ಈಗಿನ ಟೆಕ್ ಜಗತ್ತಿನಲ್ಲಿ ಕಂಪ್ಯೂಟರ್ ಸಾಮಾನ್ಯ ಜ್ಞಾನವನ್ನು ಹೊಂದಿರುವುದು ಅತ್ಯಂತ ಅವಶ್ಯಕ. ಕಂಪ್ಯೂಟರ್ ಸ್ಕಿಲ್ ಅನ್ನು ಈಗ ಲೈಫ್ ಸ್ಕಿಲ್ ಅಥವಾ ಅವಶ್ಯ ಜೀವನ ಕೌಶಲ್ಯ ಎನ್ನಲಾಗುತ್ತಿದೆ.
ಇತ್ತೀಚಿನ ಕೊರೊನಾ ಸಂಕಷ್ಟದ ಸಮಯವನ್ನು ನೀವು ಗಮನಿಸಿರಬಹುದು. ಸಣ್ಣ ಮಕ್ಕಳಿಗೂ ಆನ್‌ಲೈನ್ ಕ್ಲಾಸ್ ಬಂದುಬಿಟ್ಟಿದೆ. ಭವಿಷ್ಯದಲ್ಲಿ ಎಲ್ಲವೂ ಆನ್‌ಲೈನ್‌ಮಯವಾಗುವ ಸೂಚನೆ ಇದಾಗಿದೆ. ನಿಮಗೆ ಕಂಪ್ಯೂಟರ್ ಬೇಸಿಕ್ಸ್ ತಿಳಿಯದೆ ಇದ್ದರೆ ಆನ್‌ಲೈನ್ ಅಥವಾ ಆಫ್‌ಲೈನ್ ಬಿಸ್ನೆಸ್ ಮಾಡುವುದು ಕಷ್ಟವಾಗಬಹುದು. ಬಹುತೇಕ ಎಲ್ಲಾ ಉದ್ಯೋಗಗಳಿಗೂ ಕಂಪ್ಯೂಟರ್ ಕಲಿಕೆ ಅನಿವಾರ್ಯವಾಗಿಬಿಟ್ಟಿದೆ.
ಸುಮಾರು ೩೦ ವರ್ಷದ ಹಿಂದೆ ಹುಟ್ಟಿದ ಬಹುತೇಕರು ಕಂಪ್ಯೂಟರ್ ಬಗ್ಗೆ ತಿಳಿದಿದ್ದಾರೆ. ಅದಕ್ಕೆ ಮೊದಲು ಜನಿಸಿದ ಕೆಲವರು ಇನ್ನೂ ಕಂಪ್ಯೂಟರ್ ಬಗ್ಗೆ ಅಪ್‌ಡೇಟ್ ಆಗದೆ ಇರಬಹುದು. ಅಂತವರು ತಮ್ಮ ವಯಸ್ಸಿನ ಕುರಿತು ಆಲೋಚಿಸಿದೆ ಕಂಪ್ಯೂಟರ್ ಬೇಸಿಕ್ಸ್ ಕಲಿಯುವುದು ಒಳ್ಳೆಯದು. ಈಗಿನ ಜಗತ್ತಿನಲ್ಲಿ ಕೇವಲ ಐಟಿ ಉದ್ಯೊಗಿಗಳಿಗೆ, ಐಟಿ ವಿದ್ಯಾರ್ಥಿಗಳಿಗೆ ಮಾತ್ರ ಅವಶ್ಯ ವಿಷಯವಾಗಿ ಉಳಿದಿಲ್ಲ. ಕೃಷಿ, ಪರಿಸರ, ರಾಜಕೀಯ ಎಲ್ಲದಕ್ಕೂ ಕಂಪ್ಯೂಟರ್ ಅಗತ್ಯವಾಗಿದೆ.
ಭವಿಷ್ಯವಿರುವುದು ಕಂಪ್ಯೂಟರ್‌ನಲ್ಲಿ ಎಂದರೆ ಸುಳ್ಳಾಗದು. ಕಂಪ್ಯೂಟರ್, ಇಂಟರ್‌ನೆಟ್, ಟೆಲಿಕಾಂ, ವೆಬ್ ಸಂಬಂಧಿತ ತಂತ್ರಜ್ಞಾನಗಳು, ಇ ಕಾಮರ್ಸ್, ಇ ಕಲಿಕೆ, ಮನೆಯ ಆಟೋಮೇಷನ್, ಬಿಸ್ನೆಸ್ ಆಟೋಮೇಷನ್, ಸೋಷಿಯಲ್ ಮೀಡಿಯಾ, ಇಂಟರ್‌ನೆಟ್ ಆಫ್ ಥಿಂಗ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಕ್ಲೌಡ್ ಕಂಪ್ಯೂಟಿಂಗ್, ೩ಡಿ ಪ್ರಿಂಟಿಂಗ್ ಇವೆಲ್ಲ ಭವಿಷ್ಯದಲ್ಲಿ ನಮ್ಮೊಂದಿಗೆ ಇರುವಂತದ್ದು.
ನಿಮಗೆ ಕಂಪ್ಯೂಟರ್ ಅಗತ್ಯವಿರಲಿ, ಇಲ್ಲದೆ ಇರಲಿ, ನೀವು ಬೇಸಿಕ್ಸ್ ಕಂಪ್ಯೂಟರ್ ಕಲಿಯುವುದು ಒಳ್ಳೆಯದು. ಕಂಪ್ಯೂಟರ್ ಸಾಕ್ಷರತೆ ಎನ್ನುವುದು ಈಗಿನ ಕಾಲದ ಅವಶ್ಯಕತೆ. ಇಂಟರ್‌ನೆಟ್ ಎನ್ನುವುದು ಕಂಪ್ಯೂಟರ್‌ನ ಮಗುವಿದ್ದಂತೆ.
ಕಂಪ್ಯೂಟರ್ ಕೆಲಸ ಮಾಡುವ ವಿವಿಧ ಸ್ಥರಗಳು
- ಹಾರ್ಡ್ ವೇರ್- ಬಿಡಿಭಾಗಗಳು,
- ಸಾಫ್ಟ್ ವೇರ್ ಅಥವಾ ಪ್ರೋಗ್ರಾಂಸ್ – ತಂತ್ರಾಂಶಗಳು,
- ಡೇಟಾ- ದತ್ತಾಂಶಗಳು,
- ಪ್ರಾಸೆಸಿಂಗ್- ಸಂಸ್ಕರಣೆ ಮತ್ತು
- ಔಟ್ ಪುಟ್ ರಿಸಲ್ಟ್- ಇನ್ ಫರ್ಮೇ ಷನ್- ಮಾಹಿತಿಯಾಗಿ ಫಲಿತಾಂಶಗಳು
- ಯೂಸರ್ಸ್ ಅಥವಾ ಬಳಕೆದಾರರು
ಕಂಪ್ಯೂಟರ್ ಬಗ್ಗೆ ನಿಮಗೆ ತಿಳಿದಿರಬೇಕಾದ ಅಂಶಗಳು
ಕಂಪ್ಯೂಟರ್ ಹಾರ್ಡ್‌ವೇರ್: ಕಂಪ್ಯೂಟರ್‌ನ ಹೊರಗಡೆ ಮತ್ತು ಒಳಗಡೆ ಯಾವುದೇ ರೀತಿಯ, ಕಣ್ಣಿಗೆ ಕಾಣುವ ಬಿಡಿಭಾಗಗಳು ಮತ್ತು ಜೋಡಣೆಗಳು.
ಹಾರ್ಡ್‌ವೇರ್ ಭಾಗಗಳು: ಮಾನಿಟರ್, ಮೌಸ್, ಕೀಬೋರ್ಡ್, ಪ್ರಿಂಟರ್, ಸಿಪಿಯು ಒಳಗೆ ಇರುವ ಮದರ್ ಬೋರ್ಡ್, ಎಲ್ಲಾ ರೀತಿಯ ಚಿಪ್‌ಗಳು, ರಾಮ್, ಪ್ರೊಸೆಸರ್ ಇವೆಲ್ಲ ಹಾರ್ಡ್‌ವೇರ್ ಭಾಗಗಳು.
ಫೆರಿಫೆರಲ್ಸ್: ಪ್ರಿಂಟರುಗಳು , ಸ್ಕ್ಯಾನರ್ ಗಳು , ಮೋಡೆಂಗಳು , ಮತ್ತು ಇತರೆ ಉಪಕರಣಗಳು
ಇನ್‌ಪುಟ್ ವಸ್ತು: ಕೀಬೋರ್ಡ್ , ಮೌಸ್ , ಮೈಕ್ರೋಫೋನ್ , ಸ್ಕ್ಯಾನರ್ , ವೆಬ್ ಕ್ಯಾಮೆರಾ
ಔಟ್‌ಪುಟ್: ಮಾನಿಟರ್ , ಪ್ರಿಂಟರ್ , ಸ್ಪೀಕರ್ , ಹೆಡ್ ಫೋನ್ ಇತ್ಯಾದಿ.
ಸಿಪಿಯು: ಕಂಟ್ರೋಲ್ ಯೂನಿಟ್ ಮತ್ತು ಅರಿತ್ ಮ್ಯಾಟಿಕ್ ಅಂಡ್ ಲಾಜಿಕ್ ಯೂನಿಟ್ ಎರಡನ್ನೂ ಸೇರಿಸಿ ಒಟ್ಟಾಗಿ ಸೆಂಟ್ರಲ್ ಪ್ರೋಸೆಸಿಂಗ್ ಯೂನಿಟ್ ಎಂದು ಕರೆಯಲಾಗುತ್ತದೆ.
ಯು.ಎಸ್.ಬಿ – ಯುನಿವರ್ಸಲ್ ಸೀರಿಯಲ್ ಬಸ್ ( ಇದನ್ನು ಮೌಸ್ , ಮೋಡೆಮ್ , ಕೀಬೋರ್ಡ್ ಅಥವಾ ಪ್ರಿಂಟರ್ ನಂತಹ ಬಾಹ್ಯಸಾಧನಗಳನ್ನು ಕಂಪ್ಯೂಟರಿಗೆ ಜೋಡಿಸಲು ಬಳಸಲಾಗುತ್ತದೆ).
ಕಂಪ್ಯೂಟರ್ ಆಧುನಿಕ ತಂತ್ರಜ್ಞಾನದ ಅದ್ಭುತವಾಗಿದೆ. ಇಂದಿನ ಜಗತ್ತಿನಲ್ಲಿ, ಕಂಪ್ಯೂಟರ್ ಬಹಳ ಅವಶ್ಯಕವಾಗಿದೆ. ಗಣಕವು ಎಲೆಕ್ಟ್ರಾನಿಕ್ ಸಾಧನವಾಗಿದ್ದು, ಡೇಟಾವನ್ನು ಪಡೆಯುತ್ತದೆ, ಸೂಚನೆಗಳ ಗುಂಪಿನ ಪ್ರಕಾರ ಡೇಟಾವನ್ನು ಪ್ರಕ್ರಿಯೆಗೊಳಿಸುತ್ತದೆ, ಡೇಟಾವನ್ನು ಉಳಿಸುತ್ತದೆ ಮತ್ತು ಅಪೇಕ್ಷಿತ ಔಟ್ಪುಟ್ ನೀಡುತ್ತದೆ. ವಿವಿಧ ಕಾರ್ಯಗಳನ್ನು ನಿರ್ವಹಿಸಲು ಕಂಪ್ಯೂಟರ್ ಅನ್ನು ಬಳಸಬಹುದು. ಡೇಟಾ ಸಂಗ್ರಹಣೆ ಮತ್ತು ಸಂಸ್ಕರಣೆಯು ಕಂಪ್ಯೂಟರ್‌ನಿಂದ ನಡೆಸಲ್ಪಡುವ ಪ್ರಮುಖ ಕಾರ್ಯಗಳಾಗಿವೆ.
ನೀವು ವಿದ್ಯಾರ್ಥಿಯಾಗಿರಬಹುದು. ಉದ್ಯೋಗಿಯಾಗಿರಬಹುದು. ಗೃಹಿಣಿಯಾಗಿರಬಹುದು. ಯಾರೂ ಬೇಕಾದರೂ ಕಂಪ್ಯೂಟರ್ ಬೇಸಿಕ್ಸ್ ಕೋರ್ಸ್ ಕಲಿಯಬಹುದು. ಕಂಪ್ಯೂಟರ್ ಬೇಸಿಕ್ಸ್ ಕಲಿಯಲು ಈಗಲೇ ವಿಜಯನಗರ ಬಾಲ್ಕ್ ಅನ್ನು ಸಂಪರ್ಕಿಸಿ.