ರಾಜ್ಯದ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿರುವ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯ ಹಾಗಿರಬೇಕು, ಹೀಗಿರಬೇಕು ಎಂದೆಲ್ಲ ಕನಸು ಇರುತ್ತದೆ. ಆದರೆ, ತಮ್ಮ ಕರಿಯರ್ ರೂಪಿಸಿಕೊಳ್ಳಲು ಮುಂದೆ ಏನು ಓದಬೇಕು ಎಂಬ ಗೊಂದಲವಿರುತ್ತದೆ. ಈಗ ಲಭ್ಯವಿರುವ ನೂರಾರು ಕೋರ್ಸ್‌ಗಳಲ್ಲಿ ಯಾವುದು ತಮ್ಮ ಆಸಕ್ತಿಗೆ ಪೂರಕ, ಯಾವುದನ್ನು ಕಲಿತರೆ ಉದ್ಯೋಗ ದೊರಕಬಹುದು ಎಂಬ ಗೊಂದಲ ಇರುತ್ತದೆ.
ನೀವು ಓದಿರುವ ಎಲ್ಲಾ ವಿಷಯಗಳು ನಿಮಗೆ ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ದೊರಕಿಸಿಕೊಡುತ್ತದೆ ಎಂದು ಹೇಳಲಾಗದು. ಈಕಾರಣಕ್ಕೆ ಉದ್ಯೊಗ ಖಾತ್ರಿ ನೀಡುವ ಕೋರ್ಸ್‌ಗಳು, ಸರ್ಟಿಫಿಕೇಷನ್‌ಗಳು, ಐಟಿ ಮತ್ತು ಐಟಿಯೇತರ ಅಲ್ಪಾವಧಿ ಕೊರ್ಸ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.
ಉದಾಹರಣೆಗೆ ನಿಮ್ಮ ರೆಸ್ಯೂಂನಲ್ಲಿ ಪದವಿ ವಿದ್ಯಾಭ್ಯಾಸ ಎಂಬ ಒಂದು ಮಾಹಿತಿ ಇರುವುದಕ್ಕೂ ಪದವಿ ಜೊತೆಗೆ ಕ್ಯಾಡ್/ಕ್ಯಾಮ್ ಸರ್ಟಿಫಿಕೇಟ್ ಇರುವುದಕ್ಕೂ ಸಾಕಷ್ಟು ವ್ಯತ್ಯಾಸ ಇರುತ್ತದೆ. ಕೇವಲ ಪದವಿ ಮಾತ್ರವಿದ್ದರೆ ನಿಮಗೆ ಯಾವುದಾದರೂ ಸಾಮಾನ್ಯ ಉದ್ಯೋಗ ದೊರಕಬಹುದು. ಕ್ಯಾಡ್ ಸರ್ಟಿಫಿಕೇಷನ್ ಜೊತೆಗಿದ್ದರೆ ಕ್ಯಾಡ್ ಕ್ಷೇತ್ರಕ್ಕೆ ನಿಮಗೆ ಪ್ರವೇಶ ದೊರಕಬಹುದು.
ರಾಜ್ಯದ ಬಹುತೇಕ ವಿದ್ಯಾರ್ಥಿಗಳಿಗೆ ಈಗ ಎಸ್‌ಎಸ್ಎಲ್‌ಸಿ/ಪಿಯುಸಿ ಬಳಿಕ ಮುಂದೆ ಏನು ಓದಬೇಕು ಎನ್ನುವುದೇ ಸಂದಿಗ್ಧ ಉಂಟು ಮಾಡುತ್ತದೆ. ಎಲ್ಲಾದರೂ ಎಸ್‌ಎಸ್‌ಎಲ್‌ಸಿ ಫೇಲಾದರಂತೂ ಇಲ್ಲಿಗೆ ನನ್ನ ಬದುಕೇ ಮುಗಿಯಿತು ಎಂದರ್ಥದಲ್ಲಿ ಅನ್‌ಸ್ಕಿಲ್ಡ್ ಉದ್ಯೋಗಕ್ಕೆ ಸೇರಿ ಬಿಡುತ್ತಾರೆ.
ರಾಜ್ಯದ ವಿದ್ಯಾರ್ಥಿಗಳಿಗೆ ಈಗಿನ ಉದ್ಯೋಗ ಟ್ರೆಂಡ್, ಅವಶ್ಯವಿರುವ ಕೌಶಲ್ಯಗಳು, ಸಂದರ್ಶನ ಟಿಪ್ಸ್, ಕಂಪ್ಯೂಟರ್ ಜ್ಞಾನ ಸೇರಿದಂತೆ ಸಮಸ್ತ ಮಾಹಿತಿ, ಸಲಹೆಗಳನ್ನು ಒಂದೇ ಕಡೆಯಲ್ಲಿ ಒದಗಿಸಬೇಕು ಎಂದು ವಿಜಯನಗರ ಬಾಲ್ಕ್ ಶಿಕ್ಷಣ ಸಂಸ್ಥೆಯು ಈ ವೆಬ್‌ಸೈಟ್ ಆರಂಭಿಸಿದೆ.
ವಿಜಯ ನಗರದ ಭಾರತೀಯ ಅಕಾಡೆಮಿ ಆಫ್ ಲಿಂಗ್ವಿಸ್ಟಿಕ್ಸ್ ಮತ್ತು ಕಮ್ಯುನಿಕೇಷನ್‌ನ ಉಪಕ್ರಮ ಇದಾಗಿದ್ದು, ರಾಜ್ಯದ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಲಿದೆ ಎಂಬ ನಂಬಿಕೆ ನಮ್ಮದು.
ಬಾಲ್ಕ್ ವಿಜಯನಗರವನ್ನು ೨೦೦೯ರಲ್ಲಿ ಸ್ಥಾಪಿಸಲಾಗಿದ್ದು, ಕಂಪ್ಯೂಟರ್ ತರಬೇತಿ ನೀಡುವ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿ ವಿಜಯನಗರ, ಬೆಂಗಳೂರಿನ ವಿದ್ಯಾರ್ಥಿಗಳು ಮಾತ್ರವಲ್ಲದೆ ರಾಜ್ಯದ ಮೂಲೆಮೂಲೆಯ ವಿದ್ಯಾರ್ಥಿಗಳು ಆಗಮಿಸಿ ತಮ್ಮ ಭವಿಷ್ಯಕ್ಕೆ ಪೂರಕವಾದ ಕೋರ್ಸ್‌ಗಳನ್ನು ಕಲಿಯುತ್ತಿದ್ದಾರೆ.
ವಿದ್ಯಾರ್ಥಿಗಳಿಗೆ ಏನು ಅನುಕೂಲ?
ವಿಜಯನಗರ ಬಾಲ್ಕ್.ಕಾಂ ಎಂಬ ಕನ್ನಡ ವೆಬ್‌ಸೈಟ್ ಮೂಲಕ ವಿದ್ಯಾರ್ಥಿಗಳು ಹಲವು ಪ್ರಯೋಜನಗಳನ್ನು ಪಡೆಯಬಹುದು. ಅವುಗಳೆಂದರೆ,
- ಈಗಿನ ಉದ್ಯೊಗ ಜಗತ್ತಿನ ಕುರಿತು ಅಪ್‌ಡೇಟ್ ಆಗಿರಬಹುದು.
- ಉದ್ಯೋಗ ಖಾತ್ರಿ ನೀಡುವಂತಹ ಸರ್ಟಿಫಿಕೇಷನ್ ಕೋರ್ಸ್‌ಗಳ ಮಾಹಿತಿ ಪಡೆಯಬಹುದು.
- ಉದ್ಯೊಗ ಸಂದರ್ಶನ ಹೇಗೆ ಎದುರಿಸಬೇಕು ಎಂದು ತಜ್ಞರ ಮಾರ್ಗದರ್ಶನ, ಸಲಹೆಗಳನ್ನು ಪಡೆಯಬಹುದು.
- ಉದ್ಯೊಗ ಕ್ಷೇತ್ರ ಬಯಸುವ ಹೆಚ್ಚುವರಿ ಕೌಶಲದ ಮಾಹಿತಿ ಪಡೆಯಬಹುದು.
- ಕ್ಯಾಡ್, ಪೈಥಾನ್, ಕೋಡಿಂಗ್ ಸೇರಿದಂತೆ ಹಲವು ಟೆಕ್ ಕೌಶಲಗಳ ವಿವರ ಪಡೆಯಬಹುದು.
- ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಪಟ್ಟಂತೆ ಅಮೂಲ್ಯ ಲೇಖನಗಳನ್ನು ಓದಬಹುದು.
- ವಿಜಯನಗರ ಬಾಲ್ಕ್ ಕೋರ್ಸ್‌ಗಳ ಮಾಹಿತಿ ಪಡೆಯಬಹುದು.
- ವಿಜಯನಗರ ಬಾಲ್ಕ್ ಕೊರ್ಸ್ ಶುಲ್ಕಗಳಲ್ಲಿ ಈ ವೆಬ್‌ಸೈಟ್ ಓದುಗ ವಿದ್ಯಾರ್ಥಿಗಳಿಗೆ ವಿಶೇಷ ಆಫರ್ ಸಹ ದೊರಕಬಹುದು.
- ಎಲ್ಲಕ್ಕಿಂತ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ತಮ್ಮ ಕರಿಯರ್ ಬಗ್ಗೆ ಸ್ಪಷ್ಟ ಚಿತ್ರಣ ಬೆಳೆಸಿಕೊಳ್ಳಲು ಈ ವೆಬ್‌ಸೈಟ್ ನೆರವಾಗಬಲ್ಲದು.
ಕೊರೊನಾ ಕಾಲದಲ್ಲಿ ಕಲಿಕೆ
ಈಗ ಜಗತ್ತೇ ಕೊರೊನಾ ಸಂಕಷ್ಟದಲ್ಲಿದೆ. ವಿದ್ಯಾರ್ಥಿಗಳಿಗೂ ಮುಂದೆ ಏನು ಮಾಡಬೇಕು ಎಂಬ ಗೊಂದಲವಿರುತ್ತದೆ. ನಮ್ಮ ಒಂದು ವರ್ಷ ವ್ಯರ್ಥವಾಯಿತೆ? ಮುಂದೆ ನಮಗೆ ಉದ್ಯೋಗವಕಾಶ ದೊರಕಬಹುದೇ? ಈ ಸಮಯದಲ್ಲಿ ಯಾವ ಕೋರ್ಸ್ ಕಲಿಯಬಹುದು? ಯಾವ ಕೋರ್ಸ್‌ಗಳಿಗೆ ಬೇಡಿಕೆಯಿದೆ? ಇತ್ಯಾದಿ ಹಲವು ಪ್ರಶ್ನೆಗಳು ಎದುರಾಗಬಹುದು. ಇಂತಹ ಪ್ರಶ್ನೆಗಳಿಗೆಲ್ಲ ಈ ವೆಬ್‌ಸೈಟ್ ಮುಂದೆ ಉತ್ತರ ನೀಡಲಿದೆ.
ನಿರಂತರವಾಗಿರಲಿ ಅಧ್ಯಯನ
ಯಾರೂ ಕದಿಯಲಾಗದ ಸಂಪತ್ತು ಎಂದರೆ ಅದು ನಿಮ್ಮಲ್ಲಿರುವ ಜ್ಞಾನ. ಯಾವುದೇ ಬಿಕ್ಕಟ್ಟಿನ ಸಮಯ ಬರಲಿ. ಎಂತಹ ಕಷ್ಟವೇ ಬರಲಿ. ನೀವು ನಿಮ್ಮ ಭವಿಷ್ಯಕ್ಕೆ ಪೂರಕವಾದ ಜ್ಞಾನವನ್ನು ಸಂಪಾದಿಸುತ್ತ ಇರಿ. ಮುಂದೊಂದು ದಿನ ಆ ಜ್ಞಾನವೇ ನಿಮ್ಮನ್ನು ಕೈಹಿಡಿದು ನಡೆಸಲಿದೆ. ಹೀಗಾಗಿ, ಕೊರೊನಾದ ಈ ಬಿಕ್ಕಟ್ಟಿನ ಸಮಯದಲ್ಲಿ ಚಿಂತಿಸುತ್ತ ಕಾಲಹರಣ ಮಾಡದೆ ನಿಮ್ಮ ಭವಿಷ್ಯ ಬದಲಾಯಿಸುವ ವಿಷಯಗಳ ಕಲಿಕೆಗೆ ಮೀಸಲಿಡಿ.
ಅಂದಹಾಗೆ, ಇಲ್ಲಿ ಪ್ರಕಟವಾಗುವ ಎಲ್ಲಾ ಲೇಖನಗಳನ್ನು ತಪ್ಪದೇ ಓದಿ. ನಿಮ್ಮ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಬಾಲ್ಕ್ ವಿಜಯನಗರ ಸಂಸ್ಥೆಯ ವಿಳಾಸ
427/ಎ, 2ನೇ ಮಹಡಿ, 8ನೇ ಮುಖ್ಯ ಸರ್ವೀಸ್ ರಸ್ತೆ, ಕಾವೇರಿ ಗ್ರಾಮೀಣ ಬ್ಯಾಂಕ್ ಹತ್ತಿರ, ವಿಜಯನಗರ, 560040
ಸಂಪರ್ಕ ಸಂಖ್ಯೆ: 090087 60400