ಬೆಂಗಳೂರಿನ ವಿಜಯನಗರದಲ್ಲಿರುವ ಬಾಲ್ಕ್ ಕಂಪ್ಯೂಟರ್ ಶಿಕ್ಷಣ ಸಂಸ್ಥೆಯಲ್ಲಿ ಅತ್ಯಂತ ಬೇಡಿಕೆಯ ಕೋರ್ಸ್‌ಗಳಲ್ಲಿ ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್ ಒಂದಾಗಿದೆ. ಈ ಕೋರ್ಸ್ ಕಲಿಯಲು ಬಯಸುವವರಿಗೆ ಈ ಕ್ಷೇತ್ರದ ಕರಿಯರ್ ಗೈಡ್ ಇಲ್ಲಿದೆ. ಡಿಪ್ಲೊಮಾದಿಂದ ಹಿಡಿದು ಬಿಟೆಕ್‍ವರೆಗೆ ಎಲ್ಲಾ ವಿದ್ಯಾರ್ಹತೆಗೂ ಸಲ್ಲುವ ಉದ್ಯೋಗವೆಂದರೆ ಐಟಿ ಹಾರ್ಡ್‍ವೇರ್ ಆಂಡ್ ನೆಟ್‍ವರ್ಕಿಂಗ್. ಇಲ್ಲಿರುವ ಶೇ. 40ರಷ್ಟು ಉದ್ಯೋಗಿಗಳು ಟೆಕ್ನಾಲಜಿ ಹಿನ್ನಲೆಯ ಎಂಜನಿಯರಿಂಗ್ ಕಲಿತವರಲ್ಲ ಎನ್ನುವುದು ವಿಶೇಷ.
ಐಟಿ ಕಂಪನಿಯಲ್ಲಿ ಕೆಲಸ ಸಿಗಬೇಕಾದರೆ ಎಂಜಿನಿಯರಿಂಗ್ ಓದಿರಲೇಬೇಕು ಎಂಬ ನಂಬಿಕೆ ಸಾಮಾನ್ಯವಾಗಿ ಎಲ್ಲರಲ್ಲಿದೆ. ಆದರೆ ವಸ್ತು ಸ್ಥಿತಿ ಹಾಗಿಲ್ಲ. ಐಟಿ ಹಾರ್ಡ್‍ವೇರ್ ಆಂಡ್ ನೆಟ್‍ವರ್ಕಿಂಗ್ ವಿಭಾಗವೇ ಇದಕ್ಕೆ ಅತ್ಯುತ್ತಮ ನಿದರ್ಶನ. ಸದ್ಯ ಈ ವಿಭಾಗದಲ್ಲಿ 10 ಲಕ್ಷ ಉದ್ಯೋಗಾವಕಾಶಗಳಿವೆ ಎಂದು ಜೆಟ್‍ಕಿಂಗ್ ಮುಖ್ಯಸ್ಥ ಸಿದ್ಧಾರ್ಥ ಹೇಳುತ್ತಾರೆ.
ಏನಿದು ಹಾರ್ಡ್‍ವೇರ್ ಮತ್ತು ನೆಟ್‍ವರ್ಕಿಂಗ್?: ಸಿಪಿಯು, ಎಸ್‍ಎಂಪಿಎಸ್, ರ್ಯಾಮ್ ಮತ್ತು ಎಲ್ಲಾ ಪೆರಿಫೆರಲ್ ಸಾಧನಗಳ ಕುರಿತಾದ ವಿಭಾಗ ಇದಾಗಿದೆ. ನೀವು ಹಾರ್ಡ್‍ವೇರ್ ಎಂಜಿನಿಯರ್ ಆಗಿದ್ದರೆ ಇವುಗಳ ಸಮಸ್ಯೆ ಬಗೆಹರಿಸುವುದು, ಅಳವಡಿಕೆ ಅಥವಾ ಇನ್‍ಸ್ಟಾಲೇಷನ್ ಮತ್ತು ಕಾನಿಗರೇಷನ್ ಮಾಡುವ ಕಾರ್ಯ ಮಾಡಬೇಕಾಗುತ್ತದೆ.
ನೆಟ್‍ವರ್ಕಿಂಗ್‍ನಲ್ಲಿ ಕೇಬಲ್ ಅಳವಡಿಕೆ, ಒಎಸ್‍ಐ ಮಾಡೆಲ್, ಟಿಸಿಪಿ ಐಪಿ ಮಾಡೆಲ್, ಐಪಿ ಅಡ್ರೆಸ್ಸಿಂಗ್ ಇತ್ಯಾದಿಗಳಿಗೆ ಸಂಬಂಧಪಟ್ಟ ಕಾರ್ಯಗಳನ್ನು ಮಾಡಬೇಕಾಗುತ್ತದೆ. ಇನ್ನೂ ಸರಳವಾಗಿ ಹೇಳಬೇಕೆಂದರೆ ಕಂಪ್ಯೂಟರ್‍ನ ಬಿಡಿಭಾಗಗಳು ಅಥವಾ ಕಂಪ್ಯೂಟರ್ ಸಂಬಂಧಪಟ್ಟ ವಿಭಾಗಗಳಾದ ಮಾನಿಟರ್, ಕೀಬೋರ್ಡ್, ಸ್ಟೋರೇಜ್, ಮೆಮೊರಿ ಇತ್ಯಾದಿಗಳನ್ನು ಹಾರ್ಡ್‍ವೇರ್ ಎನ್ನಬಹುದು. ಎರಡು ಅಥವಾ ಹೆಚ್ಚು ಸಾಧನಗಳ ಇಂಟರ್‍ಕನೆಕ್ಷನ್ ಅಥವಾ ಅಂತರ್ ಸಂಪರ್ಕವನ್ನು ನೆಟ್‍ವರ್ಕ್ ಎನ್ನಬಹುದು. ಎರಡು ಅಥವಾ ಹೆಚ್ಚಿನ ಸಾಧನಗಳ ನಡುವಿನ ಸಂವಹನವನ್ನು ನೆಟ್‍ವರ್ಕಿಂಗ್ ಎನ್ನಬಹುದಾಗಿದೆ.
ಕೋರ್ಸ್ ಕಲಿಯಿರಿ
ಕಂಪ್ಯೂಟರ್ ಹಾರ್ಡ್‍ವೇರ್ ಆಂಡ್ ನೆಟ್‍ವರ್ಕಿಂಗ್ ಕೋರ್ಸ್‍ನ್ನು ಯಾರು ಬೇಕಾದರೂ ಮಾಡಬಹುದು. ಕಲೆ, ವಾಣಿಜ್ಯ, ವಿವಿಧ ವಿಭಾಗದ ಪದವಿ ಪಡೆದವರಿಂದ ಹಿಡಿದು ಬಿ.ಟೆಕ್ ಮಾಡಿದವರು ಕೂಡ ಈ ವಿಷಯದ ಕೋರ್ಸ್ ಮಾಡಬಹುದು. ಸದ್ಯದ ಮಟ್ಟಿಗೆ ಈ ವಿಭಾಗದ ಉದ್ಯೋಗಿಗಳ ಪೈಕಿ ಶೇ. 40ರಷ್ಟು ಜನರು ನಾನ್-ಟೆಕ್ ಹಿನ್ನೆಲೆಯವರು.
ಇನ್ನು ಔಪಚಾರಿಕ ವಿದ್ಯಾಭ್ಯಾಸ ಪಡೆಯದವರು ಕೂಡ ಈ ಕೋರ್ಸ್‍ಗಳಲ್ಲಿ ಪ್ರವೇಶ ಪಡೆಯಲು ಸಾಧ್ಯವಿದೆ. ಹನ್ನೆರಡನೇ ತರಗತಿ ಪೂರೈಸಿದ ಯಾವುದೇ ವಿದ್ಯಾರ್ಥಿ ಡಿಪ್ಲೊಮಾ ಮುಗಿಸಿದ ಬಳಿಕ ಐಟಿ ಕ್ಷೇತ್ರದಲ್ಲಿ ಉದ್ಯೋಗ ಪಡೆಯಬಹುದಾಗಿದೆ.
ಸಿಲೇಬಸ್ ಹೇಗಿರುತ್ತದೆ?
ಬಹುತೇಕ ಶಿಕ್ಷಣ ಸಂಸ್ಥೆಗಳು ಐಟಿ ನೆಟ್‍ವರ್ಕಿಂಗ್ ಕ್ಷೇತ್ರಕ್ಕೆ ಅವಶ್ಯಕವಾದ ಅಂಶಗಳನ್ನು ಒಳಗೊಂಡಿರುವ ಪಠ್ಯಕ್ರಮ ಅಳವಡಿಸಿಕೊಂಡಿವೆ. ಪಿಸಿ ಹಾರ್ಡ್‍ವೇರ್, ಎಂಎಸ್ ವಿಂಡೋಸ್ ಅಪರೇಟಿಂಗ್ ಸಿಸ್ಟಂ ಮತ್ತು ವಿಂಡೋ ಸರ್ವರ್, ಸ್ಟೊರೇಜ್ ವಿಷಯಗಳನ್ನು ಆರು ತಿಂಗಳಲ್ಲಿ ತಿಳಿದುಕೊಳ್ಳಬಹುದಾಗಿದೆ. ಮುಂದಿನ ಆರು ತಿಂಗಳುಗಳಲ್ಲಿ ವಿದ್ಯಾರ್ಥಿಗಳಿಗೆ ಸಿಸಿಎನ್‍ಎ ಮತ್ತು ರೆಡ್‍ಹ್ಯಾಟ್‍ನಂತಹ ಮುಂದಿನ ಹಂತದ ತಂತ್ರಜ್ಞಾನ ಕಲಿಸಿ ಕೊಡಲಾಗುತ್ತದೆ. ಹೀಗೆ ಒಂದು ವರ್ಷದ ಶಿಕ್ಷಣದಲ್ಲಿ ವಿದ್ಯಾರ್ಥಿಯು ಐಟಿ ಎಂಜನಿಯರ್ ಆಗದೆಯೂ ಐಟಿ ಕಂಪನಿಯಲ್ಲಿ ಉದ್ಯೋಗ ಪಡೆಯಲು ಸಾಧ್ಯವಾಗುತ್ತದೆ.
ಉದ್ಯೋಗಾವಕಾಶ ಹೇಗಿದೆ?
ಡೆಸ್ಕ್‍ಟಾಪ್ ಸಪೋರ್ಟ್ ಕ್ಷೇತ್ರದಲ್ಲಿ ಐದು ಲಕ್ಷಕ್ಕೂ ಅಧಿಕ ಉದ್ಯೋಗಾವಕಾಶವಿದೆ. ಮೂರು ಲಕ್ಷ ಉದ್ಯೋಗಗಳು ನೆಟ್‍ವರ್ಕಿಂಗ್ ಆಂಡ್ ಇನ್‍ಫ್ರಾಸ್ಟ್ರಕ್ಚರ್ ಮ್ಯಾನೇಜ್‍ಮೆಂಟ್ ವಿಭಾಗದಲ್ಲಿವೆ. ಪ್ರತಿ ವರ್ಷವೂ ಇದು ಎರಡರಿಂದ ಮೂರು ಪಟ್ಟು ಹೆಚ್ಚುತ್ತಿದೆ. ಆರಂಭದಲ್ಲಿ ವಾರ್ಷಿಕ ಕನಿಷ್ಠವೆಂದರೂ ಒಂದರಿಂದ ಎರಡು ಲಕ್ಷ ರೂ. ವೇತನ ಸಿಗುತ್ತದೆ ಎಂದು ಇತ್ತೀಚಿನ ವರದಿಯೊಂದು ಹೇಳಿದೆ. ಪ್ರತಿವರ್ಷ ಈ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿಯಾಗುತ್ತಿವೆ. ಇತ್ತೀಚಿಗೆ ಹೊಸ ಬಗೆಯ ತಂತ್ರಜ್ಞಾನಗಳು ಆಗಮಿಸುತ್ತಿರುವುದರಿಂದ ನೂತನ ಕೌಶಲಗಳನ್ನು ಕಲಿತವರಿಗೆ ಹೆಚ್ಚಿನ ಬೇಡಿಕೆ ಇರಲಿದೆ.
ವೇತನ ಎಷ್ಟಿರುತ್ತದೆ?
ಪೇಸ್ಕೇಲ್ ಸಂಸ್ಥೆಯ ಪ್ರಕಾರ ದೇಶದಲ್ಲಿ ಕಂಪ್ಯೂಟರ್ ಹಾರ್ಡ್‍ವೇರ್ ಉದ್ಯೋಗಿಯ ಸರಾಸರಿ ವಾರ್ಷಿಕ ವೇತನ 2,08,819 ರೂಪಾಯಿ ಇರುತ್ತದೆ. ಕೆಲಸದ ಅನುಭವ ಹೆಚ್ಚಿದಂತೆ ಇವರ ವೇತನವು ಉತ್ತಮವಾಗುತ್ತದೆ. ಕೆಲವೊಂದು ಪ್ರತಿಷ್ಠಿತ ಕಂಪನಿಗಳಲ್ಲಿ ತಿಂಗಳ ವೇತನವೇ 30-80 ಸಾವಿರ ರೂ.ವರೆಗೆ ಇರುತ್ತದೆ. ಅನುಭವಿಗಳಿಗೆ ಲಕ್ಷ ರೂ. ಮೇಲೂ ವೇತನ ದೊರಕುತ್ತದೆ. ಆಯಾ ವ್ಯಕ್ತಿಗಳ ಪ್ರತಿಭೆ ತಕ್ಕಂತೆ ಉತ್ತಮ ವೇತನ ಪಡೆಯುವ ಕಂಪನಿಗಳಲ್ಲಿ ಉದ್ಯೋಗ ಪಡೆಯಬಹುದಾಗಿದೆ.
ವಿಜಯನಗರ ಕಂಪ್ಯೂಟರ್ ತರಬೇತಿ ಕೇಂದ್ರ “ಬಾಲ್ಕ್’ನಲ್ಲಿರುವ Advance Diploma in Computer Hardware and networking ( ADCHN) ಕೋರ್ಸ್ ಪಡೆಯಲು ಈಗಲೇ ನಮ್ಮನ್ನು ಸಂಪರ್ಕಿಸಿ. ಈ ಕುರಿತು ಹೆಚ್ಚಿನ ವಿವರ ಮತ್ತು ಸಂಪರ್ಕ ಮಾಹಿತಿ ಪಡೆಯಲು ಈ ವೆಬ್‌ಸೈಟ್‌ಗೆ ಭೇಟಿ ನೀಡಿ.
ನಮ್ಮ ವಿಳಾಸ: 427/A, 2nd Floor, 8th Main Service Road, near Kaveri Grameena Bank, Vijayanagar, Bengaluru, Karnataka 560040