ವಿಜಯನಗರ ಬಾಲ್ಕ್ ಸಂಸ್ಥೆಯಲ್ಲಿ ಅಡ್ವಾನ್ಸಡ್ ಎಕ್ಸೆಲ್ ಕೋರ್ಸ್ ಹೆಚ್ಚು ಜನಪ್ರಿಯ. ಮೈಕ್ರೊಸಾಫ್ಟ್ ಎಕ್ಸೆಲ್‌ನ ಅಗಾಧ ರೂಪವನ್ನು ಅರ್ಥಮಾಡಿಕೊಳ್ಳಲು ಮತ್ತು ಒಳ್ಳೆಯ ಕರಿಯರ್ ಪಡೆಯಲು ನೀವು ಬಯಸಿದರೆ ಈ ಅಡ್ವಾನ್ಸಡ್ ಎಕ್ಸೆಲ್ ಕೋರ್ಸ್ ಅನ್ನು ಕಲಿಯಿರಿ. ಎಕ್ಸೆಲ್‌ಗೂ ಅಡ್ವಾನ್ಸಡ್ ಎಕ್ಸೆಲ್‌ಗೂ ಏನು ವ್ಯತ್ಯಾಸವಿದೆ? ಏನಿದು ಅಡ್ವಾನ್ಸಡ್ ಎಕ್ಸೆಲ್? ಇತ್ಯಾದಿ ನಿಮ್ಮ ಪ್ರಶ್ನೆಗೆ ಈ ಲೇಖನದ ಮೂಲಕ ಉತ್ತರಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ.
ಈಗ ಹೆಚ್ಚಿನ ಉದ್ಯೋಗಕ್ಕೆ ಮೈಕ್ರೊಸಾಫ್ಟ್ ಎಕ್ಸೆಲ್ ಸ್ಕಿಲ್ ಬೇಕು. ನೀವು ಕಲಿತಿರುವ ಬೇಸಿಕ್ ಎಕ್ಸೆಲ್ ಕೆಲವೊಮ್ಮೆ ಸಾಕಾಗದು. ಅಲ್ಲಿ ತಿಳಿಸಿಕೊಡುವ ಸೂತ್ರಗಳು, ಫಾರ್ಮುಲಾಗಳು ಹೆಚ್ಚು ಪ್ರಯೋಜನಕಾರಿಯಾಗುತ್ತದೆ ಎಂದು ಹೇಳಲಾಗದು. ಎಕ್ಸೆಲ್‍ನಲ್ಲಿ ಅಡ್ವಾನ್ಸಡ್ ಆಗಿರುವ ಕೋರ್ಸ್‍ಗಳನ್ನು ಮಾಡಿದರೆ ನಿಮಗೆ ಸಿಗುವ ಉದ್ಯೋಗಾವಕಾಶ ಹೆಚ್ಚಬಹುದು. ಇದಕ್ಕೆ ಸಂಬಂಧಿಸಿದ ಸರ್ಟಿಫಿಕೇಷನ್ ಕೋರ್ಸ್‍ಗಳನ್ನು ನೀವು ಮಾಡಬಹುದು. ಇಂತಹ ಕೋರ್ಸ್‍ಗಳನ್ನು ಮಾಡುವಂತೆ ನಿಮ್ಮ ಮಕ್ಕಳಿಗೆ ಅಥವಾ ಪರಿಚಯಸ್ಥರಿಗೂ ಸೂಚಿಸಬಹುದು.
ಟೇಬಲ್ ಮತ್ತು ಫಾರ್ಮೆಟಿಂಗ್
ಎಕ್ಸೆಲ್‍ನ ಆಕರ್ಷಣೆ ಟೇಬಲ್‍ಗಳು ಮತ್ತು ಫಾರ್ಮೆಟಿಂಗ್. ಅಲ್ಲಿ ನೀಡುವ ಮಾಹಿತಿಯನ್ನು ಆಕರ್ಷಕವಾಗಿ ಪ್ರಸ್ತುತ ಪಡಿಸಲು ಈ ಟೂಲ್‍ಗಳು ನೆರವು ನೀಡುತ್ತವೆ. ಟೇಬಲ್‍ಗಳು, ಸೆಲ್ ಸ್ಟೈಲ್‍ಗಳು, ಫಾರ್ಮೆಟಿಂಗ್ ಆಯ್ಕೆಗಳನ್ನು ಅಡ್ವಾನ್ಸಡ್ ಎಕ್ಸೆಲ್ ಕೋರ್ಸ್‍ಗಳಲ್ಲಿ ಕಲಿಯಬಹುದು. ಟೇಬಲ್ ರಚಿಸಲು ಟಿಪ್ಸ್‍ಗಳು, ಫಾರ್ಮುಲಾಗಳನ್ನು ಕಲಿಯಲು ಎಕ್ಸೆಲ್ ಸರ್ಟಿಫಿಕೇಷನ್ ಕೋರ್ಸ್‍ಗಳು ಉತ್ತಮ ವೇದಿಕೆ.
ಎಕ್ಸೆಲ್ ಫಾರ್ಮುಲಾಗಳು
ಎಕ್ಸೆಲ್ ಅನ್ನು ಸ್ಮಾರ್ಟ್ ಆಗಿ ಬಳಕೆ ಮಾಡಲು ಫಾರ್ಮುಲಾಗಳು ಬೇಕು. ಅದಿಲ್ಲದಿದ್ದರೆ ಎಕ್ಸೆಲ್ ಎನ್ನುವುದು ಕೇವಲ ಮಾಹಿತಿ ಸಂಗ್ರಹಗಾರವಾಗಿ ಬಿಡುತ್ತದೆ. ಫಾರ್ಮುಲಾಗಳನ್ನು ಬಳಸುವ ಮೂಲಕ ಮಾಹಿತಿಗಳನ್ನು ವಿಶ್ಲೇಷಿಸಬಹುದು. ಕಠಿಣ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಸಾಧ್ಯವಿದೆ. ಸರ್ಟಿಫಿಕೇಷನ್ ಕೋರ್ಸ್‍ಗಳಲ್ಲಿ ಎಕ್ಸೆಲ್ ಫಾರ್ಮುಲಾಗಳನ್ನು ಎಕ್ಸೆಲೆಂಟ್ ಆಗಿ ಕಲಿಯಲು ಸಹಕರಿಸುತ್ತವೆ. ಇಲ್ಲಿ ನೀವು SUMIFS, SUMPRODUCT, VLOOKUP, INDEX + MATCH, ಫಾರ್ಮುಲಾ ಎರರ್‍ಗಳ ನಿರ್ವಹಣೆ, ಅರ್ರೆ ಫಾರ್ಮುಲಾ, ಸಕ್ಯುಲರ್ ರೆಫರೆನ್ಸ್, ಫಾರ್ಮುಲಾ ಅಡಿಟಿಂಗ್ ಇತ್ಯಾದಿಗಳ ಫಾರ್ಮುಲಾಗಳನ್ನು ಕಲಿಯಬಹುದು.
ಪಿವೊಟ್ ಟೇಬಲ್‍ಗಳು ಮತ್ತು ರಿಪೋರ್ಟಿಂಗ್
ಬೃಹತ್ ಗಾತ್ರದ ಮಾಹಿತಿಗಳನ್ನು ವಿಶ್ಲೇಷಿಸಲು ಮತ್ತು ಪ್ರಶ್ನೆಗಳಿಗೆ ಕೆಲವೇ ಕ್ಲಿಕ್‍ಗಳ ಮೂಲಕ ಉತ್ತರ ಕಂಡುಕೊಳ್ಳಲು ಪಿವೊಟ್ ಟೇಬಲ್‍ಗಳು ಮತ್ತು ಪಿವೊಟ್ ರಿಪೋರ್ಟಿಂಗ್ ಫೀಚರ್ ಸಹಕಾರಿ. ಸರ್ಟಿಫಿಕೇಷನ್ ಕೋರ್ಸ್‍ಗಳಲ್ಲಿ ಇಂತಹ ವಿಷಯಗಳನ್ನು ಹೇಳಿಕೊಡಲಾಗುತ್ತದೆ. ಇದರ ಮೂಲಕ ಗ್ರೂಪಿಂಗ್, ಸ್ಲೈಸರ್ಸ್, ಕ್ಯಾಲ್ಕುಲೇಷನ್ಸ್, ಸಮ್ಮರಿ ಇತ್ಯಾದಿಗಳನ್ನು ಮಾಡಬಹುದು.
ಕಂಡಿಷನಲ್ ಫಾರ್ಮೆಟಿಂಗ್
ಇದಕ್ಕೆ ಶಾರ್ಟ್ ಮತ್ತು ಸ್ವೀಟಾಗಿ ಸಿಎಫ್ ಎನ್ನುತ್ತಾರೆ. ಇದು ಎಕ್ಸೆಲ್‍ನ ಪವರ್‍ಫುಲ್ ಫೀಚರ್. ನಿರ್ಬಂಧಿತ ಫಾರ್ಮೆಟಿಂಗ್‍ನಲ್ಲಿ ನೀವು ನೀಡಿರುವ ಮಾಹಿತಿಯಲ್ಲಿ ಯಾವ ಭಾಗವು ಹೈಲೈಟ್ ಆಗಬೇಕೆಂದು ಸೂಚಿಸಲು ಸಾಧ್ಯವಿದೆ. ಅಂದರೆ ಟಾಪ್ 10 ಗ್ರಾಹಕರು, ಟಾಪ್ 10 ಶಾಲೆಗಳು, ಉನ್ನತ್ತ ಅಧಿಕಾರಿಗಳು, ಕೆಳ ಅಧಿಕಾರಿಗಳು, ಉತ್ತಮ ಕಾರ್ಯಕ್ಷಮತೆ ತೋರುವವರು, ಕಳಪೆ ಕಾರ್ಯಕ್ಷಮತೆಯ ಉದ್ಯೋಗಿಗಳು ಹೀಗೆ ಯಾವುದನ್ನು ಮಾತ್ರ ಹೈಲೈಟ್ ಮಾಡಬೇಕೋ ಅದನ್ನು ಮಾತ್ರವೇ ಹೈಲೈಟ್ ಮಾಡಲು ಸಾಧ್ಯವಿದೆ. ಸರಳವಾಗಿರುವ ಕಂಡಿಷನಲ್ ಫಾರ್ಮೆಟಿಂಗ್ ರೂಲ್ಸ್‍ನಲ್ಲಿ ಯಾರೂ ಬೇಕಾದರು ಸುಲಭವಾಗಿ ಸೆಟಪ್ ಮಾಡಬಹುದು.