ಕ್ರಿಯಾಶೀಲ ವಿದ್ಯಾರ್ಥಿಗಳಿಗೆ ಅನಿಮೇಷನ್ ಜಗತ್ತಿಗೆ ಸ್ವಾಗತ

ವಿದ್ಯಾರ್ಥಿಗಳ ಕಲಿಕೆಯಲ್ಲಿ ಹಲವು ವಿಧಗಳಿವೆ. ಕೆಲವರು ತಮ್ಮ ಹೆತ್ತವರ ಒತ್ತಾಯಕ್ಕೆ ಮಣಿದು ಯಾವುದಾದರೂ ಕೋರ್ಸ್‌ಗೆ ಸೇರುತ್ತಾರೆ. ಭವಿಷ್ಯದಲ್ಲಿ ಆ ಉದ್ಯೋಗದಲ್ಲಿ ಒಂದಿಷ್ಟು ವೇತನ ದೊರಕಿದರೂ ಅವರಿಗೆ ಮಾನಸಿಕ ನೆಮ್ಮದಿ ದೊರಕುವುದಿಲ್ಲ. ಯಾಕೆಂದರೆ ಅವರು ತಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿರುವುದಿಲ್ಲ. ಇನ್ನು ಕೆಲವರು ತಮ್ಮ ಹವ್ಯಾಸ, ಆಸಕ್ತಿಗೆ ಪೂರಕವಾದ ಉದ್ಯೋಗವನ್ನು ಆಯ್ಕೆ ಮಾಡಿಕೊಂಡು ಜೀವನಪೂರ್ತಿ ಅದರಲ್ಲಿ ಸಂತೋಷದಿಂದ ಇರುತ್ತಾರೆ.

ವಿದ್ಯಾರ್ಥಿಗಳಲ್ಲಿ ಬಹುತೇಕರು ಕ್ರಿಯಾಶೀಲರಾಗಿರುತ್ತಾರೆ. ವಿವಿಧ ಬಗೆಯ ಪ್ರತಿಭೆ, ಕ್ರಿಯೆಟಿವಿಟಿಯಿಂದ ಜೀವಿಸುತ್ತ ಇರುತ್ತಾರೆ. ಕೆಲವು ವಿದ್ಯಾರ್ಥಿಗಳಿಗೆ ಚಿತ್ರಕಲೆ, ಕಂಪ್ಯೂಟರ್‌ನಲ್ಲಿ ಡಿಸೈನ್‌ ಮಾಡುವ ಕುರಿತು ಆಸಕ್ತಿ ಇರಬಹುದು. ಇಂತಹ ವಿದ್ಯಾರ್ಥಿಗಳು ಕ್ರಿಯಾಶೀಲತೆ ಬಯಸುವ ಉದ್ಯೋಗಗಳನ್ನು ಆಯ್ಕೆ ಮಾಡಿಕೊಂಡರೆ ಉತ್ತಮವಾಗಿರುತ್ತದೆ. ಬರವಣಿಗೆ ಕುರಿತು ಆಸಕ್ತಿ ಇರುವ ವಿದ್ಯಾರ್ಥಿಗಳು ಬರವಣಿಗೆ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು.

ಅನಿಮೇಷನ್‌ ಎಂದರೇನು?

ಅನಿಮೇಷನ್ (Animation) ಎಂದರೆ ಸರಣಿ ಚಿತ್ರಗಳನ್ನು ಕ್ರಮೇಣ ಮಾರ್ಪಡಿಸಿ ಚಲನೆಯ ಭಾವನೆಯನ್ನು ಮೂಡಿಸುವುದು. ಇಂದಿನ ಚಲನ ಚಿತ್ರಗಳಲ್ಲಿ ಯಾವ ತಂತ್ರವನ್ನು ಉಪಯೋಗಿಸುತ್ತಾರೋ, ಅದೇ ತಂತ್ರವನ್ನು ಅನಿಮೇಷನ್ ನಲ್ಲಿ ಸಹ ಉಪಯೋಗಿಸಲಾಗುತ್ತದೆ. ಅನಿಮೇಷನ್ ನಲ್ಲಿ 2D ಅನಿಮೇಷನ್, 3D ಅನಿಮೇಷನ್, ಮೋಶನ್ ಗ್ರಾಫಿಕ್ಸ್ (motion graphics), ಸ್ಟಾಪ್ ಮೋಶನ್ (stop motion) ಹೀಗೆ ಹಲವು ಪ್ರಕಾರಗಳಿವೆ . ಅನಿಮೇಷನ್ ಮಾಡಲು ಕೂಡ ಗ್ರಾಫಿಕ್ ಡಿಸೈನ್ ತಿಳಿದಿರುವ ಅವಶ್ಯಕತೆ ಇದೆ. ಅದಲ್ಲದೆ 3D ಅನಿಮೇಷನ್ ಮಾಡಲು 3D ಮಾಡೆಲ್ಲಿಂಗ್ (modelling) ತಿಳಿದಿರುವ ಅವಶ್ಯಕತೆ ಸಹ ಇದೆ. ಅನಿಮೇಷನ್ ನಲ್ಲಿ ಸಾಧಾರಣವಾಗಿ ಉಪಯೋಗಿಸುವ ಸಾಫ್ಟ್ವೇರ್ ಗಳು: Adobe Flash (ಇನ್ನು ಇದು ಲಭ್ಯವಿಲ್ಲ), Adobe Animate, Adobe Character Animator, Opentoonz, Stop Motion Studio, Blender, Autodesk 3ds Max, Autodesk Maya ಮುಂತಾದವುಗಳು.

ಅನಿಮೇಷನ್‌ ಜಗತ್ತು

ದೇಶ-ವಿದೇಶದಲ್ಲಿಂದು ಅನಿಮೇಷನ್‌ ಪರಿಣತರಿಗೆ ಬಲುಬೇಡಿಕೆಯಿದೆ. ಇದು ಮುಖ್ಯವಾಗಿ ಕ್ರಿಯಾಶೀಲರ ಜಗತ್ತು. ಬಾಹುಬಲಿ, ಕುಂಗ್‌ಫು ಪಾಂಡಾ, ಮಿಕ್ಕಿಮೌಸ್‌ ಇತ್ಯಾದಿಗಳನ್ನು ನೋಡಿದವರಿಗೆ ತಾವೂ ಇಂತಹ ಅದ್ಭುತಗಳನ್ನು ಸೃಷ್ಟಿಸುವ ಕ್ಷೇತ್ರದಲ್ಲಿ ಉದ್ಯೋಗ ಪಡೆಯಬೇಕೆಂಬ ಬಯಕೆ ಉಂಟಾಗಬಹುದು. ನಿಮ್ಮಲ್ಲಿಯೂ ಇಂತಹ ಆಸಕ್ತಿ, ಕ್ರಿಯಾಶೀಲತೆ ಇದ್ದರೆ ಖಂಡಿತವಾಗಿಯೂ ಅನಿಮೇಷನ್‌ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು.

ವಿಶೇಷವೆಂದರೆ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದವರು ಮಾತ್ರವಲ್ಲದೆ ಫೇಲ್‌ ಆದವರೂ ಕೂಡ ಈ ಕೋರ್ಸ್‌ ಮಾಡಿ ಅತ್ಯುತ್ತಮ ಕರಿಯರ್‌ ರೂಪಿಸಿಕೊಳ್ಳಲು ಅವಕಾಶವಿರುತ್ತದೆ.

ವಿಫುಲ ಉದ್ಯೋಗಾವಕಾಶ

ಮಲ್ಟಿಮೀಡಿಯಾ ಕ್ಷೇತ್ರದಲ್ಲಿ ಉದ್ಯೋಗಕ್ಕೆ ಬರವಿಲ್ಲ. ಮಲ್ಟಿಮೀಡಿಯಾ ಕ್ಷೇತ್ರದಲ್ಲಿ ಉದ್ಯೋಗಿಗಳ ಬೇಡಿಕೆ ಹೆಚ್ಚುತ್ತಿದ್ದು, ಪೂರೈಕೆ ಕಡಿಮೆ ಆಗಿದೆ. ಇತ್ತೀಚೆಗೆ ಅನಿಮೇಷನ್‌ ಮತ್ತು ಮಲ್ಟಿಮೀಡಿಯಾವು ಮನುಷ್ಯನ ನೈಪುಣ್ಯತೆ ಹೆಚ್ಚಿಸುವ ಯಂತ್ರವಾಗಿದೆ. ಚಲನಚಿತ್ರ, ಟೀವಿ, ಗೇಮಿಂಗ್‌, ಜಾಹೀರಾತು, ಪ್ಯಾಕೇಜಿಂಗ್‌, ಕೈಗಾರಿಕೆಗಳು, ವಿನ್ಯಾಸ, ವೆಬ್‌ಕ್ಷೇತ್ರ,, ವಾಸ್ತುಶಿಲ್ಪ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಿಗೆ ಅನಿಮೇಷನ್‌ ಮತ್ತು ಮಲ್ಟಿಮೀಡಿಯಾ ಪರಿಣಿತರ ಅವಶ್ಯಕತೆ ಇರುತ್ತದೆ.

ಸ್ನೇಹಿತರೇ, ಇಂದು ಅನಿಮೇಷನ್‌ ಜಗತ್ತಿನಲ್ಲಿ ಸಾಕಷ್ಟು ಕನ್ನಡಿಗರು ಉನ್ನತ ಉದ್ಯೋಗ ಪಡೆದುಕೊಂಡಿದ್ದಾರೆ. ಕೈತುಂಬಾ ವೇತನ ನೀಡುವ ಈ ಕ್ಷೇತ್ರದಲ್ಲಿ ನೀವು ನಿಮ್ಮ ಕರಿಯರ್‌ ರೂಪಿಸಿಕೊಳ್ಳಲು ಬಯಸಿದರೆ ಈ ಕೂಡಲೇ ವಿಜಯನಗರದಲ್ಲಿರುವ ಬಾಲ್ಕ್‌ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ.

BALC Computer Education

Address#427/A, 2nd Floor ,8th main, Service Rd, near karnataka grameena bank, Vijayanagar, Bengaluru, Karnataka 560040

Phone099025 06651

You May Also Like

Leave a Reply

Your email address will not be published. Required fields are marked *

error: Content is protected !!