ನಿಮಗೆ ಉದ್ಯೋಗ ಪಡೆಯಬೇಕೆ? ಈ Skills ತಪ್ಪದೇ ಕಲಿಯಿರಿ

ಈ ಟೆಕ್ ಜಗತ್ತಿನಲ್ಲಿ ಪ್ರತಿನಿತ್ಯ ಹೊಸ ಹೊಸ ತಂತ್ರಜ್ಞಾನಗಳು ಆಗಮಿಸುತ್ತಿವೆ. ಜನರು ಖರೀದಿ ಮಾಡುವ ರೀತಿ, ಉತ್ಪನ್ನಗಳನ್ನು ತಯಾರು ಮಾಡುವ ವಿಧಾನ, ಮಾರುಕಟ್ಟೆ ಪ್ರಚಾರ ವಿಧಾನ ಎಲ್ಲವೂ ಬದಲಾಗುತ್ತಿದೆ. ಜನರಿಂದು ಸಣ್ಣ ಸ್ಮಾರ್ಟ್‍ಫೋನ್‌ ಮೂಲಕವೇ ಖರೀದಿ, ಮಾರಾಟ ಸೇರಿದಂತೆ ಹತ್ತು ಹಲವು ವ್ಯವಹಾರ ಮಾಡುತ್ತಿದ್ದಾರೆ.

ಕಾಲೇಜು ಪಠ್ಯಕ್ರಮದಲ್ಲಿ ಇರುವ ವಿಷಯಗಳು ಉದ್ಯೋಗ ಸ್ಥಳಕ್ಕೆ ಬಂದಾಗ ಹಳೆಯದಾಗಿರುತ್ತದೆ. ಪ್ರತಿವರ್ಷ ಹೊಸ ಬಗೆಯ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಹಳೆಯ ಕೆಲವೊಂದು ಉದ್ಯೋಗಗಳ ಕೌಶಲಗಳ ಅವಶ್ಯಕತೆಯೇ ಇರುವುದಿಲ್ಲ. ಆಟೋಮೇಷನ್, ಎಐ ಇತ್ಯಾದಿ ತಂತ್ರಜ್ಞಾನಗಳು ಪ್ರವರ್ಧಮಾನಕ್ಕೆ ಬರುತ್ತಿವೆ.

ಹೊಸದಾಗಿ ಉದ್ಯೋಗ ಹುಡುಕುತ್ತಿರುವವರು ಮಾತ್ರವಲ್ಲದೆ ಈಗಾಗಲೇ ಉದ್ಯೋಗದಲ್ಲರುವವರೂ ಆತಂಕದಲ್ಲಿ ದಿನದೂಡುವ ಪರಿಸ್ಥಿತಿ ಇದೆ. ಕಾಲಕ್ಕೆ ತಕ್ಕಂತೆ ಇತ್ತೀಚಿನ ಸ್ಕಿಲ್‍ಗೆ ಅಪ್‍ಗ್ರೇಡ್ ಆಗದಿದ್ದರೆ ಉಳಿಗಾಲವಿಲ್ಲ ಎನ್ನುವ ವಾತಾವರಣ ಇದೆ.

ಇದೇ ಸಮಯದಲ್ಲಿ ಆನ್‍ಲೈನ್ ಅಥವಾ ಸರ್ಟಿಫಿಕೇಷನ್ ಕೋರ್ಸ್‍ಗಳ ಮೂಲಕ ಇತ್ತೀಚಿನ ಕೌಶಲಗಳನ್ನು ಪಡೆದವರು ಕೈತುಂಬಾ ವೇತನ ಪಡೆಯುತ್ತಿದ್ದಾರೆ. ಇಂತಹ ಕೌಶಲ ಇರುವವರು ಸುಲಭವಾಗಿ ಕೆಲಸ ಬದಲಾಯಿಸಿ ಅತ್ಯುತ್ತಮ ಹುದ್ದೆಗಳನ್ನು ಪಡೆಯುತ್ತಿದ್ದಾರೆ.

ಇದೇ ಸಮಯದಲ್ಲಿ ದೇಶದಲ್ಲಿ ಕೆಲವೊಂದು ಇತ್ತೀಚಿನ ತಂತ್ರಜ್ಞಾನಗಳಿಗೆ ಪರಿಣಿತರ ಕೊರತೆಯೂ ಹೆಚ್ಚಾಗಿದೆ. ಡೇಟಾ ಅನಾಲಿಟಿಕ್ಸ್, ಡೇಟಾ ಸೈಂಟಿಸ್ಟ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಪ್ರೊಫೆಷನಲ್‌ ಇತ್ಯಾದಿ ಹುದ್ದೆಗಳಿಗೆ ಬೇಡಿಕೆಯಷ್ಟು ಪ್ರತಿಭಾನ್ವಿತರ ಪೂರೈಕೆಯಾಗುತ್ತಿಲ್ಲ.

ಹೆಚ್ಚಿನ ಸಂಬಳ ಮತ್ತು ಉತ್ತಮ ಅವಕಾಶಗಳಿಗಾಗಿ ವೃತ್ತಿಯನ್ನು ಬದಲಿಸಬೇಕು ಎಂದು ಯೋಚಿಸುತ್ತಿರುವಿರಾ?  ಉದ್ಯೋಗ ಮಾರುಕಟ್ಟೆ ಟ್ರೆಂಡ್‍ಗಳ ಅನುಸಾರ ಪ್ರಸ್ತುತ ಮತ್ತು ಭವಿಷ್ಯಕ್ಕೆ ಅನ್ವಯವಾಗುವಂಥ ಟಾಪ್ ಕರಿಯರ್ ಕೌಶಲಗಳು ಇಲ್ಲಿವೆ. ಈಗಾಗಲೇ ಈ ಕೌಶಲಗಳು ನಿಮ್ಮಲ್ಲಿದ್ದರೆ ಇನ್ನಷ್ಟು ವೃದ್ಧಿಸಿಕೊಳ್ಳಿ.

ಡಿಜಿಟಲ್, ಆಟೋಮೇಷನ್ ಬಾಗಿಲ ತಟ್ಟಿ…

ನೀವು ಹೊಸ ತಂತ್ರಜ್ಞಾನಗಳ ಬಗ್ಗೆ ಎಷ್ಟು ಅರಿವು ಅಥವಾ ನೈಪುಣ್ಯ ಹೊಂದಿರುವಿರಿ ಎನ್ನುವುದನ್ನೇ ಈಗಿನ ಬಾಸ್ ಅಥವಾ ನಿಮ್ಮ ಭವಿಷ್ಯದ  ಬಾಸ್ ಹೆಚ್ಚು ಗಮನಿಸುತ್ತಾರೆ. ಬಹುತೇಕ ಕಂಪನಿಗಳು ಕಂಪನಿಗಳು ಆಟೋಮೇಷನ್ ಮತ್ತು ಡಿಜಿಟಲ್‍ನತ್ತ ಸಾಗುತ್ತಿದ್ದು, ನೀವು ಕಂಪನಿಯ ಅಗತ್ಯ ತೀರಿಸುವಂಥ ಕೌಶಲಗಳನ್ನು ಹೊಂದಿರಬೇಕು. ಹೊಸ ತಂತ್ರಜ್ಞಾನಗಳಿಗೆ ತೆರೆದುಕೊಳ್ಳಬೇಕು.

ಮಾತು, ಬರಹ, ಪ್ರಸ್ತುತಿ

ಲಿಂಕ್ಡ್‍ಇನ್ ಸಂಸ್ಥೆಯ ಇತ್ತೀಚಿನ ವಾರ್ಷಿಕ ವರದಿ ಪ್ರಕಾರ, ಉದ್ಯೋಗ ಮಾರುಕಟ್ಟೆಯಲ್ಲಿ ಸಂವಹನದ ಕೊರತೆ ಇರುವುದು ಕಂಡು ಬಂದಿದೆ. ಇತರೆ ಟೀಮ್‍ನೊಂದಿಗೆ ಪರಿಣಾಮಕಾರಿಯಾಗಿ ಸಂವಹನ ನಡೆಸುವಂಥ/ ನಿಭಾಯಿಸುವಂಥ, ಚೆನ್ನಾಗಿ ಬರೆಯುವಂಥ ಮತ್ತು  ವಿಷಯಗಳನ್ನು ಪ್ರಸ್ತುತಿ ಪಡಿಸುವಂಥ ಉದ್ಯೋಗಿಗಳಿಗೆ ಹೆಚ್ಚಿನ ಆದ್ಯತೆಯನ್ನು ಮ್ಯಾನೇಜ್‍ಮೆಂಟ್‍ಗಳು ನೀಡುತ್ತವೆ.

ಟೀಮ್ ನಿರ್ವಹಿಸಿ

ನಿಮ್ಮ ವೃತ್ತಿಯಲ್ಲಿ ತ್ವರಿತ ಪ್ರಗತಿ ಸಾಸಲು ಟೀಮ್‍ನಲ್ಲಿ ಹೇಗೆ ಕೆಲಸ ಮಾಡುವಿರಿ ಎನ್ನುವುದು ಬಹಳ ಮುಖ್ಯ. ಉತ್ತಮ ಸಂವಹನದ ಮೂಲಕ ನಿಮ್ಮ ಟೀಮ್ ಅನ್ನು ಗಟ್ಟಿಗೊಳಿಸಿ. ನೀವೇ ಸ್ವಯಂ ಪ್ರೇರಣೆಯಿಂದ ಕೆಲಸದಲ್ಲಿ ತೊಡಗಿಸಿಕೊಳ್ಳಿ, ಯಾರೋ ಕೆಲಸ ಹೇಳುವುದಕ್ಕೆ ಕಾಯ್ದು ಕೂರಬೇಡಿ. ನೀವು ಟೀಮ್ ಲೀಡರ್ ಆಗಿದ್ದ ಪಕ್ಷದಲ್ಲಿ ಹೆಚ್ಚಿನ ಜವಾಬ್ದಾರಿ ನಿಭಾಯಿಸುವ ಕೌಶಲವನ್ನು ಬೆಳೆಸಿಕೊಳ್ಳಿ. ಉದ್ಯಮದಲ್ಲಿ ಸಾಕಷ್ಟು ಬದಲಾವಣೆಗಳು ನಡೆಯುತ್ತಿದ್ದು, ಅದಕ್ಕ್ಕೆ ಟೀಮ್ ಅಣಿಗೊಣಿಸುವ ಕೌಶಲ ಅಗತ್ಯ.

ಸೋಷಿಯಲ್ ಮೀಡಿಯಾ, ವೆಬ್ ನಿಪುಣರಾಗಿ…

ಪ್ರಸ್ತುತ ಇಂಟರ್‍ನೆಟ್ ಮತ್ತು ಸೋಷಿಯಲ್ ಮೀಡಿಯಾಗಳು ಉದ್ಯೋಗ ವಲಯದಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ನೀವು ಮಾರಾಟ ವಿಭಾಗದಲ್ಲಿ ಇದ್ದರೆ, ಅಲ್ಲಿ ಬ್ಯುಸಿನೆಸ್ ವೃದ್ಧಿಗೆ ಸೋಷಿಯಲ್ ಮೀಡಿಯಾ ನೆರವಾಗುತ್ತದೆ. ಸಂಪನ್ಮೂಲ ಕ್ರೋಡೀಕರಣ ಮತ್ತು ಹೊಸ ಐಡಿಯಾಗಳಿಗೆ ಸೋಷಿಯಲ್ ಮೀಡಿಯಾ ಮತ್ತು ಅಂತರ್ಜಾಲವು ನೆಲೆಯಾಗಲಿದೆ.

ಇವು ಕೆಲವು ಉದಾಹರಣೆಗಳಷ್ಟೇ, ನೀವು ಮಾಡುತ್ತಿರುವ ಉದ್ಯೋಗಕ್ಕೆ ಸಂಬಂಧ ಕ್ಷೇತ್ರದಲ್ಲಿ ಇತ್ತೀಚಿಗೆ ಆಗಿರುವ ಬದಲಾವಣೆಗಳನ್ನು ಗಮನಿಸಿ. ಯಾವ ಹೊಸ ಕೌಶಲಗಳಿಗೆ ಬೇಡಿಕೆ ಇದೆ ಎಂದು ತಿಳಿದುಕೊಂಡು ಅಂತಹ ಕೌಶಲಗಳನ್ನು ನಿಮ್ಮದಾಗಿಸಿಕೊಳ್ಳಿರಿ.

ನಿಮ್ಮ ಭವಿಷ್ಯ ಬದಲಿಸುವಂತಹ, ಅತ್ಯುತ್ತಮ ಕರಿಯರ್‌ ಪಡೆಯಲು ನೆರವಾಗುವಂತಹ ಹತ್ತು ಹಲವು ಕೋರ್ಸ್‌ಗಳು ವಿಜಯನಗರ ಬಾಲ್ಕ್‌ ಸಂಸ್ಥೆಯಲ್ಲಿವೆ. ಹೆಚ್ಚಿನ ಮಾಹಿತಿ ಪಡೆಯಲು ನೀವು ಭೇಟಿ ನೀಡಬೇಕಾದ ವಿಳಾಸ

Vijaya Nagar BALC Address427/A, 2nd Floor, 8th Main Service Road, near Kaveri Grameena Bank, Vijayanagar, Bengaluru, Karnataka 560040

Phone Number: 090087 60400

You May Also Like

Leave a Reply

Your email address will not be published. Required fields are marked *

error: Content is protected !!