ಗ್ರಾಫಿಕ್ ಡಿಸೈನರ್ಗಳು ಬಳಸುವ ಪ್ರಮುಖ ಸಾಫ್ಟ್ವೇರ್ ಎಂದರೆ ಅಡಾಬ್ ಇಲ್ಯುಸ್ಟ್ರೇಟರ್. ಇದನ್ನು ಬಳಸಿ ಅದ್ಭುತ ಲೋಗೊ ರಚಿಸಬಹುದು. ಅಕ್ಷರಗಳನ್ನು ವಿನೂತನವಾಗಿ ವಿನ್ಯಾಸ ಮಾಡಬಹುದು. ಅದ್ಭುತ ಪ್ರಸಂಟೇಷನ್ ಸೃಷ್ಟಿಸಬಹುದು. ಇಂತಹ ನೂರಾರು ಕಾರ್ಯಗಳನ್ನು ಮಾಡಲು ಶಕ್ತವಾಗಿರುವ ಸಾಫ್ಟ್ವೇರ್ ಇದಾಗಿದೆ. ಅಡಾಬ್ ಇಲ್ಯುಸ್ಟ್ರೇಟರ್ ಅನ್ನು ಮೊದಲ ಬಾರಿಗೆ ಲಾಂಚ್ ಮಾಡಿದ್ದು ೧೯೮೭ರಲ್ಲಿ. ಇದೀಗ ಬಹುತೇಕ ವಿನ್ಯಾಸಕಾರರ ಕರಿಯರ್ನಲ್ಲಿ ಇದು ಅವಿಭಾಜ್ಯ ಅಂಗವಾಗಿದೆ.
ಮುಖ್ಯವಾಗಿ ಗ್ರಾಫಿಕ್ ವಿನ್ಯಾಸ ಕ್ಷೇತ್ರಕ್ಕೆ ಪ್ರವೇಶಿಸಲು ಬಯಸುವ ಆರಂಭಿಕರಿಗೆ ಅಡಾಬ್ ಇಲ್ಯುಸ್ಟ್ರೇಟರ್ ಸೂಕ್ತವಾದ ಸಾಫ್ಟ್ವೇರ್ ಆಗಿದೆ. ಇದನ್ನು ಫ್ರೆಷರ್ಗಳು ಸರಳವಾಗಿ ಅಥವ ಸುಲಭವಾಗಿ ಕಲಿಯಬಹುದಾಗಿದೆ.
- ನೀವು ಅಡಾಬ್ ಇಲ್ಯುಸ್ಟ್ರೇಟರ್ ಬಳಸಲು ಆರಂಭಿಸಿದ್ದರೆ ಅದರಲ್ಲಿರುವ ಸ್ಕ್ರಿಬ್ಲಿಂಗ್ (scribbling)ಆಯ್ಕೆಯನ್ನು ಬಳಸಿಕೊಳ್ಳಿ. ಅಡಾಬ್ ಇಲ್ಯುಸ್ಟ್ರೇಟರ್ ಅನ್ನು ಕಲಿಯಲು ಈ ಆಯ್ಕೆ ನೆರವು ನೀಡುತ್ತದೆ.
- ಇನ್ನೂ ಆಳವಾಗಿ ಪರಿಶೀಲಿಸಿದರೆ ನಿಮಗೆ ಫಾಂಟ್ಸ್ ಮತ್ತು ಇನ್ನಿತರೆ ಬೇಸಿಕ್ ಡಿಸೈನ್ ಕಾರ್ಯಗಳನ್ನು ಮಾಡಬಹುದು.
- ನೀವು ಪೆನ್ ಟೂಲ್ ಬಳಸಲು ಆರಂಭಿಸಿದರೆ ಮೌಸ್ ಮೂಲಕವೇ ನೀವು ಚಿತ್ರ ರಚಿಸಲು ಆರಂಭಿಸಬಹುದು.
- ಅಡಾಬ್ ಇಲ್ಯುಸ್ಟ್ರೇಟರ್ನಲ್ಲಿ ಪೆನ್ ಟೂಲ್, ಸ್ವಚೆಸ್, ಮೆಷ್ ಟೂಲ್ ಮತ್ತು ಇಮೇಜ್ ಟ್ರೇಸ್ ಇತ್ಯಾದಿ ಹಲವು ಆಯ್ಕೆಗಳಿವೆ. ಇದರಿಂದ ಅಡಾಬ್ ಇಲ್ಯುಸ್ಟ್ರೇಟರ್ನಲ್ಲಿ ವೇಗವಾಗಿ ಮತ್ತು ಸರಳವಾಗಿ ನೀವು ಚಿತ್ರ ಬಿಡಿಸಬಹುದಾಗಿದೆ.
ಅಡಾಬ್ ಇಲ್ಯುಸ್ಟ್ರೇಟರ್ನಲ್ಲಿ ನೀವು ಏನೆಲ್ಲ ಮಾಡಬಹುದು?
ಬ್ಯಾನರ್ಗಳನ್ನು ರಚಿಸಬಹುದು. ಅಂಕೆಗಳು ಅಥವಾ ಅಕ್ಷರಗಳ ವಿನ್ಯಾಸ ಮಾಡಬಹುದು. ಮದುವೆ ಅಥವಾ ಇತರೆ ಆಮಂತ್ರಣ ಪತ್ರ ವಿನ್ಯಾಸ ಮಾಡಬಹುದು. ವಿವಿಧ ವೆಬ್ಸೈಟ್ಗಳಿಗೆ ಬೇಕಾದ ಸುಂದರ ಚಿತ್ರಗಳನ್ನು ಇದರಲ್ಲಿ ರಚಿಸಬಹುದು. ನಿಮಗೆ ಬೇಕಾದ ಡ್ರಾಯಿಂಗ್ಗಳನ್ನೂ ಇದರಲ್ಲಿ ರಚಿಸಿಕೊಳ್ಳಬಹುದು.
ಅಡಾಬ್ ಇಲ್ಯುಸ್ಟ್ರೇಟರ್ ಪ್ರಯೋಜನಗಳು
- ಇದರಲ್ಲಿ ಕೆಲವು ರೆಡಿಮೇಡ್ ಟೂಲ್ಗಳಿದ್ದು, ವಿವಿಧ ಶೇಪ್ಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ.
- ಯಾವುದೇ ಗಾತ್ರದ ಬ್ಯಾನರ್ಗಳನ್ನು ರಚಿಸಬಹುದು. ಅಂದರೆ, ಕಡಿಮೆ ಗಾತ್ರದ ಬ್ಯಾನರ್ನಿಂದ ಹಿಡಿದು, ದೊಡ್ಡ ಗಾತ್ರದ ಫ್ಲೆಕ್ಸ್ಗಳನ್ನೂ ಇದರ ಮೂಲಕ ರಚಿಸಬಹುದು.
- ಒಂದೇ ಪ್ಲಾಟ್ಫಾರ್ಮ್ನಲ್ಲಿ ಚಿತ್ರಗಳನ್ನು ಇಂಪೋರ್ಟ್ ಮಾಡಿಕೊಳ್ಳುವುದು, ಎಡಿಟ್ ಮಾಡುವುದು, ಮಾಡಿಫೈ ಮಾಡುವುದು ಮಾಡಬಹುದು.
- ಇದು ಇತರೆ ಅಡಾಬ್ ಪ್ರಾಡಕ್ಟ್ಗಳ ಜೊತೆ ಸುಲಭವಾಗಿ ಹೊಂದಾಣಿಕೆಯಾಗುತ್ತದೆ. ಹೀಗಾಗಿ ಅಡಾಬ್ ಫೋಟೊಶಾಪ್ ಸೇರಿದಂತೆ ವಿವಿಧ ಅಡಾಬ್ ಟೂಲ್ಗಳ ಜೊತೆ ಇದನ್ನು ಬಳಸಬಹುದು.
ಅಡಾಬ್ ಇಲ್ಯುಸ್ಟ್ರೇಟರ್ನಲ್ಲಿ ಇರಬೇಕಾದ ಕೌಶಲ್ಯಗಳು
ಅಡಾಬ್ ಇಲ್ಯುಸ್ಟ್ರೇಟರ್ನಲ್ಲಿ ನೀವು ಎಕ್ಸ್ಪರ್ಟ್ ಆಗಬೇಕಿದ್ದರೆ ಯಾವುದೇ ವಿಶೇಷ ಸ್ಕಿಲ್ಸ್ ನಿಮ್ಮಲ್ಲಿ ಇರಬೇಕೆಂದು ಇಲ್ಲ. ಅಲ್ಪಾವಧಿಯಲ್ಲಿಯೇ ನೀವು ಅಡಾಬ್ ಇಲ್ಯುಸ್ಟ್ರೇಟರ್ನಲ್ಲಿ ಪರಿಣತಿ ಪಡೆಯಬಹುದಾಗಿದೆ. ನಿಮ್ಮಲ್ಲಿ ಕೊಂಚ ಫೋಟೊಗ್ರಾಫಿಕ್ ಸ್ಕಿಲ್ಸ್ ಇದ್ದರೆ ಪ್ರಯೋಜನಕ್ಕೆ ಬರಬಹುದು. ಜೊತೆಗೆ ಪೇಂಟಿಂಗ್ ಮತ್ತು ಡ್ರಾಯಿಂಗ್ ಅಭ್ಯಾಸವಿದ್ದರೆ ನೀವು ಅಡಾಬ್ನಲ್ಲಿ ಅದ್ಭುತವಾಗಿರುವುದನ್ನು ಸೃಷ್ಟಿಸಬಹುದು.
- ಬಹುತೇಕ ಎಲ್ಲಾ ಮಾರ್ಕೆಟಿಂಗ್ ಕಂಪನಿಗಳಿಗೆ ಈಗ ಅಡಾಬ್ ಇಲ್ಯುಸ್ಟ್ರೇಟರ್ನ ಅವಶ್ಯಕತೆಯಿದೆ.
- ಈಗಿನ ವೆಬ್ ಟ್ರೆಂಡಿಂಗ್ನಲ್ಲಿ ಇನ್ಫೋಗ್ರಾಫಿಕ್ಸ್, ಲೊಗೊ, ಉತ್ಪನ್ನಗಳನ್ನು ಅಂದವಾಗಿ ವಿನ್ಯಾಸ ಮಾಡಬೇಕಿದೆ. ಹೀಗಾಗಿ ಗ್ರಾಫಿಕ್ ಡಿಸೈನರ್ಗಳಿಗೆ ಬಹುಬೇಡಿಕೆಯಿದೆ.
- ಅಮೇಜಾನ್, ಫ್ಲಿಪ್ಕಾರ್ಟ್ನಂತಹ ಕಂಪನಿಗಳು ಪ್ರತಿದಿನ ತಮ್ಮ ಉತ್ಪನ್ನಗಳನ್ನು ಅಪ್ಲೋಡ್ ಮಾಡುತ್ತಿರಬೇಕು. ಉತ್ಪನ್ನಕ್ಕೆ ಸಂಬಂಧಪಟ್ಟಂತೆ ಚಿತ್ರಗಳನ್ನು, ವಿನ್ಯಾಸಗಳನ್ನು ರೂಪಿಸಲು ಅವರಿಗೆ ಸಾಕಷ್ಟು ಗ್ರಾಫಿಕ್ಸ್ ಡಿಸೈನರ್ಗಳ ಅವಶ್ಯಕತೆ ಬೀಳುತ್ತದೆ. ಸಣ್ಣ ಇ-ಕಾಮರ್ಸ್ ಕಂಪನಿಗಳಿಗೂ ಅಡಾಬ್ ಇಲ್ಯುಸ್ಟ್ರೇಟರ್ಗಳ ಅವಶ್ಯಕತೆ ಇರುತ್ತದೆ.
ಪ್ರತಿಭೆಗಳಿಗೆ ಅತ್ಯುತ್ತಮ ವೇದಿಕೆ
ಇದೊಂದು ಸಾಫ್ಟ್ವೇರ್ ಆಗಿದ್ದರೂ, ಇಲ್ಲಿ ಜನರು ತಮ್ಮ ಪ್ರತಿಭೆಯ ಮೂಲಕ ಎಂತಹ ಅದ್ಭುತವನ್ನು ಬೇಕಾದರೂ ಸೃಷ್ಟಿಸಬಹುದಾಗಿದೆ. ನೀವು ಈ ಟೂಲ್ ಮೂಲಕ ಅದ್ಭುತ ಗ್ರಾಫಿಕ್ಸ್ಗಳನ್ನು ರಚಿಸಿ ಪ್ರದರ್ಶನಕ್ಕೆ ಇಡಬಹುದು. ಅಂತಹ ನಿಮ್ಮ ಪ್ರಾಜೆಕ್ಟ್ಗಳನ್ನು ನೋಡಿ ದೊಡ್ಡದೊಡ್ಡ ಕಂಪನಿಗಳು ಕೈತುಂಬಾ ವೇತನದ ಆಫರ್ಗಳನ್ನು ನೀಡಬಹುದು. ಫ್ರಿಲ್ಯಾನರ್ ಆಗಿಯೂ ಕಾರ್ಯನಿರ್ವಹಿಸಬಹುದು. ನಿಮ್ಮದೇ ಸ್ವಂತ ಗ್ರಾಫಿಕ್ ಡಿಸೈನಿಂಗ್ ಆಫೀಸ್ ತೆರೆಯಬಹುದು. ನೀವೇ ಗ್ರಾಫಿಕ್ ಡಿಸೈನಿಂಗ್ ಕಲಿಸುವ ಟೀಚರ್ ಆಗಬಹುದು.
ನೀವು ಬೇರೆ ಸಾಫ್ಟ್ವೇರ್ನಲ್ಲಿ ಕೆಲವು ಕಾರ್ಯಗಳನ್ನು ಮಾತ್ರ ಮಾಡಬಹುದು. ಆದರೆ, ಅಡಾಬ್ ಇಲ್ಯುಸ್ಟ್ರೇಟರ್ ಎನ್ನುವುದು ಡಿಸೈನಿಂಗ್ಗೆ ಸಂಬಂಧಪಟ್ಟಂತೆ ನೂರಾರು ಟೂಲ್ಗಳನ್ನು ಒಳಗೊಂಡಿರುವ ಒಂದು ಸಾಫ್ಟ್ವೇರ್ ಆಗಿದೆ.
ಯಾರು ಕಲಿಯಬಹುದು?
ಅಡಾಬ್ ಇಲ್ಯುಸ್ಟ್ರೇಟರ್ ಕಲಿಕೆಗೆ ನಿಮಗೆ ಇಂತಿಷ್ಟು ವಿದ್ಯಾಭ್ಯಾಸ ಇರಬೇಕು ಎಂಬ ನಿಯಮವಿಲ್ಲ. ಆಸಕ್ತಿಯಿರುವ ಯಾರೂ ಬೇಕಾದರೂ ಈ ಕೋರ್ಸ್ ಮಾಡಬಹುದು. ನೀವು ಎಸ್ಎಸ್ಎಲ್ಸಿ ಪಾಸಾಗಿದ್ದರೂ, ಫೇಲ್ ಆಗಿದ್ದರೂ ಈ ಕೋರ್ಸ್ ಮಾಡಬಹುದು. ನೀವು ಉದ್ಯೋಗದಲ್ಲಿದ್ದರೂ ಈ ಕೋರ್ಸ್ ಕಲಿಯಬಹುದು. ನೀವು ಬೇರೆ ವೃತ್ತಿಯಿಂದ ನಿವೃತ್ತಿಯಾಗಿದ್ದರೂ ಈ ಕೋರ್ಸ್ ಕಲಿಯಬಹುದು. ಇಲ್ಲಿ ಕಲಿಯಲು ಬೇಕಾಗಿರುವುದು ನಿಮ್ಮ ಶಿಕ್ಷಣ, ವಯಸ್ಸು, ಅಂತಸ್ತು ಅಲ್ಲ. ಬೇಕಿರುವುದು ಆಸಕ್ತಿಯಷ್ಟೇ.
ಬಾಲ್ಕ್ ವಿಜಯನಗರದಲ್ಲಿ ಅಡಾಬ್ ಇಲ್ಯುಸ್ಟ್ರೇಷನ್ ಕಲಿಯಲು ಬಯಸಿದರೆ ವಾಟ್ಸ್ಅಪ್ ಮಾಡಿ.