವ ಪರಿಸ್ಥಿತಿ ಇದೆ. ಕಾಲಕ್ಕೆ ತಕ್ಕಂತೆ ಇತ್ತೀಚಿನ ಸ್ಕಿಲ್‍ಗೆ ಅಪ್‍ಗ್ರೇಡ್ ಆಗದಿದ್ದರೆ ಉಳಿಗಾಲವಿಲ್ಲ ಎನ್ನುವ ವಾತಾವರಣ ಇದೆ. ಹೀಗಾಗಿ ಕೌಶಲವೃದ್ಧಿಗೆ ಸಮಯ ನೀಡಿ.

* ಆನ್‍ಲೈನ್ ಅಥವಾ ಸರ್ಟಿಫಿಕೇಷನ್ ಕೋರ್ಸ್‍ಗಳ ಮೂಲಕ ಇತ್ತೀಚಿನ ಕೌಶಲಗಳನ್ನು ಪಡೆದವರು ಕೈತುಂಬಾ ವೇತನ ಪಡೆಯುತ್ತಿದ್ದಾರೆ. ಇಂತಹ ಕೌಶಲ ಇರುವವರು ಸುಲಭವಾಗಿ ಕೆಲಸ ಬದಲಾಯಿಸಿ ಅತ್ಯುತ್ತಮ ಹುದ್ದೆಗಳನ್ನು ಪಡೆಯುತ್ತಿದ್ದಾರೆ. ಹೆಚ್ಚು ಖರ್ಚಿಲ್ಲದೆ 700 ರೂ. ಅಥವಾ ಸಾವಿರ ರೂ. ಆಸುಪಾಸಿನಲ್ಲಿ ಯಾವುದಾದರೂ ಪ್ರಮುಖ ಸರ್ಟಿಫಿಕೇಷನ್ ಅನ್ನು ಆನ್‍ಲೈನ್‍ನಲ್ಲಿ ಪಡೆದುಕೊಳ್ಳಬಹುದು.

ನೀವು ಹೊಸ ತಂತ್ರಜ್ಞಾನಗಳ ಬಗ್ಗೆ ಎಷ್ಟು ಅರಿವು ಅಥವಾ ನೈಪುಣ್ಯ ಹೊಂದಿರುವಿರಿ ಎನ್ನುವುದನ್ನೇ ಈಗಿನ ಬಾಸ್ ಅಥವಾ ನಿಮ್ಮ ಭವಿಷ್ಯದ ಬಾಸ್ ಹೆಚ್ಚು ಗಮನಿಸುತ್ತಾರೆ. ಬಹುತೇಕ ಕಂಪನಿಗಳು ಕಂಪನಿಗಳು ಆಟೋಮೇಷನ್ ಮತ್ತು ಡಿಜಿಟಲ್‍ನತ್ತ ಸಾಗುತ್ತಿದ್ದು, ನೀವು ಕಂಪನಿಯ ಅಗತ್ಯ ತೀರಿಸುವಂಥ ಕೌಶಲಗಳನ್ನು ಹೊಂದಿರಬೇಕು.

ಹೀಗಾಗಿ ಕೌಶಲ ಕಲಿಕೆಯನ್ನು ಉತ್ಸಾಹದಿಂದ ಮಾಡಿ. ಇಲ್ಲವಾದರೆ ಭವಿಷ್ಯದಲ್ಲಿ ನೀವು ಮೂಲೆಗುಂಪು ಆಗಬಹುದು. ಇದರಿಂದ ನಿಮ್ಮ ಕೆಲಸಕ್ಕೂ ಕುತ್ತು ಬರಬಹುದು.

ನಿಮ್ಮ ಯಶಸ್ಸಿಗೆ ಸಹಕರಿಸುವ ಕೋರ್ಸ್‌ಗಳನ್ನು ಕಲಿಯಲು ವಿಜಯನಗರ ಬಾಲ್ಕ್‌ಗೆ ಭೇಟಿ ನೀಡಿ. ವಿಳಾಸ: BALC Computer Education,  #427/A, 2nd Floor ,8th main, Service Rd, near karnataka grameena bank, Vijayanagar, Bengaluru, Karnataka 560040

You May Also Like

Leave a Reply

Your email address will not be published. Required fields are marked *

error: Content is protected !!