ಅಡಾಬ್‌ ಪೇಜ್‌ಮೇಕರ್‌ ಉದ್ಯೋಗ- ಸಂದರ್ಶನದಲ್ಲಿ ಕೇಳುವ ಪ್ರಶ್ನೆಗಳಿವು

ಅಡಾಬ್‌ ಪೇಜ್‌ಮೇಕರ್ ಎನ್ನುವುದು ಮೊದಲ ಡೆಸ್ಕ್‌ಟಾಪ್‌ ಪಬ್ಲಿಷಿಂಗ್‌ ಪ್ರೋಗ್ರಾಮ್‌ ಆಗಿದ್ದು, ಈಗಲೂ ಜಗತ್ತಿನೆಲ್ಲೆಡೆ ಬಹುಬೇಡಿಕೆ ಉಳಿಸಿಕೊಂಡಿದೆ. ಅಡಾಬ್‌ ಕಲಿಕೆಯು ಉತ್ತಮ ಕರಿಯರ್‌ ಆಯ್ಕೆಯಾಗಿದ್ದು, ಅಡಾಬ್‌ ಸಂಬಂಧಪಟ್ಟ ವಿವಿಧ ಕೋರ್ಸ್‌ಗಳನ್ನು ನೀವು ಕಲಿಯಬಹುದು.

ಕರ್ನಾಟಕದಲ್ಲಿಯೂ ಈ ತಂತ್ರಾಂಶದ ಬಳಕೆ ಹೆಚ್ಚಿದ್ದು, ಉದ್ಯೋಗಾವಕಾಶವೂ ಉತ್ತಮವಾಗಿದೆ. ಈ ಸಾಫ್ಟ್‌ವೇರ್‌ ಜೊತೆಗೆ ಅಡೋಬ್‌ ಟೇಬಲ್‌ ಕೂಡ ಒಳಗೊಂಡಿರುತ್ತದೆ. ಪೇಜಿನೇಷನ್‌/ ಪುಟ ವಿನ್ಯಾಸ ಮಾಡಲು ಈ ಸಾಫ್ಟ್‌ವೇರ್‌ ಬಳಕೆ ಹೆಚ್ಚಿದೆ.

ಇಂದಿನ ಬ್ಲಾಗ್‌ ಪೋಸ್ಟ್‌ನಲ್ಲಿ ಅಡಾಬ್‌ ಪೇಜ್‌ಮೇಕರ್‌ ಉದ್ಯೋಗಗಳಿಗೆ ಸಂಬಂಧಪಟ್ಟ ವಿವಿಧ ಸಂದರ್ಶನ ಪ್ರಶ್ನೆಗಳನ್ನು ನೀಡಲಾಗಿದೆ. ಇವೆಲ್ಲ ಈ ಹಿಂದೆ ಅಭ್ಯರ್ಥಿಗಳಿಗೆ ಕೇಳಿರುವ ಪ್ರಶ್ನೆಗಳಾಗಿವೆ. ಹೀಗಾಗಿ, ಇಂತಹ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧರಾಗಿ.

  • ಅಡಾಬ್‌ ಪೇಜ್‌ಮೇಕರ್‌ ೭.೦ನಲ್ಲಿರುವ ಮುಖ್ಯವಾದ ವಿಶೇಷ ಫೀಚರ್‌ಗಳು ಯಾವುವು?

ಇದಕ್ಕೆ ನೀವು ಡೇಟಾ ಮರ್ಜ್‌, ಅಡಾಬ್‌ ಇಲ್ಯುಸ್ಟ್ರೇಟರ್‌ಗೆ ಸಪೋರ್ಟ್‌, ಫೋಟೊಶಾಪ್‌ ಅಥವಾ ಇಲ್ಯುಸ್ಟ್ರೇಟರ್‌ನಲ್ಲಿ ರಚಿಸಿದ ಫೈಲ್‌ಗಳ ಬಳಕೆ, ಅಪ್‌ಡೇಟ್‌ ಆಗಿರುವ ಇಪಿಎಸ್‌ ಫಿಲ್ಟರ್‌ ಇತ್ಯಾದಿ ಹೊಸ ಫೀಚರ್‌ಗಳ ಬಗ್ಗೆ ಸಂದರ್ಶನದಲ್ಲಿ ವಿವರ ನೀಡಬೇಕು.

  • ಅಡಾಬ್‌ ಪೇಜ್‌ಮೇಕರ್‌ ೭.೦ನ ಎಜುಕೇಷನಲ್‌ ಮತ್ತು ರೀಟೆಲ್‌ ಆವೃತ್ತಿಗಳಿಗೆ ಇರುವ ವ್ಯತ್ಯಾಸಗಳೇನು?
  • ಇನ್‌ಡಿಸೈನ್‌ ಎನ್ನುವುದು ಪೇಜ್‌ಮೇಕರ್‌ಗೆ ಇರುವ ಬದಲಿ ಆವೃತ್ತಿಯೇ?
  • ಈ ಹಿಂದಿನ ಆವೃತ್ತಿಗಳ ಪೇಜ್‌ಮೇಕರ್‌ಗಳಲ್ಲಿ ಮಾಡಿರುವ ಫೈಲ್‌ಗಳನ್ನು ಅಡಾಬ್‌ ಪೇಜ್‌ಮೇಕರ್‌ ೭.೦ ತೆರೆಯಬಹುದೇ?
  • ಅಡಾಬ್‌ ಪೇಜ್‌ಮೇಕರ್‌ ೭.೦ ನಲ್ಲಿ ಅಡಾಬ್‌ ಅಕ್ರೊಬಾಟ್‌ ೫.೦ ಒಳಗೊಂಡಿದೆಯೇ?
  • ಅಡಾಬ್‌ ಪೇಜ್‌ಮೇಕರ್‌ ೭.೦ಮ್ಯಾಕ್‌ ಮತ್ತು ವಿಂಡೋಸ್‌ ಆವೃತ್ತಿಗಳ ನಡುವೆ ಇರುವ ವ್ಯತ್ಯಾಸಗಳೇನು?
  • ಅಡಾಬ್‌ ಪೇಜ್‌ಮೇಕರ್‌ ೭.೦ ಯಾವೆಲ್ಲ ಭಾಷೆಗಳಿಗೆ ಬೆಂಬಲ ನೀಡುತ್ತದೆ?
  • ಅಡಾಬ್‌ ಪೇಜ್‌ಮೇಕರ್‌ ೭.೦ನ ರಿಟೇಲ್‌ ಆವೃತ್ತಿಗಳಲ್ಲಿ ಯಾವ ಹೊಸ ಫಾಂಟ್‌ಗಳನ್ನು ಸೇರಿಸಲಾಗಿದೆ?
  • ಅಡಾಬ್‌ ಪೇಜ್‌ಮೇಕರ್‌ ೭.೦ ದರ ಎಷ್ಟಿರುತ್ತದೆ?
  • ಅಡಾಬ್‌ ಪೇಜ್‌ಮೇಕರ್‌ ೭.೦ ಇನ್‌ಸ್ಟಾಲ್‌ ಮಾಡಲು ಕಂಪ್ಯೂಟರ್‌ನಲ್ಲಿ ಯಾವೆಲ್ಲ ಸಾಮರ್ಥ್ಯ ಇರಬೇಕು (ರ್ಯಾಮ್‌, ಕೋರ್‌ ಇತ್ಯಾದಿ ಸಿಸ್ಟಮ್‌ ರಿಕ್ವಾಯರ್‌ಮೆಂಟ್‌)
  • ಅಡಾಬ್‌ ಪೇಜ್‌ಮೇಕರ್‌ ೭.೦ ಆಡಿಯನ್ಸ್‌ ಯಾರು?

ಇವೆಲ್ಲ ಉದ್ಯೋಗ ಸಂದರ್ಶನದಲ್ಲಿ ಕೇಳುವ ಪ್ರಶ್ನೆಗಳಿಗೆ ಸ್ಯಾಂಪಲ್‌ ಅಷ್ಟೇ. ಇಂತಹ ಪ್ರಶ್ನೆಗಳಿಗೆ ಪರಿಣಾಮಕಾರಿಯಾಗಿ ಉತ್ತರಿಸಲು ಕಲಿತರೆ ನಿಮಗೆ ಈ ಕ್ಷೇತ್ರದಲ್ಲಿ ಉದ್ಯೋಗ ದೊರಕುವ ಸಾಧ್ಯತೆ ಅಧಿಕವಾಗಿರುತ್ತದೆ.

ವಿಜಯನಗರ ಬಾಲ್ಕ್‌ ಕೇಂದ್ರದಲ್ಲಿ ಅಡಾಬ್‌ ಇಲ್ಯುಷ್ಟ್ರೇಷನ್‌, ಅಡಾಬ್‌ ಪೇಜ್‌ಮೇಕರ್‌ ಸೇರಿದಂತೆ ವಿವಿಧ ಅಡಾಬ್‌ ಕೋರ್ಸ್‌ಗಳು ಇವೆ. ಹೆಚ್ಚಿನ ಮಾಹಿತಿಗಾಗಿ ನೀವು ಈಗಲೇ ವಿಜಯನಗರ ಬಾಲ್ಕ್‌ ಕಂಪ್ಯೂಟರ್‌ ತರಬೇತಿ ಕೇಂದ್ರವನ್ನು ಸಂಪರ್ಕಿಸಿ.

ವಿಳಾಸ: BALC Computer Education,  #427/A, 2nd Floor ,8th main, Service Rd, near karnataka grameena bank, Vijayanagar, Bengaluru, Karnataka 560040

You May Also Like

Leave a Reply

Your email address will not be published. Required fields are marked *

error: Content is protected !!