ವಿಜಯನಗರ ಬಾಲ್ಕ್ ಓದುಗರಿಗೆ ನಮಸ್ಕಾರ. ದಿನಗಳು ಉರುಳುತ್ತಿವೆ. ಜಗತ್ತು ಕೋವಿಡ್-೧೯ ಭಯದಿಂದ ಹೊರಗೆ ಬಂದಂತೆ ಕಾಣುತ್ತಿದೆ. ಈಗ ಭಯದ ಬದಲಾಗಿ ಜನರಲ್ಲಿ ಜಾಗೃತಿ ಮೂಡುತ್ತಿದೆ. ಈ ಸಮಯದಲ್ಲಿ ಉದ್ಯೋಗ ಕಳೆದುಕೊಂಡವರು ಹೊಸ ಉದ್ಯೋಗ ಹುಡುಕುತ್ತಿದ್ದಾರೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕೆ ಪೂರಕವಾದ ಕೋರ್ಸ್‌ಗಳನ್ನು ಹುಡುಕುತ್ತಿದ್ದಾರೆ. ನಮ್ಮ ವಿಜಯನಗರ ಬಾಲ್ಕ್ ಶಿಕ್ಷಣ ಸಂಸ್ಥೆಯ ಕೋರ್ಸ್‌ಗಳು ವಿದ್ಯಾರ್ಥಿಗಳಿಗೆ ಉದ್ಯೋಗದ ಖಾತ್ರಿ ನೀಡುತ್ತವೆ. ಇಂತಹ ಕೋರ್ಸ್‌ಗಳನ್ನು ಕಲಿತು ಒಳ್ಳೆಯ ಕರಿಯರ್ ರೂಪಿಸಿಕೊಳ್ಳಿ. ಇವತ್ತಿನ ಸಂಚಿಕೆಯಲ್ಲಿ ವಿಜಯ ನಗರ ಬಾಲ್ಕ್ ಓದುಗರಿಗೆ ಸಂವಹನ ಕೌಶಲದ ಮಹತ್ವವನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ.
ವಿದ್ಯಾರ್ಥಿಗಳಿಗೆ ಓದು ಮುಗಿಸಿದ ಬಳಿಕ ಮತ್ತು ಕೆಲಸ ಸಿಗುವ ಮೊದಲಿನ ನಡುವಿನ ಕಾಲಘಟ್ಟ ಸಂದಿಗ್ಧತೆಯಿಂದ ಕೂಡಿರುತ್ತದೆ. ಸಾಕಷ್ಟು ಜನರು ಈ ಸಮಯದಲ್ಲಿ ಹಲವು ಕಂಪನಿಗಳನ್ನು ಎಡತಾಕಿರುತ್ತಾರೆ. ಎಲ್ಲಿ ಹೋದರೂ ಕೆಲಸ ಸಿಗದೆ ಇದ್ದಾಗ ಅಧೀರರಾಗುವುದುಂಟು. ಸಂದರ್ಶನ ಕರೆದ ಕಂಪನಿ ಮುಲಾಜಿಲ್ಲದೆ ರಿಜೆಕ್ಟ್ ಮಾಡುವಲ್ಲಿ ಅಭ್ಯರ್ಥಿಗಿರುವ ಸಂವಹನ ಕೌಶಲದ ಕೊರತೆ ಪ್ರಮುಖ ಕಾರಣವಾಗಿರುತ್ತದೆ. ಹೀಗಾಗಿ, ನಮ್ಮ ವಿಜಯನಗರ ಬಾಲ್ಕ್ ಓದುಗರಿಗೆ, ಪ್ರಿಯ ವಿದ್ಯಾರ್ಥಿಗಳಿಗೆ ಸಂವಹನ ಕೌಶಲ ಹೆಚ್ಚಿಸಲು ನಾವು ಈ ಮೂಲಕ ಪ್ರೇರೇಪಿಸುತ್ತಿದ್ದೇವೆ.
ಮಾತು ಬಲ್ಲವನಿಗೆ ಗೆಲುವು
ಮಾತುಬಲ್ಲವನ್ನು ಎಲ್ಲಿ ಹೋದರೂ ಗೆಲ್ಲುತ್ತಾನೆ ಎಂಬ ಮಾತೊಂದು ಚಾಲ್ತಿಯಲ್ಲಿದೆ. ಆದರೆ, ಮಾತಿನಿಂದಾಗಿ ಅವಕಾಶ ಕಳೆದುಕೊಂಡವರೂ ಸಾಕಷ್ಟು ಜನರಿದ್ದಾರೆ. ಹೀಗಾಗಿ ಅತಿಯಾಗಿ ಮಾತನಾಡದೆ ಅತ್ಯುತ್ತಮವಾಗಿ ಮಾತನಾಡುವುದನ್ನು ಕಲಿಯಿರಿ. ಏನು ಹೇಳಬೇಕೋ ಅದನ್ನು ಹೇಳಬೇಕಾದ ಸಮಯದಲ್ಲಿಯೇ ಹೇಳಬೇಕು. ಸಂದರ್ಶನ ಮುಗಿಸಿ ಹೊರಬಂದ ಮೇಲೆ ನಾನು ಹಾಗೆ ಹೇಳಬಾರದಿತ್ತು, ಅಥವಾ ಅದನ್ನು ಹೇಳಲು ಮರೆತೆ ಎಂದು ಕೊರಗಬಾರದು.
ಲಿಸನಿಂಗ್ ಪವರ್ ಬಗ್ಗೆ ಗೊತ್ತೆ?
ನಿಮ್ಮ ಸಂವಹನ ಕೌಶಲ ಕೇವಲ ಮಾತನಾಡುವುದಲ್ಲ. ಅತ್ಯುತ್ತಮವಾಗಿ ಮಾತನಾಡುವವರು ನೀವಾಗಬೇಕಾದರೆ ಉತ್ತಮ ಕೆಟ್ಟ ಅಭ್ಯಾಸ ಬೇಡ. ಇತರರನ್ನು ಮಾತನಾಡಲು ಬಿಡದೆ ನೀವೇ ಮಾತನಾಡುತ್ತಿದ್ದರೆ ನೀವು ಸಂವಹನ ಕೌಶಲದಲ್ಲಿ ವಿಫಲರಾಗುವಿರಿ. ಹೀಗಾಗಿ ಇತರರು ಮಾತನಾಡುವಾಗ ಗಮನವಿಟ್ಟು ಕೇಳುವ ಗುಣ ನಿಮ್ಮಲ್ಲಿ ಇರಲಿ.
ನಿಮ್ಮ ಮಾತು ಮುತ್ತಿನಂತೆ ಇರಲಿ
ಕೆಲವರು ಮಾತನಾಡುವುದನ್ನು ಕೇಳುವುದು ಚಂದ. ಇನ್ನು ಕೆಲವರ ಮಾತು ಕರ್ಣಕಠೋರ. ನಿಮ್ಮ ಮಾತಿನ ಮೂಲಕವೇ ಸಂದರ್ಶಕರನ್ನು ಸೆಳೆಯಬಹುದು. ಶಾಲಾ ಕಾಲೇಜು ಸಮಯದಲ್ಲಿ ಚರ್ಚಾ ಸ್ಪರ್ಧೆ ಇತ್ಯಾದಿಗಳಲ್ಲಿ ಭಾಗವಹಿಸಿ. ಪದಗಳನ್ನು ನುಂಗಬೇಡಿ. ಸ್ಪಷ್ಟವಾಗಿ ಮಾತನಾಡಿ.
ಬಾಡಿ ಲ್ಯಾಂಗ್ವೇಜ್ ಬಗ್ಗೆ ಗಮನ ನೀಡಿ
ಸಂವಹನ ಕೌಶಲದಲ್ಲಿ ದೇಹದ ವರ್ತನೆ ಅಥವಾ ಬಾಡಿ ಲ್ಯಾಂಗ್ವೇಜ್ ಪ್ರಮುಖ ಪಾತ್ರ ವಹಿಸುತ್ತದೆ. ಸಂದರ್ಶಕರ ಮುಂದೆ ರಾಜಕೀಯ ಭಾಷಣಕಾರರಂತೆ ಆಂಗೀಕವಾಗಿ ಅಭಿನಯಿಸಿ ಮಾತನಾಡುವ ಅಗತ್ಯವಿಲ್ಲ. ಮಾತನಾಡುವಾಗ ನಿಮ್ಮ ಕೈ ಚಲನೆ, ಮುಖದ ಹಾವಭಾವದ ಮೇಲೆ ಹಿಡಿತವಿರಲಿ. ನಿಮ್ಮ ಹಾವಭಾವ ನೋಡಿಯೇ ನಿಮ್ಮ ವ್ಯಕ್ತಿತ್ವವನ್ನು ಎದುರಿನಲ್ಲಿ ಇರುವವರು ತಿಳಿದುಕೊಳ್ಳುತ್ತಾರೆ.
ಅನಗತ್ಯ ಮಾತು ಬೇಡ
ನೀವು ಯಾವ ವಿಷಯದ ಬಗ್ಗೆ ಮಾತನಾಡುವಿರೋ ಸ್ಪಷ್ಟತೆ ಇರಲಿ. ಮಾತು ಬರುತ್ತೆ ಎಂದು ಅನಗತ್ಯ ವಿಷಯಗಳನ್ನು ಮಾತನಾಡಬೇಡಿ. ನೀವಾಡುವ ಮಾತು ಎದುರಿನಲ್ಲಿರುವ ವ್ಯಕ್ತಿಯು ಮಾತನಾಡುತ್ತಿರುವ ಮುಖ್ಯ ವಿಷಯದ ಹಾದಿ ತಪ್ಪಿಸುವಂತೆ ಇರಬಾರದು. ಅತಿಯಾಗಿ ಮಾತನಾಡುವುದು ಸಂದರ್ಶನದ ಸಮಯದಲ್ಲಿ ಒಳ್ಳೆಯದಲ್ಲ. ನನಗೆ ಅವರು ಗೊತ್ತು, ಇವರು ಗೊತ್ತು ಎಂದೆಲ್ಲ ಬಡಾಯಿ ಕೊಚ್ಚಿಕೊಳ್ಳಬೇಡಿ. ಎಷ್ಟು ಬೇಕೋ ಅಷ್ಟೇ ಮಾತನಾಡಿ. ನಿಮ್ಮಲ್ಲಿರುವ ಬುದ್ಧಿವಂತಿಕೆ, ವಿನಯ, ನಮ್ರತೆ ಸಂದರ್ಶಕರಿಗೆ ಇಷ್ಟವಾಗಬಹುದು.
ಭಾಷೆಯ ಮೇಲೆ ಹಿಡಿತವಿರಲಿ
ಕೆಲವು ಕಂಪನಿಗಳ ಎಚ್‍ಆರ್‍ಗಳು ಕನ್ನಡದಲ್ಲಿ ಆತ್ಮೀಯವಾಗಿ ಸಂದರ್ಶನ ಮಾಡಬಹುದು. ಆದರೆ, ಕೆಲವು ಎಂಎನ್‍ಸಿಗಳಿಗೆ ಅಭ್ಯರ್ಥಿಯ ಇಂಗ್ಲಿಷ್ ಭಾಷಾ ಕೌಶಲ ಮುಖ್ಯವಾಗಬಹುದು. ನೀವು ಸಂದರ್ಶನಕ್ಕೆ ಹಾಜರಾದಗ ನಿಮ್ಮ ಇಂಗ್ಲಿಷ್ ಜ್ಞಾನವನ್ನು ಸಂದರ್ಶಕರು ಗಮನಿಸುತ್ತಿರುತ್ತಾರೆ. ಈ ಸಮಯದಲ್ಲಿ ನೀವು ಆಕ್ಸ್‍ಫರ್ಡ್ ಪದಕೋಶದಲ್ಲಿರುವ ಕಠಿಣ ಪದಗಳನ್ನು ಬಳಸಿ ಅವರಲ್ಲಿ ಮಾತನಾಡಿ ಬುದ್ಧಿವಂತಿಕೆ ಪ್ರದರ್ಶಿಸಬೇಕಿಲ್ಲ. ಸರಳವಾಗಿ ಸೌಜನ್ಯವಾಗಿ ಮಾತನಾಡುವ ಕಲೆ ನಿಮ್ಮಲ್ಲಿದ್ದರೆ ಸಾಕು. ಈ ಕಾಲದಲ್ಲಿ ಎಷ್ಟು ಭಾಷೆ ಗೊತ್ತಿದ್ದರೂ ಕಡಿಮೆಯೇ. ಕನ್ನಡ ಪತ್ರಿಕೆಗಳ ಜೊತೆ ಇಂಗ್ಲಿಷ್ ಪತ್ರಿಕೆಗಳನ್ನೂ ಓದಿ. ಸ್ಪೋಕನ್ ಇಂಗ್ಲಿಷ್ ಕೋರ್ಸ್‍ಗೆ ಸೇರಿ. ಸ್ನೇಹಿತರ ಜೊತೆ ಇಂಗ್ಲಿಷ್, ಹಿಂದಿ ಭಾಷೆಯಲ್ಲಿಯೂ ವ್ಯವಹರಿಸಿ.
ತರಬೇತಿ ಪಡೆಯಿರಿ
ನೀವು ಹೇಗೆ ಮಾತನಾಡಬೇಕು ಎಂದು ತರಬೇತಿ ಪಡೆಯಿರಿ. ಇದಕ್ಕಾಗಿ ನೀವು ವ್ಯಕ್ತಿತ್ವ ವಿಕಸನ ಕೇಂದ್ರಗಳಿಗೆ ಹೋಗಬಹುದು. ಅಥವಾ ಮನೆಯಲ್ಲಿಯೇ ಕನ್ನಡಿ ಮುಂದು ಮಾತನಾಡಲು ಕಲಿಯಬಹುದು. ನಿಮ್ಮ ಮೊಬೈಲ್‍ನಲ್ಲೇ ನಿಮ್ಮ ಧ್ವನಿಯನ್ನು ರೆಕಾರ್ಡ್ ಮಾಡಿಕೊಂಡು, ಅದರ ಏರಿಳಿತವನ್ನು ತಿಳಿದುಕೊಂಡು ತಿದ್ದಿಕೊಳ್ಳಬಹುದು. ಸಂದರ್ಶನದಲ್ಲಿ ಯಾವೆಲ್ಲ ಪ್ರಶ್ನೆ ಕೇಳಬಹುದು. ಯಾವ ಪ್ರಶ್ನೆ ಕೇಳಿದರೆ ಯಾವ ರೀತಿ ಉತ್ತರಿಸಬಹುದು ಎಂದೆಲ್ಲ ಯೋಚಿಸಿ ಸಿದ್ಧತೆ ನಡೆಸಿರಿ.
ಗೊತ್ತಾಯಿತಲ್ಲ ಸ್ನೇಹಿತರೇ, ಈಗಲೇ ನಿಮ್ಮ ಸಂವಹನ ಕೌಶಲ ಉತ್ತಮಪಡಿಸಲು ಪ್ರಯತ್ನಪಡಿ. ನಿಮ್ಮ ಕರಿಯರ್ ಪ್ರಗತಿಗೆ ಈಗಲೇ ನಮ್ಮ ವಿಜಯನಗರ ಬಾಲ್ಕ್‌ನ ಕೋರ್ಸ್‌ಗಳಿಗೆ ಸೇರಿರಿ. ಧನ್ಯವಾದ.